ಕಿರಿ ಕಿರಿ ಮಾಡುವ ಮಕ್ಕಳನ್ನು ದೂಷಿಸಿ ದೂರದಿರಿ


ಸಂಜೆವಾಣಿ ವಾರ್ತೆ
ಸಂಡೂರು: ಮೇ: 22:: ತಾಲೂಕಿನ ಬಾಲ ಚೈತನ್ಯ ಆರೈಕೆ ಕೇಂದ್ರಕ್ಕೆ ವಿಮ್ಸ್ ನ ಮಕ್ಕಳ ತಜ್ಞ ಡಾ.ಹೈದರ್ ಅಲಿ ಅವರು ಅಪೌಷ್ಟಿಕ ಮಕ್ಕಳ ಅನುಸರಣಾ ಆರೋಗ್ಯ ತಪಾಸಣೆ ವೇಳೆ ಮಕ್ಕಳ ತಾಯಂದಿರೊಂದಿಗೆ ಮಾತನಾಡುತ್ತಾ ಹಠ ಹಿಡಿದು ಕಿರಿ ಕಿರಿ ಮಾಡುತ್ತಿದ್ದರೆ ಮಗುವಿಗೆ ಅಪೌಷ್ಟಿಕತೆ ಅಲ್ಲದೇ ನಾನಾ ಕಾರಣಗಳು ಇರಬಹುದು ಇಂತಹ ಸಂದರ್ಭಗಳಲ್ಲಿ ಈ ಮಕ್ಕಳು ಇಷ್ಟೇ ಏನೇ ಸಮಾದಾನ ಮಾಡಿದರೂ ಸುಮ್ಮನಾಗುವುದಿಲ್ಲ ಎಂದು ನಿರ್ಲಕ್ಷ್ಯ ಮಾಡದಿರಿ ಗಂಜಿ, ಹಣ್ಣಿನ ರಸ, ಓ.ಆರ್.ಎಸ್ ಇತ್ಯಾದಿ ಕೊಟ್ಟು ಸಮಾದಾನ ಮಾಡ ಬೇಕು, ವೈದ್ಯರು ಸೂಚಿಸಿದ ಸಲಹೆ ಮೇರೆಗೆ ಔಷಧಿಗಳನ್ನು ತಪ್ಪದೇ ಕೊಡಬೇಕು, ಹಾಗೇ ಎಲ್ಲಾ ಪೋಷಕಾಂಶಗಳು ದೊರೆಯುವ ಹಾಗೆ ನೋಡಿಕೊಳ್ಳ ಬೇಕು, ಹೆಚ್ಚಿನ ಕಾಳಜಿ ವಹಿಸಿ ಆಟ ಚಟುವಟಿಕೆಗಳಲ್ಲಿ ತೊಡಗಿಸಿ ಕೊಂಡು ಸದಾ ಲವಲವಿಕೆಯಿಂದ ಇರುವಂತೆ ಮಾಡಿ, ಮಕ್ಕಳಆರೈಕೆಸಹಒಂದುಕಲೆಯಾಗಿದೆ, ಆರೋಗ್ಯವಂತಮಕ್ಕಳನ್ನಾಗಿದೇಶದಕೊಡುಗೆಯಾಗಿನೀಡಿಎಂದು ಸಲಹೆ ನೀಡಿದರು, 
   ಈ ಸಂದರ್ಭದಲ್ಲಿ ಚೋರುನೂರು ವೈದ್ಯಾಧಿಕಾರಿ ಡಾ.ಅಕ್ಷಯ್ ಶಿವಪುರ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಮಹಿಳಾ ಮೇಲ್ವಚಾರಕಿ ಎಮ್.ಎಮ್ ಭಜಂತ್ರಿ, ಎ.ಪಿ.ಕುಂಬಾರ್, ಗೀತಾ, ಮಹೇಶ್, ಫಾರ್ಮಸಿ ಅಧಿಕಾರಿ ದೀಪಾ, ಶುಶ್ರೂಷಕಿ ನಾಗಮ್ಮ, ಅಂಗವಾಡಿ ಕಾರ್ಯಕರ್ತೆ ಯಶೋಧ, ದೊಡ್ದ ಬಸಮ್ಮ, ಶಕುಂತಲಾ, ನೀಲಮ್ಮ, ಸುನಂದ, ಮಕ್ಕಳ ತಾಯಂದಿರು ಉಪಸ್ಥಿತರಿದ್ದರು.