ಕಿರುತೆರೆ ನಟಿ ಪವಿತ್ರ ಅಂತ್ಯಕ್ರಿಯೆ

ಬೆಂಗಳೂರು,ಮೇ.೧೩- ರಸ್ತೆ ಅಪಘಾತದಲ್ಲಿ ಮೃತಪಟ್ಟ ಕಿರುತೆರೆ ನಟಿ ಪವಿತ್ರಾ ಜಯರಾಮ್ ಅವರ ಅಂತ್ಯಕ್ರಿಯೆ ಮಂಡ್ಯದ ಉಮ್ಮಡಹಳ್ಳಿಯಲ್ಲಿ ಒಕ್ಕಲಿಗರ ಸಂಪ್ರದಾಯದಂತೆ ನಡೆದಿದೆ.
ಪವಿತ್ರಾ ಅವರ ಅಂತ್ಯಕ್ರಿಯೆಯ ವೇಳೆ ಸಹನಟ-ನಟಿಯರು , ಕಿರುತೆರೆಯ ಕಲಾವಿದರು, ಸಹನಟ ಚಂದ್ರಶೇಖರ್ ಲಕ್ಷ್ಮೀ ಬಾರಮ್ಮ ಖ್ಯಾತಿಯ ಚಂದುಗೌಡ ಕೂಡ ಮುಂತಾದವರು ಉಪಸ್ಥಿತರಿದ್ದರು.
ಪವಿತ್ರಾ ಅವರು ಬೆಂಗಳೂರಿನಿಂದ ಹೈದರಾಬಾದ್‌ಗೆ ತೆರಳುತ್ತಿದ್ದ ಕಾರು ನಿನ್ನೆ (ಮೇ ೧೨) ಆಂಧ್ರಪ್ರದೇಶದ ಕರ್ನೂಲ್ ಬಳಿ ಅಪಘಾತಕ್ಕೀಡಾಗಿದೆ.
ಪವಿತ್ರ ಪ್ರಯಾಣಿಸುತ್ತಿದ್ದ ಕಾರು, ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ಪುಡಿಯಾಗಿದೆ.
ಪವಿತ್ರಾ ತೆಲುಗು ಕಿರುತೆರೆಯಲ್ಲಿ ಮಿಂಚುತ್ತಿದ್ದರೂ ಮೂಲತಃ ಕನ್ನಡಿಗರು, ಮಂಡ್ಯದಲ್ಲಿ ಮನೆಯಿದೆ, ಕುಟುಂಬಸ್ಥರು ಇಲ್ಲಿಯೇ ಇದ್ದಾರೆ ಎನ್ನಲಾಗಿದೆ.
ಹನಕೆರೆ ಗ್ರಾಮದವರಾಗಿದ್ದ ಪವಿತ್ರ ತನ್ನ ಸೋದರ ಸಂಬಂಧಿ ಉಮ್ಮಡಹಳ್ಳಿಯ ಶಿವಕುಮಾರ್ ರನ್ನ ಮದುವೆಯಾಗಿದ್ದರು.