ಕಿತ್ತೂರ ಉತ್ಸವದಲ್ಲಿ ದಾಸವಾಣಿ ತತ್ವಪದ

ತಾಳಿಕೋಟೆ:ಅ.26: ಕರ್ನಾಟಕ ಸರ್ಕಾರ, ಜಿಲ್ಲಾಡಳಿತ ಬೆಳಗಾವಿ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಳಗಾವಿ ಇವರ ಸಹಯೋಗದಲ್ಲಿ ಕಳೆದ ದಿ. 23 ರಂದು ನಡೆದ ಕಿತ್ತೂರ ಉತ್ಸವದ ಸಂಗೀತ ಕಾರ್ಯಕ್ರಮದಲ್ಲಿ ತಾಳಿಕೋಟೆಯ ಶ್ರೀ ಖಾಸ್ಗತೇಶ್ವರ ಸಂಗೀತ ಪಾಠ ಶಾಲೆಯ ವಿಧ್ಯಾರ್ಥಿ ಗವಾಯಿ ಮಹೇಶ ಭಂಟನೂರ ಅವರು ದಾಸವಾಣಿ ತತ್ವಪದವನ್ನು ಹಾಡಿ ಜನಮನ ರಂಜಿಸಿದ್ದಾರೆ.
ಅಂದು ಸಾಯಂಕಾಲ 8-30 ಗಂಟೆಗೆ ಕಿತ್ತೂರ ರಾಣಿ ಚೆನ್ನಮ್ಮಾ ವೇದಿಕೆ ಕೋಟೆ ಆವರಣದಲ್ಲಿ ಉದ್ಘಾಟನಾ ಸಮಾರಂಭದಲ್ಲಿ ಗವಾಯಿ ಮಹೇಶ ಭಂಟನೂರ ಅವರು ಈ ಸಂಗೀತ ಸುಧೆಯನ್ನು ಉಣಬಡಿಸಿದ್ದು ದಾಸವಾಣಿ ತತ್ವಪದ ಉತ್ತಮ ಕಂಠದಿಂದ ಮೂಡಿಬಂದಿದ್ದರಿಂದ ಗವಾಯಿ ಮಹೇಶ ಭಂಟನೂರ ಅವರನ್ನು ಜಿಲ್ಲಾಡಳಿತವು ಪ್ರಶಂಶಿಸಿ ಸನ್ಮಾನಿಸಿ ಅಭಿನಂದನಾ ಪತ್ರ ನೀಡಿ ಗೌರವಿಸಿದೆ.