ಕಿತ್ತೂರ ಕ್ರಾಂತಿ ಐತಿಹಾಸಿಕ ನಾಟಕ ಪ್ರದರ್ಶನ


(ಸಂಜೆವಾಣಿ ವಾರ್ತೆ)
ಕುರುಗೋಡು. ಜ,18: ಬ್ರಿಟಿಷರ ವಿರುದ್ಧ ರಣಕಹಳೆ ಮೊಳಗಿಸಿದ ವೀರ ರಾಣಿ ಕಿತ್ತೂರು ಚನ್ನಮ ಅವರ ಆದರ್ಶವನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕು ಎಂದು ರಂಗ ಬಸವೇಶ್ವರ ಕಲಾ ಟ್ರಸ್ಟ್ ಕಾರ್ಯದರ್ಶಿ ಹುಲುಗಯ್ಯ ನಾಯಕರ್ ಹೇಳಿದರು.
ಪಟ್ಟಣ ಸಮೀಪದ ವದ್ದಟ್ಟಿ ಗ್ರಾಮದಲ್ಲಿ ಮಂಗಳವಾರ ಸಂಜೆ ರಂಗ ಬಸವೇಶ್ವರ ಕಲಾ ಟ್ರಸ್ಟ್ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಯೋಜನೆ ಅಡಿಯಲ್ಲಿ ಹಮ್ಮಿಕೊಂಡಿದ್ದ ಸಂಸ್ಕೃತಿಕ ರಂಗೋತ್ಸವದಲ್ಲಿ ಅವರು ಮಾತನಾಡಿದರು.
ವೀರ ರಾಣಿ ಕಿತ್ತೂರು ಚನ್ನಮಳ ಜೀವನ ಮತ್ತು ಹೋರಾಟ ನಾಡಿನ ಪ್ರತಿಯೊಬ್ಬ ಮಹಿಳೆಗೂ ಸ್ಫೂರ್ತಿದಾಯಕವಾಗಿದೆ. ಮಹಿಳೆಯರು ಕೂಡ ಸ್ವಾವಲಂಬಿಗಳಾಗಿ ಶೋಷಣೆ ಹಾಗೂ ಅನ್ಯಾಯದ ವಿರುದ್ಧ ಹೋರಾಟ ಮಾಡುವಂತಹ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು’ ಎಂದುರು.
ಸರ್ಕಾರಿ ಪ್ರೌಢ ಶಾಲಾ ಎಸ್‌.ಡಿ.ಎಂ.ಸಿ ಅಧ್ಯಕ್ಷ ಯರ್ರಿಸ್ವಾಮಿ ಮಾತನಾಡಿ, ವೀರರಾಣಿ ಕಿತ್ತೂರ ಚನ್ನಮ್ಮನ ತ್ಯಾಗ, ಬಲಿದಾನ ಮತ್ತು ಸಾಹಸಗಳ ಕುರುತು ಇಂದಿನ ಯುವ ಪಿಳಿಗೆಗೆ ಪ್ರೇರಣೆ ಆಗುವಂತೆ  ನಮ್ಮ ಗ್ರಾಮದಲ್ಲಿ ನಾಟಕ ಪ್ರದರ್ಶನ ಮಾಡಿರುವುದು ತುಂಬ ಖುಷಿಯ ವಿಷಯ ಎಂದರು.
ವದ್ದಟ್ಟಿ ಗ್ರಾಮದ ಬಿ.ಕರಿಬಸಪ್ಪ, ಚೌಡಕಿ ಬಸಪ್ಪ ಮತ್ತು ಮಲ್ಲಪ್ಪ ತಂಡದವರಿಂದ ಸುಗಮ ಸಂಗೀತ, ಇದೇ ಗ್ರಾಮದ ದರೂರು ಯರ್ರಿಸ್ವಾಮಿ, ಬಿ.ಲೋಕೇಶ್ ಮತ್ತು ಎಂ.ಕರಿಬಸಪ್ಪ ತಂಡದವರಿಂದ ಬಯಲಾಟದ ಹಾಡುಗಳು, ಕಾವೇರಿ ಮತ್ತು ತಂಡದವರಿಂದ ನೃತ್ಯ, ಟಿ.ಗುರುದೇವ ಮತ್ತು ತಂಡದವರಿಂದ ಕಿತ್ತೂರ ಕ್ರಾಂತಿ ಐತಿಹಾಸಿಕ ನಾಟಕ ಅದ್ದೂರಿಯಾಗಿ ಪ್ರದರ್ಶನ ಗೊಂಡಿತು.
ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯ ನಿಂಗಪ್ಪ, ಮಾಜಿ ಗ್ರಾ. ಪಂ ಸದಸ್ಯ ಶಿವಪ್ಪ, ಸಣ್ಣ ಎರೆಪ್ಪ, ಬಿ.ಕರಿಬಸಪ್ಪ,  ಚೌಡ್ಕಿ ಬಸವ, ಮಲ್ಲಪ್ಪ, ದರೂರು ಯರ್ರಿಸ್ವಾಮಿ, ಬಿ ಲೋಕೇಶ್ ಮತ್ತು ಎಂ.ಕರಿಬಸಪ್ಪ  ಇದ್ದರು.