ಕಿರಾಣಿ ಅಂಗಡಿಯಲ್ಲಿ ಸಂಗ್ರಹಿಸಿಟ್ಟ 7680 ರೂ ಮೌಲ್ಯದ ಮದ್ಯವಶ

ಚಿಂಚೋಳಿ,ಎ.11: ತಾಲೂಕಿನ ಚಿಂದಾನೂರ ತಾಂಡಾದಲ್ಲಿ ಕಿರಾಣಿ ಅಂಗಡಿಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟ 7680 ರೂ ಮೌಲ್ಯದ ಮದ್ಯವನ್ನು ಅಬಕಾರಿ ದಾಳಿಯಲ್ಲಿ ವಶಪಡಿಸಿಕೊಳ್ಳಲಾಗಿದೆ.ಬದ್ದು ತಂದೆ ಲಕ್ಷ್ಮಣ ಪವಾರ ಆರೋಪಿ.
ಅಬಕಾರಿ ಇಲಾಖೆಯವರು ತಪಾಸಣೆ ಮಾಡುವ ಸಂದರ್ಭದಲ್ಲಿ 90 ಎಂ ಎಲ್ ದ 192 ಯು,ಎಸ್ ವಿಸ್ಕಿ ತುಂಬಿದ ಪ್ಲಾಸ್ಟಿಕ ಬಾಟಲಗಳು (ಒಟ್ಟು ಮದ್ಯ 17.280 ಲೀ) ವಶಪಡಿಸಿಕೊಂಡು ದಾಳಿ ಕಾಲಕ್ಕೆ ತಲೆಮರೆಸಿಕೊಂಡ ಆರೋಪಿಯ ವಿರುದ್ಧ ಚಿಂಚೋಳಿ ವಲಯದ ಅಬಕಾರಿ ಉಪ ನಿರೀಕ್ಷಕರು-2 ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಪ್ರಥಮ ವರ್ತಮಾನ ವರದಿ ಸಲ್ಲಿಸಿದ್ದಾರೆ ಎಂದು ಚಿಂಚೋಳಿ ವಲಯ ಅಬಕಾರಿ ನಿರೀಕ್ಷಕ ರಾಹುಲ್ ಎಸ್ ನಾಯಕ ತಿಳಿಸಿದ್ದಾರೆ.