ಕಿರಣ್ ಕುಮಾರ್ ಎಸ್ಸಿ ಜಾತಿ ಪ್ರಮಾಣ ಪತ್ರ ರದ್ದುಪಡಿಸಿ

ಬಳ್ಳಾರಿ, ಏ.17: ವೀರಶೈವ ಜಂಗಮ ಜಾತಿಗೆ ಸೇರಿರುವ ನಗರದ ಹೆಚ್.ಎಂ.ಕಿರಣ್ ಕುಮಾರ್ ಅವರ ಬೇಡ ಜಂಗಮ ಜಾತಿ ಪ್ರಮಾಣಪತ್ರ ರದ್ದುಪಡಿಸಬೇಕೆಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಡಿ.ಜಿ.ಸಾಗರ್ ಬಣದ ಎ.ಮಾನಯ್ಯ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.
ಪರಿಶಿಷ್ಟ ಜಾತಿಗೆ ಮೀಸಲಿರುವ ಪಾಲಿಕೆಯ ಒಂದನೇ ವಾರ್ಡಿನ ಸದಸ್ಯತ್ವಕ್ಕೆ ಸ್ಪರ್ಧೆ ಬಯಸಿ ಕಿರಣ್ ಕುಮಾರ್ ನಾಮಪತ್ರ ಸಲ್ಲಿಸಿದ್ದು ಸ್ವೀಕಾರಗೊಂಡಿದೆ. ನಮ್ಮ ಜಿಲ್ಲೆಯಲ್ಲಿ ಬೇಡ ಜಂಗಮರು ಇಲ್ಲ ಅವರು ಸಲ್ಲಿಸಿರುವ ಎಸ್ಸಿ ಜಾತಿ ಪ್ರಮಾಣ ಪತ್ರ ಸೂಕ್ತವಾದುದಲ್ಲ. ಈ ಬಗ್ಗೆ ಪರಿಶೀಲನೆ ಮಾಡಬೇಕು, ಒಂದು ಕಡೆ ಅವರು ವೀರಶೈವ ವಿದ್ಯಾವರ್ಧಕ ಸಂಘದಲ್ಲಿ ವೀರಶೈವ ಜಂಗಮ ಎಂದು ಚುನಾಯಿತರಾಗುತ್ತಾರೆ. ಇತ್ತ ಬೇಡ ಜಂಗಮ ಎಂದು ರಾಜಕೀಯದಲ್ಲಿ ಸ್ಪರ್ಧೆ ಮಾಡಲು ಬಂದಿದ್ದಾರೆ. ಇವರಿಗೆ ಎಲ್ಲಿ ಬೇಡ ಜಂಗಮ ಜಾತಿ ಪ್ರಮಾಣ ಪತ್ರ ನೀಡಿದೆ, ನೀಡಿದವರು ಯಾರು ಈ ಬಗ್ಗೆ ತನಿಖೆಯಾಗಬೇಕು, ಸದ್ಯ ಅವರ ನಾಮಪತ್ರ ತಿರಸ್ಕೃತಗೊಳಿಸಬೇಕು. ಇಲ್ಲ ಚುನಾವಣೆ ಮುಂಡೂಡಬೇಕೆಂದು ಮಾನಯ್ಯ ಅವರು ಆಗ್ರಹಿಸಿದ್ದಾರೆ.