ಕಿತ್ತೂರು ರಾಣಿ ಮಹಿಳಾ ಮಂಡಳದಿಂದ ಮಕ್ಕಳ ದಿನ

ಬೀದರ್:ನ.15: ನಗರದ ಲಿಡ್ಕರ್ ಕಾಲೋನಿಯಲ್ಲಿರುವ ವಿಷ್ಣುವರ್ಧನ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನ ಆಚರಿಸಲಾಯಿತು, ಈ ಸಂಬಂಧ ಮಕ್ಕಳೊಡಗೂಡಿ ಪಂಡಿತ ಜವಹರಲಾಲ ನೆಹರು ಅವರ ಭಾವಚಿತ್ರಕ್ಕೆ ಪೂಜೆ ನೆರವೇರಿಸಲಾಯಿತು.

ಪೂಜೆ ನೆರವೇರಿಸಿದ ಮಹಿಳಾ ಮಂಡಳದ ಹಿರಿಯ ಸಿಬ್ಬಂದಿ ಮನೋಹರ ಸಾಳಂಕೆ ಮಾತನಾಡಿ, ಜವಾಹರಲಾಲ್ ನೆಹರುಜಿಯವರ ಆದರ್ಶ ವ್ಯಕ್ತಿತ್ವವನ್ನು ಮಕ್ಕಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ತಿಳಿಸಿದರು.

ಒಂದು ಭವ್ಯ ರಾಷ್ಟ್ರನ ನಿರ್ಮಾಣವಾಗಬೇಕಾದರೆ, ಇಂದಿನ ಮಕ್ಕಳನ್ನು ಸತ್‍ಪ್ರಜೆಗಳಾಗಿ ಮಾಡುವ ಮೂಲಕ ಅವರಲ್ಲಿ ರಾಷ್ಟ್ರ ಪ್ರೇಮ ಬೆಳೆಸಲು ಶಿಕ್ಷಕರಾದವರು ಮುಂದೆ ಬರಬೇಕೆಂದು ಕರೆ ಕೊಟ್ಟರು,

ಶಾಲೆಯ ಸಹ ಶಿಕ್ಷಕ ಮಾರುತಿರಾವ್ ಅವರು ನೆಹರುಜಿಯವರ ರಾಷ್ಟ್ರ ಪ್ರೇಮ, ತ್ಯಾಗ ದೇಶಕ್ಕೆ ಕೊಟ್ಟ ಕೊಡುಗೆಯನ್ನು ಮಾರ್ಮಿಕವಾಗಿ ತಿಳಿಸಿದರು.

ವೇದಿಕೆ ಮೇಲೆ ಮುಖ್ಯ ಗುರುಗಳು, ಸ್ವಧಾರ ಕೇಂದ್ರದ ಸಿಬ್ಬಂದಿ ಮತ್ತು ಸಾಂತ್ವನ ಕೇಂದ್ರದ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಕಿತ್ತೂರ ರಾಣಿ ಮಹಿಳಾ ಮಂಡಳ ವತಿಯಿಂದ ಮಕ್ಕಳಿಗೆ ನೋಟ್ ಬುಕ್ ಹಾಗೂ ಪೆನ್ಸಿಲ್ ವಿತರಿಸಲಾಯಿತು.