ಕಿರಾಣಿ ಅಂಗಡಿಯಲ್ಲಿ ಮದ್ಯ ಮಾರಾಟ

ಸಿಂಧನೂರು ನ.೨೨ ತಾಲೂಕಿನ ಗೋರೆಬಾಳ ಕ್ಯಾಂಪ್ ನಲ್ಲಿ ತರಕಾರಿ ಮಾರಾಟ ಮಾಡುವ ರೀತಿಯಲ್ಲಿ ಹಾಡು ಹಗಲೆ ಕಿರಾಣಿ ಅಂಗಡಿಯ ಮುಂದೆ ಮಧ್ಯ ಮಾರಾಟ ಮಾಡುತ್ತಿದ್ದು ತಕ್ಷಣ ಕ್ರಮ ಜರುಗಿಸಬೇಕೆಂದು ಜನತೆ ಒತ್ತಾಯಿಸಿದ್ದಾರೆ.
ಗೋರೆಬಾಳ ಕ್ಯಾಂಪ್ ನ ಸಾಯಿಬಾಬಾ ದೇವಸ್ಥಾನದ ಪಕ್ಕದಲ್ಲಿನ ಕಿರಾಡಿ ಅಂಗಡಿಯ ಮುಂದೆ ಮದ್ಯ ಮಾರಾಟ ಮಾಡಲಾಗುತ್ತಿದೆ.ಅಮರೇಶ ಎಂಬ ಯುವಕನು ಪ್ರತಿ ಎರಡು ದಿನಕ್ಕೊಮ್ಮೆ ಮಾರಾಟ ಮಾಡುತ್ತಾನೆ ಎಂದು ಆರೋಪಿಸಲಾಗಿದೆ.ಒಂದು ಬೈಕ್ ಮೇಲೆ ಮದ್ಯ ಬಾಕ್ಸಗಳನ್ನು ಇಟ್ಟುಕೊಂಡು ಹಾಡು ಹಗಲೇ ರಾಜ ರೋಷವಾಗಿ ಅನಧಿಕೃತವಾಗಿ ಪ್ರತಿ ಅಂಗಡಿಗಳಿಗೆ ಮಾರಾಟ ಮಾಡುತ್ತಾನೆಂದು ತಿಳಿದುಬಂದಿದೆ.
ಇವರ ವಿರುದ್ಧ ಅಬಕಾರಿ ಇಲಾಖೆಯ ಅಧಿಕಾರಿಗಳು ತಕ್ಷಣ ಜರುಗಿಸಿ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಡ ಹಾಕಬೇಕಿದೆ.