ಕಿರುಹೊತ್ತಿಗೆ ಬಿಡುಗಡೆ

ಹುಬ್ಬಳ್ಳಿ,ಮಾ24: ಕಳೆದ 10ವರ್ಷದಲ್ಲಿ ಶಾಸಕ ಪ್ರಸಾದ ಅಬ್ಬಯ್ಯ ಅವರು ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡಿ, 1300ಕೋಟಿ ರೂ. ಅನುದಾನದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ಮಾದರಿ ಕ್ಷೇತ್ರವನ್ನಾಗಿ ಪರಿವರ್ತಿಸಲು ಅವಿರತವಾಗಿ ಶ್ರಮಿಸಿದ್ದಾರೆ ಎಂದು ಧಾರವಾಡ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಅಲ್ತಾಫ್ ಹಳ್ಳೂರ ಅವರು ಹೇಳಿದರು.
ನಗರದ ಡಿಸಿಸಿ ಕಚೇರಿಯಲ್ಲಿ ಪೂರ್ವ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ 10ವರ್ಷದಲ್ಲಿ ಕೈಗೊಳ್ಳಲಾದ ಅಭಿವೃದ್ಧಿ ಕಾರ್ಯಗಳ ಕಿರುಹೊತ್ತಿಗೆಯನ್ನು ಬಿಡುಗಡೆ ಮಾಡಿ ಮಾತನಡಿದ ಅವರು, ಉತ್ತರ ಕರ್ನಾಟಕದಲ್ಲೇ ಅತೀ ಹೆಚ್ಚು ಸ್ಲಂ ಪ್ರದೇಶ ಹೊಂದಿರುವ ಪೂರ್ವ ಕ್ಷೇತ್ರದಲ್ಲಿ 15ವರ್ಷಗಳ ಹಿಂದೆ ಕಾಲಿಡಲೂ ಆಗದಂತ ಅತ್ಯಂತ ದಯನೀಯ ಪರಿಸ್ಥಿತಿ ಇತ್ತು. ರಸ್ತೆ, ಚರಂಡಿ ಸೇರಿದಂತೆ ಮೂಲಸೌಕರ್ಯಕ್ಕೆ ಆದ್ಯತೆ ನೀಡಿ, ಕ್ಷೇತ್ರದ ಚಹರೆ ಬದಲಾಯಿಸಿದ್ದಾರೆ. ಅಬ್ಬಯ್ಯ ಅವರು ಹತ್ತು ವರ್ಷಗಳಲ್ಲಿ ಮಾಡಿದ ಸಾಧನೆ ಗಮನಾರ್ಹ. ಇಂದು ಬಿಡುಗಡೆಯಾಗಿರುವ ಪುಸ್ತಕದಲ್ಲಿ ಕ್ಷೇತ್ರದ ಪ್ರಮುಖ ಮತ್ತು ಮಹತ್ತರ ಅಭಿವೃದ್ಧಿಗಳನ್ನು ಮಾತ್ರ ಮುದ್ರಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮೆಹಮೂದ್ ಕೂಳೂರು, ಅಕ್ಕಮ್ಮ ಕಂಬಳಿ, ಚೇತನಾ ಲಿಂಗದಾಳ, ಪ್ರಸನ್ನ ಮಿರಜಕರ್, ವಾಕರಸಾ ಸಂಸ್ಥೆ ಮಾಜಿ ಅಧ್ಯಕ್ಷರಾದ ಸದಾನಂದ ಡಂಗನವರ, ಸೇವಾದಳ ರಾಜ್ಯ ಮಹಿಳಾ ಘಟಕದ ಅಧ್ಯಕ್ಷರಾದ ಸರೋಜಾ ಹೂಗಾರ, ಸೇವಾದಳ ರಾಜ್ಯ ಪ್ರಧಾನ ಕಾರ್ಯದರ್ಶಿ ಸಮದ ಗುಲಬರ್ಗಾ, ಧಾರವಾಡ ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ನವೀದ್ ಮುಲ್ಲಾ, ಜಿಲ್ಲಾ ಸೇವಾದಳ ಅಧ್ಯಕ್ಷರಾದ ಡಿ.ಎಂ. ದೊಡ್ಡಮನಿ, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾದ ಇನಾಯತ್‍ಖಾನ್ ಪಠಾಣ, ಜಿಲ್ಲಾ ಎಸ್ಸಿ ಘಟಕದ ಅಧ್ಯಕ್ಷರಾದ ಬಸವರಾಜ ಬೆಣಕಲ್, ಜಿಲ್ಲಾ ವೈದ್ಯಕೀಯ ಘಟಕದ ಅಧ್ಯಕ್ಷರಾದ ಡಾ. ಆನಂದಕುಮಾರ, ಇಂಟೆಕ್ ಜಿಲ್ಲಾಧ್ಯಕ್ಷ ಶಾರುಖ್ ಮುಲ್ಲಾ, ಮುಖಂಡರಾದ ವಸಂತ ಲದವಾ, ಕುಮಾರ ಕುಂದನಹಳ್ಳಿ, ಸುಧಾ ಮಣಿಕುಂಟ್ಲಾ, ವೀರಣ್ಣ ಹಿರೇಹಾಳ, ಶ್ರೀನಿವಾಸ ಬೆಳದಡಿ, ಲತೀಫ್ ಶರಬತ್‍ವಾಲೆ, ಸೈಯದ್ ಸಲಿಂ ಮುಲ್ಲಾ ಮೊದಲಾದವರು ಇದ್ದರು.