ಬಳ್ಳಾರಿ, ಆ.15 ಬಳ್ಳಾರಿ ನಗರದ ಕಿತ್ತೂರು ರಾಣಿ ಚನ್ನಮ್ಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಅಧ್ಯಕ್ಷ ,ಸಾಹಿತಿ ಸಿದ್ದರಾಮ ಕಲ್ಮಠ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿ,ಮಹಾತ್ಮ ಗಾಂಧೀಜಿ,ಸುಭಾಷ್ ಚಂದ್ರಭೋಸ್,ಭಗತ್ ಸಿಂಗ್,ಖುದಿರಾಮ್ ಬೋಸ್,ಬಾಲಗಂಗಾಧರ್ ತಿಲಕ್,ಸರ್ದಾರ್ ವಲ್ಲಭಭಾಯಿ ಪಟೇಲ್,ಚಂದ್ರಶೇಖರ ಅಜಾದ್ ಹೀಗೆ ನೂರಾರು ದೇಶಭಕ್ತರ ಅವಿರತ ಹೋರಾಟಗಳ ಫಲದಿಂದ ದೇಶವು ಪರಕೀಯರ ಕಪಿಮುಷ್ಟಿಯಿಂದ ಪಾರಾಯಿತು.ದೇಶದ ಹಿರಿಮೆ ಗರಿಮೆಗಳ ಸ್ವಾಭಿಮಾನವು ಪ್ರತಿಯೊಬ್ಬ ಭಾರತೀಯರ ಧಮನಿಗಳಲಿ ಹರಿದಾಗ ಮಾತ್ರ ನವಭಾರತ ಸಂಕಲ್ಪವು ಸಾಕಾರಗೊಳ್ಳವದು. ಎಂದು ಅಭಿಪ್ರಾಯಪಟ್ಟರು.ಆಡಳಿತ ಮಂಡಳಿ ಸದಸ್ಯ ಅರವಿ ಶರಣಗೌಡ,ಪ್ರಾಥಮಿಕ ,ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಎಂ.ಗಿರಿಜಾ, ಕಟ್ಟೆಮ್ಮ ,ಎಸ್,ತಿಪ್ಪೇರುದ್ರ ಹಾಗೂ ಶಾಲೆಯ ಶಿಕ್ಷಕ-ಶಿಕ್ಷಕಿಯರು ,ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ವಿದ್ಯಾರ್ಥಿನಿಯರಾದ ಸುಮಲತ,ಭೂಮಿಕಾ ಸಂಗಡಿಗರು ಪ್ರಾರ್ಥಿಸಿದರು.ಸಹನಾ ಸ್ವಾಗತಿಸಿದರು,ಜೆ.ಎಂ.ಅಶ್ವಿನಿ ವಂದಿಸಿದರು.