ಕಿತ್ತೂರು ರಾಣಿ ಚೆನ್ನಮ್ಮನವರ ಬದುಕು ಯುವ ಜನಾಂಗಕ್ಕೆ ಮಾದರಿ

ಅಫಜಲಪುರ: ಅ.25:ಹೆಣ್ಣು ಮಕ್ಕಳು ಯಾವ ಕ್ಷೆ?ತ್ರದಲ್ಲೂ ಕಡಿಮೆಯಿಲ್ಲ.ಅವರು ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧನೆ ಮಾಡಬಹುದು. ಸ್ತ್ರೀಯರಿಗೆ ಅಂತಹದೊಂದು ಅಗಾಧ ಶಕ್ತಿ ಇದೆ. ಮಹಿಳೆಯರು ಉನ್ನತ ಸ್ಥಾನಗಳನ್ನು ಅಲಂಕರಿಸುವ ಮೂಲಕ ಪುರುಷರಿಗೆ ಸಮಾನವಾಗಿ ದಾಪುಗಾಲಿಡುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಎಂದು ತಹಸೀಲ್ದಾರ ಸಂಜೀವಕುಮಾರ ದಾಸರ ತಿಳಿಸಿದರು.

ಪಟ್ಟಣದ ತಹಸೀಲ್ ಕಚೇರಿಯಲ್ಲಿ ನಡೆದ ಕಿತ್ತೂರು ಚೆನ್ನಮ್ಮನವರ ಜಯಂತಿ ಅಂಗವಾಗಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ನಮ್ಮ ನಾಡು ಅನ್ಯರ ಪಾಲಾಗದೆ ನಮಗೇ ಉಳಿಯಬೇಕೆಂಬ ಗುರಿ ಇಟ್ಟುಕೊಂಡು ಹೋರಾಟ ನಡೆಸಿದ ದಿಟ್ಟ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ. ಬ್ರಿಟೀಷರಗೆ ಸಿಂಹಸ್ವಪ್ನವಾಗಿದ್ದ ಚೆನ್ನಮ್ಮನವರ ಬದುಕು, ಹೋರಾಟ ಅನನ್ಯ. ಅವರ ದೇಶ ಪ್ರೆ?ಮ ಎಲ್ಲರಿಗೂ ಅನುಕರಣೀಯವಾಗಿದ್ದು, ಪ್ರತಿ ಮನೆಯಲ್ಲೂ ರಾಣಿ ಚೆನ್ನಮ್ಮನಂತಹ ಮಹಿಳೆಯರು ಹುಟ್ಟಿಬೇಕೆಂಬ ಆಶಯ ವ್ಯಕ್ತಪಡಿಸಿದರು.

