ಕಿತ್ತೂರ ಕಲ್ಮಠದಲ್ಲಿ ಶಿವರಾತ್ರಿ ಕಾರ್ಯಕ್ರಮ

ಚನ್ನಮ್ಮನಕಿತ್ತೂರ,ಮಾ7: ರಾಜಗುರು ಸಂಸ್ಥಾನ ಕಲ್ಮಠ ಮತ್ತು ಚುಟುಕು ಸಾಹಿತ್ಯ ಪರಿಷತ್ತು ಇವುಗಳ ಸಂಯುಕ್ತ ಆಶ್ರಯದಲ್ಲಿ ಮಾ. 8 ರಂದು ಸಾಯಂಕಾಲ 7 ಗಂಟೆಗೆ ಶಿವರಾತ್ರಿ ನಿಮಿತ್ತಉಪನ್ಯಾಸ, ಹಾಸ್ಯ ಮತ್ತು ಸಂಗೀತ ಕಾರ್ಯಕ್ರಮಗಳು ಜರುಗಲಿವೆ.
ಕಲ್ಮಠದ ಚಂದರಗಿ ಸಭಾ ಭವನದಲ್ಲಿ ನಡೆಯುವ ಕಾರ್ಯಕ್ರಮದ ಸಾನಿಧ್ಯವನ್ನು ಕಲ್ಮಠದ ಶ್ರೀ ಮಡಿವಾಳ ರಾಜಯೋಗೀಂದ್ರ ಸ್ವಾಮಿಜಿ, ನಿಚ್ಚಣಕಿಯ ಶ್ರೀ ಪಂಚಾಕ್ಷರಿ ಸ್ವಾಮಿಜಿ ವಹಿಸಲಿದ್ದಾರೆ. ಶಿವರಾತ್ರಿ ಕುರಿತು ಉಪನ್ಯಾಸ ಧಾರವಾಡದ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಪ್ರೊ. ಶೇಖರ ಸಜ್ಜನ ನೀಡಲಿದ್ದಾರೆ. ಬೆಳಗಾವಿಯ ಹಾಸ್ಯಕೂಟ ಸಂಚಾಲಕ ಮಧುಕರ ಗುಂಡೇನಟ್ಟಿ ಮತ್ತು ಖ್ಯಾತ ನಗೆ ಮಾತುಗಾರ ಪ್ರೊ.ಜಿ.ಕೆ. ಕುಲಕರ್ಣಿಯವರಿಂದ “ಶಿವರಾತ್ರಿ ಹಾಸ್ಯರಾತ್ರಿ” ಎಂಬ ವಿಶೇಷ ಕಾರ್ಯಕ್ರಮ ನಡೆಯಲಿವೆ.
ಈಶ್ವರ ಗಡಿಬಿಡಿ ಮತ್ತು ಪ್ರಲ್ಹಾದ ಶಿಗ್ಗಾಂವಿ ನೇತೃತ್ವದ ಗ್ರಾಮದೇವಿ ಭಜನಾ ಮಂಡಳಿಯವರಿಂದ ಸಂಗೀತ ಕಾರ್ಯಕ್ರಮಗಳು ಏರ್ಪಡಿಸಲಾಗಿವೆ.