ಕಿರುಸಾಲ ಯೋಜನೆ: ಜಿಲ್ಲೆಗೆ 2ನೇ ಸ್ಥಾನದಲ್ಲಿ ಹೊಸಪೇಟೆ ನಗರಸಭೆ

ಹೊಸಪೇಟೆ, ಡಿ.24: ಪ್ರಧಾನ ಮಂತ್ರಿ ಆತ್ಮನಿರ್ಭರ ಯೋಜನೆ ಅಡಿಯಲ್ಲಿ ಬೀದಿ ಬದಿ ವ್ಯಾಪಾರಸ್ಥರಿಗೆ ನೀಡುವ ಕಿರುಸಾಲ ಯೋಜನೆಯಲ್ಲಿ ಹೊಸಪೇಟೆ ನಗರಸಭೆಯು 2262 ಅರ್ಜಿಗಳನ್ನು ಪೋರ್ಟಲ್ ಅಲ್ಲಿ ದಾಖಲಿಸಿ ಜಿಲ್ಲೆಯಲ್ಲಿ 2ನೇ ಸ್ಥಾನ ಪಡೆದಿದೆ.
ಆತ್ಮನಿರ್ಭರ ಯೋಜನೆ ಅಡಿಯಲ್ಲಿ ನಗರಸಭೆ ವ್ಯಾಪ್ತಿಗೆ ಒಳಪಟ್ಟು ಜನಸಂಖ್ಯೆಯ ಒಂದು ಭಾಗದಷ್ಟು ಬೀದಿಬದಿ ವ್ಯಾಪಾರಿಗಳಿಗೆ ಕಿರುಸಾಲ ಒದಗಿಸಲು ಕೇಂದ್ರ ಸರ್ಕಾರದ ಸೂಚನೆಯಿತ್ತು. ಅದರಂತೆ ನಿಗದಿಪಡಿಸಿದ ಗುರಿಗೆ ಅನುಗುಣವಾಗಿ ಶೇ.100ಕ್ಕಿಂತ ಹೆಚ್ಚಿನ ಅರ್ಜಿಗಳನ್ನು PM SVANidhi ಪೋರ್ಟಲ್ ಅಲ್ಲಿ ದಾಖಲಿಸಿ ಅರ್ಹ ಫಲಾನುಭವಿಗಳಿಗೆ ಕಿರುಸಾಲಕ್ಕಾಗಿ ಸೌಲಭ್ಯ ಒದಗಿಸಿದ್ದು, ಈ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳು ಉತ್ತಮವಾದ ಕಾರ್ಯನಿರ್ವಹಿಸಿ ಅರ್ಹ ಫಲಾನುಭವಿಗಳಿಗೆ ಸಾಲಸೌಲಭ್ಯವನ್ನು ಒದಗಿಸಿ ಯೋಜನೆಯನ್ನು ಪೂರ್ಣಪರ್ಮಾಣದಲ್ಲಿ ಅನುಷ್ಠಾನಗೊಳಿಸಿ ಯಶಸ್ವಿಗೊಳಿಸಲು ಪ್ರಶಂಸಾ ಪತ್ರ ನೀಡಿದೆ.
ಸಲ್ಲಿಕೆಯಾದ ಅರ್ಜಿಗಳು 2262
ಸ್ವೀಕೃತ ಅರ್ಜಿಗಳು 1580ಕಿರುಸಾಲಕ್ಕೆ ಅರ್ಹಗೊಂಡ ಅರ್ಜಿಗಳು 1573
ಸಾಲ ಮಂಜೂರುಗೊಂಡ ಅರ್ಜಿಗಳು 1171
ಸಾಲ ನೀಡುವ ಬ್ಯಾಂಕ್ ಶಾಖೆಗಳು 358
ಮಂಜೂರಾದ ಒಟ್ಟು ಸಾಲ 1.17 ಕೋಟಿ.

ನಗರಸಭೆಯ ಗುರಿ 2062ನ್ನೂ ಮೀರಿ ಹೆಚ್ಚಿನ ಅರ್ಜಿಗಳು ಸಲ್ಲಿಕೆಯಾಗಿದ್ದು, ಸದ್ಯಕ್ಕೆ ಬ್ಯಾಂಕುಗಳು 1171 ಅರ್ಜಿಗಳಿಗೆ ಸಾಲಸೌಲಭ್ಯವನ್ನು ಒದಗಿಸಿದ್ದು, ಉಳಿದ ಅರ್ಜಿಗಳನ್ನು ಪರಿಶೀಲಿಸಿ ಸಾಲ ಒದಗಿಸಬೇಕಿದೆ.
-ಎ ರವಿಕುಮಾರ್
ಸಮುದಾಯ ಸಂಘಟನಾ ಅಧಿಕಾರಿ