ಕಿರುತೆರೆಯಿಂದ ಅಪ್ಪು ಅಮರ ನಮನ ಆಯೋಜನೆ

ಬೆಂಗಳೂರು, ನ.22- ಕರ್ನಾಟಕ ಟೆಲಿವಿಷನ್ ಅಸೋಸಿಷೇಯನ್ ವತಿಯಿಂದ ಇದೇ ,28 ರಂದು ಅಗಲಿದ ನಟ ಪುನೀತ್ ರಾಜ್ ಕುಮಾರ್ ಸ್ಮರಣಾರ್ಥ,” ಅಪ್ಪು ಅಮರ” ಕಾರ್ಯಕ್ರಮ ಆಯೋಜಿಸಲಾಗಿದೆ.

ಪುನೀತ್ ನಮನ ಕಾರ್ಯಕ್ರಮದ ಹಿನ್ನೆಲೆಯಲ್ಲಿ 28ರಂದು ಕಿರುತೆರೆಯ ಎಲ್ಲ ಧಾರಾವಾಹಿಗಳ ಚಿತ್ರೀಕರಣ ಸ್ಥಗಿತಗೊಳಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ನಿರ್ಮಾಣ ಸಂಸ್ಥೆಯ ಮುಖ್ಯಸ್ಥರಿಗೆ ಮನವಿ ಮಾಡಿರುವುದಾಗಿ ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ನ ಅಧ್ಯಕ್ಷ ಶಿವಕುಮಾರ್ ತಿಳಿಸಿದ್ದಾರೆ.

ಕಿರುತೆರೆ ವತಿಯಿಂದ ಆಯೋಜಿಸಿರುವ” ಅಪ್ಪು ಅಮರ” ನಮನ ಕಾರ್ಯಕ್ರಮಕ್ಕೆ ರಾಜ್ ಕುಟುಂಬದ ಸದಸ್ಯರನ್ನು ಟೆಲಿವಿಷನ್ ಅಸೋಸಿಯೇಷನ್ ಇಂದು ಭೇಟಿ ಮಾಡಿ ಆಹ್ವಾನ ನೀಡಿದೆ.

ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಅಧ್ಯಕ್ಷ ಶಿವಕುಮಾರ್ ನೇತೃತ್ವದಲ್ಲಿ ಪದಾಧಿಕಾರಿಗಳ ತಂಡ ಹಿರಿಯ ನಟರಾದ ಹಾಗೂ ಪುನೀತ್ ಅವರ ಸಹೋದರರಾದ ಶಿವ ರಾಜಕುಮಾರ್, ರಾಘವೇಂದ್ರ ರಾಜಕುಮಾರ್ ಸೇರಿದಂತೆ ಕುಟುಂಬದ ಸದಸ್ಯರನ್ನು ಆಹ್ವಾನ ನೀಡಿದ್ದಾರೆ.

ಇದೆ 28 ರಂದು ಜಯನಗರದ ಎಚ್ಎನ್ ಕಲಾಕ್ಷೇತ್ರದಲ್ಲಿ ಪುನೀತ್ ರಾಜಕುಮಾರ್ ನುಡಿನಮನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಶಿವಕುಮಾರ್ ತಿಳಿಸಿದ್ದಾರೆ.