ಕಿರಿಯ ಸಾಹಿತಿಗಳಿಗೆ ಮುಕ್ಕುಂದಿಮಠ ಆದರ್ಶ- ಡಾ.ನಾಗರಾಜ

ಸಿಂಧನೂರು.ಸೆ.೦೪-ಡಾ.ಎಂ ಕಲಬುರ್ಗಿ ಯವರ ಪರಮ ಶಿಷ್ಯರಾದ ಶಾಶ್ವತ ಸ್ವಾಮಿ ಮುಕ್ಕುಂದಿಮಠ ೮೦.ರ ಇಳಿ ವಯಸ್ಸಿನಲ್ಲಿ ಸಂಶೊಧನೆ ಮಾಡುವ ಮೂಲಕ ದೇವರ ಗುಡಿ ಶರಣ ಚಿಕ್ಕಯ್ಯ ಪಂಡಿತರ ಕುರಿತು ಶಾಸನಗಳ ಮರು ಓದು ಕೃತಿ ಬರೆದಿರುವುದು ನಮ್ಮೆಲ್ಲರಿಗೂ ಸಂತೋಷ ತಂದಿದೆ ಎಂದು ಅಕ್ಕ ಮಹಾದೇವಿ ವಿಶ್ವ ವಿದ್ಯಾಲಯದ ಸ್ನಾತಕೋತ್ತರ ಕೇಂದ್ರದ ಸಂಯೋಜಕರಾದ ಡಾ. ಎಂ.ನಾಗರಾಜ ಹೇಳಿದರು.
ಅವರು ನಗರದ ಸರ್ಕಾರಿ ನೌಕರ ಭವನದಲ್ಲಿ ಪಂಪ ಪ್ರಕಾಶನ. ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು. ವಚನ ಸಾಹಿತ್ಯ ಪರಿಷತ್ತು ಮಹಿಳಾ ಘಟಕ. ಹುಳಿಯಮೇಶ್ವರ ಧೇವಸ್ತಾನ ಅಭಿವೃದ್ಧಿ ಸಂಘ ದೇವರ ಗುಡಿ ಇವರ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಪ್ರೊ. ಶಾಶ್ವತ ಸ್ವಾಮಿ ಮುಕ್ಕುಂದಿಮಠ ಯವರ ದೇವರ ಗುಡಿಯ ಶರಣ ಚಿಕ್ಕಯ್ಯಪಂಡಿತ ಕುರಿತು ಬರೆದ ಶಾಸನಗಳ ಮರು ಓದು ಕೃತಿ ಯನ್ನು ಲೋಕಾರ್ಪಣೆ ಗೊಳಿಸಿ ಮಾತನಾಡಿದ ಅವರು ಮುಕುಂದಿಮಠ ಅವರು ಸುಮಾರು ೪೦ ಕೃತಿಗಳನ್ನು ಹೊರತಂದಿದ್ದಾರೆ ಎಂದರು.
ಶಾಶ್ವತ ಸ್ವಾಮಿಯವರನ್ನು ಎರಡನೇಯ ಚಿದಾನಂದ ಮೂರ್ತಿ ಎಂದರೆ ತಪ್ಪಾಗಲಾರದು ಅವರು ಕಿರಿಯ ಸಾಹಿತಿಗಳಿಗೆ ಮಾದರಿಯಾಗಿದ್ದಾರೆ ಅವರು ನಮ್ಮ ಬಾಗದಲ್ಲಿ ಇರದೆ ದಕ್ಷಿಣ ಕನ್ನಡ ಬಾಗದಲ್ಲಿ ಇದರೆ ಇಷ್ಟೋತ್ತಿಗೆ ಪ್ರಸಿದ್ದಿ ಪಡೆದು ನಾಡಿನ ಸಾಹಿತಿ ಯಾಗುತ್ತಿದ್ದರು ಅವರು ಕೃತಿ ಗಳನ್ನು ನಾವೆಲ್ಲರು ಓದುವ ಮೂಲಕ ಅವರ ಜ್ಞಾನ ಭಂಡಾರ ವನ್ನು ಎಲ್ಲರಿಗೂ ತಿಳಿಸಿ ಅವರನ್ನು ನಾಡಿಗೆ ಪರಿಚಯ ಮಾಡುವರು ನಮಲ್ಲರ ಜವಾಬ್ದಾರಿಯಾಗಿದೆ ಎಂದರು.
ಡಾ.ಶರಬಸಪ್ಪ ಕೊಲ್ಕಾರ. ಡಾ.ಚನ್ನಬಸಯ್ಯ ಹಿರೇಮಠ. ಎಸ್. ಶರಣಗೌಡ ಗೌಡ. ಬೀಮಪ್ಪ ಶಂಬೋಜಿ ಡಿ.ಎಚ್ ಕಂಬಳಿ. ಮಧುಮತಿ ದೇಶಪಾಂಡೆ ಸರ್ಕಾರಿ ನೌಕರ ಸಂಘದ ತಾಲುಕಾ ಅಧ್ಯಕ್ಷ ರಾದ ಚಂದ್ರಶೇಖರ ಹಿರೇಮಠ. ದೇವಿರಮ್ಮ ಹನುಮಂತ ಬೇರಗಿ.ಹಿರಿಯ ಸಾಹಿತಿ ಜಾನಿಸಾಬ ಸೇರಿದಂತೇ ಇತರರು ವೇದಿಕೆಯ ಮೇಲೆ ಇದ್ದರು.
ಉಪನ್ಯಾಸಕ ಬಸವರಾಜ ನಾಯಕ ಕಾರ್ಯಕ್ರಮ ನಿರೂಪಣೆ. ಸುಸ್ಮಿತ ಸ್ವಾಗತ ಮಾಡಿದರು. ರಾಗ ಪ್ರಿಯ ಎಂಬ ಮಗು ಆಕರ್ಷಕವಾಗಿ ಜಾನಪದ ನೃತ್ಯ ಪ್ರದರ್ಶನ ಮಾಡಿದಳು ಇದೆ ಸಂದರ್ಭದಲ್ಲಿ ಶಾಶ್ವತ ಸ್ವಾಮಿ ಮುಕುಂದಿಮಠ ದಂಪತಿಗಳಿಗೆ ಸಾಹಿತಿಗಳು ಕವಿಗಳು ಪತ್ರಕರ್ತರು ಸೇರಿದಂತೇ ಇತರರು ಸನ್ಮಾನಿಸಿ ಗೌರವಿಸಿದರು.