ಕಿನ್ನರಿ ಬೊಮ್ಮಯ್ಯ ಜಾತ್ರೆ ಮಹೋತ್ಸವ

(ಸಂಜೆವಾಣಿ ವಾರ್ತೆ)
ಹುಮನಾಬಾದ್:ಸೆ.3: ತಾಲೂಕಿನ ಹಳ್ಳಿಖೇಡ (ಕೆ) ಗ್ರಾಮದ ಐತಿಹಾಸಿ ಶರಣ ಕಿನ್ನರಿ ಬೊಮ್ಮಯ್ಯನವರ 54ನೇ ಜಾತ್ರಾ ಮಹೋತ್ಸವ ಸೆ.3ರಂದು ಜರುಗಲಿದೆ ಎಂದು ಉತ್ಸವ ಸಮಿತಿ ಪದಾಧಿಕಾರಿಗಳು ತಿಳಿಸಿದರು.
ತಾಲೂಕಿನ ಹಳ್ಳಿಖೇಡ (ಕೆ) ಗ್ರಾಮದ ಶರಣ ಕಿನ್ನರಿ ಬೊಮ್ಮಯ್ಯನವರ ದೇವಸ್ಥಾನದಲ್ಲಿ , ಜಾತ್ರೆ ನಿಮಿತ್ತ ಸೆ. 3ರಂದು ಪಾದಪೂಜೆ ಹಾಗೂ ಜಾತ್ರಾ ಮಹೋತ್ಸವ ಉದ್ಘಾಟನೆ, ಸೆ.4ರಂದು ರಥೋತ್ಸವ,ಸಾಂಸ್ಕøತಿಕ ಮತ್ತು ಪಲ್ಲಕ್ಕಿ ಮೆರವಣಿಗೆ, ಸೆ. 5ರಂದು ಜಂಗೀಕುಸ್ತಿ
ಪಂದ್ಯಾವಳಿ, ಧರ್ಮ ಸಭೆ ಹಾಗೂ ಜಾನಪದ ಸಂಜೆ,ಸಂಗೀತ ಸಮಾರೋಪ, ಶಾಲಾ ಮಕ್ಕಳಿಂದ ವಚನ ನೃತ್ಯ ಸೇರಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು
ಜರುಗಲಿವೆ ಎಂದು ಮಾಹಿತಿ ನೀಡಿದರು. ಈಕಾರ್ಯಕ್ರಮದಲ್ಲಿ ಖೇಳಗಿ ಸಂಸ್ಥಾನದ ಶ್ರೀ
ಶಿವಲಿಂಗ ಸ್ವಾಮೀಜಿ, ಕಲಬುರಗಿ ಗದ್ದುಗೆ ಮಠದಚರಲಿಂಗ ಸ್ವಾಮೀಜಿ, ಹಳ್ಳಿಖೇಡ (ಕೆ) ಹಿರೇಮಠಸಂಸ್ಥಾನದ ಚರಮೂರ್ತಿ ಸಿದ್ದರಾಮ ದೇವರು, ಶಾಸಕ ಡಾ. ಸಿದ್ದು ಪಾಟೀಲ್, ಎಂಎಲ್ಸಿ ಡಾ. ಚಂದ್ರಶೇಖರ ಪಾಟೀಲ್, ಎಂಎಲ್ಸಿ ಭೀಮರಾವ ಪಾಟೀಲ್, ಮಾಜಿ ಶಾಸಕ ಸುಭಾಷ ಕಲ್ಲೂರ್, ಕೇಂದ್ರಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಸೇರಿ ವಿವಿಧ ಮಠಾಧಿಶರು.ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಭಾಗವಹಿಸಬೇಕು ಎಂದು ಮನವಿ
ಮಾಡಿದರು.