ಕಿರಿಕ್ ಕೀರ್ತಿ ಮೇಲೆ ಹಲ್ಲೆ

ಬೆಂಗಳೂರು, ಡಿ.೩-ಫೋಟೋ ತೆಗೆದುಕೊಂಡ ಅಭಿಮಾನಿಯೊಂದಿಗೆ ಬಿಗ್‌ಬಾಸ್ ಸ್ಫರ್ಧಿ ಕಿರಿಕ್ ಕೀರ್ತಿ ಕಿರಿಕ್ ಮಾಡಿಕೊಂಡಿದ್ದು ಪ್ರಕರಣ ಸದಾಶಿವನಗರ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಸದಾಶಿವನಗರದ ಹ್ಯಾಮರ್ಡ್ ಪಬ್‌ನಲ್ಲಿ ನಿನ್ನೆ ತಡರಾತ್ರಿ ಪಕ್ಕದ ಟೇಬಲ್‌ನಲ್ಲಿದ್ದ ವ್ಯಕ್ತಿ ಕಿರಿಕ್ ಕೀರ್ತಿ ಅವರ ಫೋಟೋ ತೆಗೆದುಕೊಂಡಿದ್ದಾರೆ.
ಅಭಿಮಾನದಿಂದ ಫೊಟೋ ತೆಗೆದುಕೊಂಡಿದ್ದ ವ್ಯಕ್ತಿಯ ಮೇಲೆ ಕೀರ್ತಿ ಫೋಟೋ ಏಕೆ ತೆಗೆದೆ ಎಂದು ದರ್ಪ ತೋರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದರಿಂದ ತಪ್ಪಾಗಿದೆ ಎಂದು ಅಭಿಮಾನಿ ಕ್ಷಮೆ ಕೇಳಿದರೂ ಸಹ ಬಿಡದೇ ಕಿರಿಕ್ ಕೀರ್ತಿ ಬಾಯಿಗೆ ಬಂದ ರೀತಿ ಮಾತನಾಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ಈ ಹಿನ್ನಲೆಯಲ್ಲಿ ರೋಸಿಹೋದ ವ್ಯಕ್ತಿ ಕಿರಿಕ್ ಕೀರ್ತಿ ಮೇಲೆ ಬಿಯರ್ ಬಾಟಲ್‌ನಿಂದ ಹಲ್ಲೆ ಮಾಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಘಟನೆ ಸಂಬಂಧ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