ಕೆಪಿಸಿಸಿ ಸದಸ್ಯ ಅರುಣಕುಮಾರ ಎಂ.ವೈ.ಪಾಟೀಲ್ ಮಾತನಾಡಿ, ಬರುವ ವರ್ಷದಲ್ಲೇ ಕಿತ್ತೂರು ರಾಣಿ ಚೆನ್ನಮ್ಮ ವೃತ್ತ ನಿರ್ಮಿಸಲು ಶಾಸಕರ ಗಮನಕ್ಕೆ ತರಲಾಗುವುದು. ಪರಂಗಿಯವರಿಂದ ನಮ್ಮ ನೆಲ-ಜಲ ರಕ್ಷಣೆ ಮಾಡಿದ ವಿ?ರ ಮಹಿಳೆಯಾಗಿರುವ ಕಿತ್ತೂರು ರಾಣಿ ಚೆನ್ನಮ್ಮ ಇಂದಿನ ಎಲ್ಲ ಮಹಿಳೆಯರಿಗೆ ಮಾದರಿಯಾಗಿದ್ದಾರೆ. ಅವರಲ್ಲಿದ್ದ ಛಲ, ಆತ್ಮವಿಶ್ವಾಸ, ಎದೆಗಾರಿಕೆ, ನಾಡು-ನುಡಿಯ ಮೇಲಿನ ಅಭಿಮಾನ ಎಲ್ಲವೂ ಯುವಜನಾಂಗಕ್ಕೆ ಆದರ್ಶಪ್ರಾಯವಾಗಿದೆ. ಕನ್ನಡಿಗರ ಪೌರುಷ, ಸಾಹಸ, ಸ್ವಾಭಿಮಾನವನ್ನು ಹೋರಾಟದ ಮೂಲಕ ತೋರ್ಪಡಿಸಿದರು. ನಾಡಿನ ಜನರನ್ನು ಬ್ರಿಟಿಷರ ವಿರುದ್ಧ ಹೋರಾಟಕ್ಕೆ ಹುರಿದುಂಬಿಸಿದ ಧೀರ ಮಹಿಳೆ. ಒಬ್ಬ ಮಹಿಳೆಯಾಗಿ ನಾಡಿನ ಜನರ ರಕ್ಷಣೆಗೆ, ಕನ್ನಡ ನಾಡಿನ ಉಳಿವಿಗೆ ಪ್ರಾಣವನ್ನೆ? ಒತ್ತೆ ಇಟ್ಟ ವಿ?ರಮಾತೆ ಎಂದು ಚೆನ್ನಮ್ಮನವರ ಕೊಡುಗೆ ಸ್ಮರಿಸಿದರು.

ಈ ಸಂದರ್ಭದಲ್ಲಿ ಚಂದು ದೇಸಾಯಿ, ಮಳೇಂದ್ರ ಡಾಂಗೆ, ಚಂದ್ರಶೇಖರ ಕರಜಗಿ, ಮಲ್ಲಿಕಾರ್ಜುನ ನಿಂಗದಳ್ಳಿ, ರಾಜಶೇಖರ್ ಪಾಟೀಲ್, ಎಸ್.ಎಸ್.ಪಾಟೀಲ್, ನಾನಾಗೌಡ ಅಳ್ಳಗಿ, ರಾಜಕುಮಾರ ಬಡದಾಳ, ಸುರೇಶ್ ಅವಟೆ, ಅಂಬರೀಷ್ ಬುರಲಿ, ವಿಶ್ವನಾಥ ಮಲಘಾಣ, ರವಿ ನಂದಶೆಟ್ಟಿ, ನಾಗರಾಜ್ ರಾಂಪೂರೆ, ಪುರಸಭೆ ಮುಖ್ಯಾಧಿಕಾರಿ ವಿಜಯಮಹಾಂತೇಶ ಹೂಗಾರ, ಪಶು ಸಂಗೋಪನಾ ಇಲಾಖೆ ಅಧಿಕಾರಿ ಕೆ.ಎಂ.ಕೋಟೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಸ್ವಾತಂತ್ರ್ಯ ಪೂರ್ವದಲ್ಲಿ ಮೊಟ್ಟಮೊದಲ ಬಾರಿಗೆ ಕಿತ್ತೂರು ರಾಣಿ ಚೆನ್ನಮ್ಮ ಹೋರಾಟ ನಡೆಸಿದ ಮೊದಲ ಮಹಿಳೆ. ಈ ನಾಡಿಗೆ ಅವರ ಕೊಡುಗೆ ಅಪಾರವಾಗಿದೆ. ಇಂದಿನ ಯುವ ಸಮುದಾಯಕ್ಕೆ ಕಿತ್ತೂರು ರಾಣಿ ಚೆನ್ನಮ್ಮನವರ ಆದರ್ಶಗಳು ಮಾದರಿಯಾಗಿದೆ.

-ಬಸವರಾಜ ಚಾಂದಕವಟೆ. ಅಧ್ಯಕ್ಷರು, ಶರಣ ಸಾಹಿತ್ಯ ಪರಿಷತ್, ಅಫಜಲಪುರ.