ಕಿರಿಯ ಪ್ರಾಥಮಿಕ ಶಾಲೆಗೆ ಶಿಕ್ಷಕರನ್ನು ನೇಮಿಸಲು ಮನವಿ

ಸಂಡೂರು:ಮಾ:22 ದೇವಗಿರಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಕಮತೂರು ಗ್ರಾಮದ ಮುಖಂಡರಾದ ಅಜ್ಜಪ್ಪ, ಮಾರೇಣ್ಣ, ಈರಲಿಂಗಪ್ಪ, ಪೆನ್ನಪ್ಪ, ಮಲ್ಲೇಶಪ್ಪ, ಮಲ್ಲಿಸ್ವಾಮಿ, ತಿಮ್ಮಣ್ಣ, ಮಲಿಯಣ್ಣ,ಕುಮಾರಸ್ವಾಮಿ, ತಿಪ್ಪೇಸ್ವಾಮಿ, ಅಂಗಡಿಕುಮಾರಸ್ವಾಮಿ, ತಹಶೀಲ್ದಾರ್ ಎಚ್.ಜಿ. ರಶ್ಮಿಯವರ ಜೊತೆ ಗ್ರಾಮ ವಾಸ್ಥವ್ಯ ಸಂದರ್ಭದಲ್ಲಿ ಮಾತನಾಡಿ ಕಿರಿಯ ಪ್ರಾಥಮಿಕ ಶಾಲೆಗೆ ಅಗತ್ಯವಿರುವಷ್ಟು ಶಿಕ್ಷಕರನ್ನು ನೇಮಿಸಬೇಕು. ಎ.ಎನ್.ಎಮ್. ಕೇಂದ್ರದಲ್ಲಿ ಅಗತ್ಯ ಸಿಬ್ಬಂದಿ ನೇಮಿಸಬೇಕು. ಡಿ.ಎಂ.ಎಫ್. ಅನುದಾದನಲ್ಲಿ ಗ್ರಾಮದ ಯುವಜನರಿಗೆ ಸ್ವಯಂ ಉದ್ಯೋಗಕ್ಕೆ ಅವಕಾಶ ಕಲ್ಪಿಸಬೇಕು. ಸಿ.ಸಿ. ರಸ್ತೆ ಒಳಚರಂಡಿ ವ್ಯವಸ್ಥೆ ಕಲ್ಪಿಸಬೇಕು. ಗ್ರಾಮಕ್ಕೆ ಸೂಕ್ತ ಸಾರಿಗೆ ವ್ಯವಸ್ತೆ ಕಲ್ಪಿಸಬೇಕು. ಒಳಚರಂಡಿ ವ್ಯವಸ್ಥೆ ಕಲ್ಪಿಸಬೇಕು ಇಂಥಹ ಹಲವಾರು ಬೇಡಿಕೆಗಳ ಅಳಲನ್ನ ಗ್ರಾಮಸ್ಥರು ತಹಶೀಲ್ದಾರರ ಮುಂದೆ ಇಟ್ಟರು.
ಗಣಿ ಧೂಳಿನಿಂದ ಗ್ರಾಮಸ್ಥರು ತೊಂದರೆ ಅನುಭವಿಸುತ್ತಿದ್ದು, ಇದರ ನಿಯಂತ್ರಣಕ್ಕಾಗಿ ರಸ್ತೆಗೆ ನಿಯಮಿತವಾಗಿ ನೀರು ಹಾಕುತ್ತಿಲ್ಲ. ಕುಡಿಯುವ ನೀರು ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ. ಸರ್ವೆ ಸೆಟ್‍ಲ್‍ಮೆಂಟ್ ಮಾಡಿಕೊಡಿ ಗ್ರಾಮದಲ್ಲಿ 100 ರಿಂದ 150 ಅವಿಭಕ್ತ ಬಡ ಕುಟುಂಬಗಳಿವೆ. ಖಾಲಿ ನಿವೇಶನ ಹಾಗೂ ವ್ಯವಸ್ಥೆಯನ್ನ ಕಲ್ಪಿಸಿಕೊಡಿ ಹೀಗೆ ಹಲವಾರುಬೇಡಿಕೆಗಳಿಗೆ ಸಂಡೂರಿನ ತಹಶೀಲ್ದಾರರಿಗೆ ನಾರಾಯಣಪುರ ಗ್ರಾಮಸ್ಥರು ಮನವಿ ಸಲ್ಲಿಸಿದರು.
ಸೂಕ್ತ ಕ್ರಮ ತೆಗೆದುಕೊಳ್ಳುವೆ.: ದೇವಗಿರಿ, ಕಮತೂರು, ನಾರಾಯಣಪುರ ಗ್ರಾಮದವರ ಅಳಲನ್ನ ವಾಸ್ಥವ್ಯ ಸಂದರ್ಭದಲ್ಲಿ ಆಲಿಸಿದ ತಾಲ್ಲೂಕು ದಂಡಾಧಿಕಾರಿಗಳು ನಾರಾಯಣಪುರ ಗಣಿ ಭಾಗದ ಮತ್ತು ಗುಡ್ಡಗಳಿಂದ ಆವೃತ್ತವಾಗಿರುವ ಗ್ರಾಮವಾಗಿದೆ. ಇಲ್ಲಿ ಎಲ್ಲಾ ಇಲಾಖೆಯ ಅಧಿಕಾರಿಳು ಆಗಮಿಸಿದ್ದಾರೆ. ನಿಮ್ಮ ಅಹ್ವಾನಗಳಿಗೆ ಸೂಕ್ತ ಪರಿಹಾರ ಕ್ರಮ ತೆಗೆದುಕೊಳ್ಳುತ್ತೆನೆ ಎನ್ನುವ ಬರವಸೆಯನ್ನ ಗ್ರಾಮದ ಮುಖಂಡರಿಗೆ ತಹಶೀಲ್ದಾರರು ನೀಡಿದರು.