ಕಿತ್ತೂರು ಚನ್ನಮ್ಮ ಅವರ ಹೋರಾಟ, ತ್ಯಾಗ,ಬಲಿದಾನ ಸ್ಮರಿಸಿಕೊಳ್ಳೋಣ:ಮಹಾದೇವ ಮುರಗಿ

ವಿಜಯಪುರ ಅ.18: ವೀರರಾಣಿ ಕಿತ್ತೂರು ಚೆನ್ನಮ್ಮ ಅವರ ಹೋರಾಟ ನಮ್ಮೆಲ್ಲರಿಗೂ ಸ್ಪೂರ್ತಿಯಾಗಿದೆ. ಕಿತ್ತೂರು ಚನ್ನಮ್ಮ ಅವರು ಬ್ರಿಟಿಷ್ರ ವಿರುದ್ಧ ಹೋರಾಟ ನಡೆಸಿದರು. ಅವರ ಹೋರಾಟ,ತ್ಯಾಗ,ಬಲಿದಾನ ಹಾಗೂ ಅವರ ದೇಶ ಭಕ್ತಿ ಸ್ಮರಿಸಿಕೊಳ್ಳುವ ಮೂಲಕ ಗೌರವ ಸಲ್ಲಿಸೋಣ ಎಂದು ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಅವರು ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ಭಾನುವಾರ ಕಿತ್ತೂರು ಚನ್ನಮ್ಮ ಅವರ ವಿಜಯ ವೀರಜ್ಯೋತಿ ಯಾತ್ರೆಯ ರಥಕ್ಕೆ ಪುμÁ್ಪರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಿ ಮಾತನಾಡಿದರು. ಕಿತ್ತೂರ ಚನ್ನಮ್ಮ ಅವರ ಸ್ವಾತಂತ್ರ್ಯ ಹೋರಾಟದ ಕುರಿತಾಗಿ ಮಾತನಾಡಿದರು.
ಐತಿಹಾಸಿಕ ಕಿತ್ತೂರು ಉತ್ಸವವು ಇದೇ ಅಕ್ಟೋಬರ್ 23 ರಿಂದ 25 ವರೆಗೆ ಕಿತ್ತೂರಿನಲ್ಲಿ ನಡೆಯುವುದು. ಕಿತ್ತೂರು ಉತ್ಸವದ ಅಂಗವಾಗಿ ಅಕ್ಟೋಬರ್ 13 ರಂದು ಕಿತ್ತೂರು ಚನ್ನಮ್ಮಾಜಿಯವರ ವಿಜಯ ವೀರಜ್ಯೋತಿ ಯಾತ್ರೆಯು ಬೆಂಗಳೂರಿನಿಂದ ಪ್ರಾರಂಭವಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಿತ್ತೂರು ಚನ್ನಮ್ಮಾಜೀಯವರ ವಿಜಯ ವೀರಜ್ಯೋತಿ ಯಾತ್ರೆಗೆ ಚಾಲನೆ ನೀಡಿದ್ದಾರೆ ಎಂದು ಹೇಳಿದರು.
ಈ ವಿಜಯ ಜ್ಯೋತಿ ಯಾತ್ರೆಯು ಭಾನುವಾರ ಸಂಜೆ ಬಾಗಲಕೋಟೆಯಿಂದ ಜಿಲ್ಲೆಯ ಕೋಲ್ಹಾರಕ್ಕೆ ಆಗಮಿಸಿತು.ಕೋಲ್ಹಾರ ತಹಶೀಲ್ದಾರ ಅವರು ಗೌರವದಿಂದ ಬರಮಾಡಿಕೊಂಡರು.
ನಗರಕ್ಕೆ ಆಗಮಿಸಿದ ವಿಜಯ ವೀರಜ್ಯೋತಿಯನ್ನು ಬರಮಾಡಿಕೊಂಡು ವೀರ ಜ್ಯೋತಿಯ ಪೂಜಾ ಕಾರ್ಯಕ್ರಮ ಕೈಗೊಂಡು, ಕಲಾತಂಡಗಳೊಂದಿಗೆ ಮೆರವಣಿಗೆ ಮೂಲಕ ವೀರಜ್ಯೋತಿಯನ್ನು ಜಿಲ್ಲೆಯಿಂದ ಬೆಳಗಾವಿ ಜಿಲ್ಲೆಗೆ ಬೀಳ್ಕೊಡಲಾಯಿತು.
ಈ ಸಂದರ್ಭದಲ್ಲಿ ವಿಜಯಪುರದ ಉಪ ವಿಭಾಗಾಧಿಕಾರಿ ಬಸಣೆಪ್ಪ ಕಲಶೆಟ್ಟಿ, ವಿಜಯಪುರ ತಹಶೀಲ್ದಾರರಾದ ಶ್ರೀಮತಿ ಕವಿತಾ,ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಅಮರೇಶ ದೊಡಮನಿ ಸೇರಿದಂತೆ, ವಿವಿಧ ಇಲಾಖೆಯ ಅಧಿಕಾರಿ, ಸಿಬ್ಬಂದಿ, ಮುಖಂಡರಾದ ಶ್ರೀಶೈಲ್ ಬುಕ್ಕಣ್ಣಿ, ವಿಜಯ್ ಹಿರೊಳ್ಳಿ, ನಿಂಗನಗೌಡ ಸೋಲಾಪೂರ, ಸಿದ್ದು ಅವಟಿ,ಸಂದೀಪ ಇಂಡಿ,ಸದಾಶಿವ ಹಳ್ಳಿಗಿಡದ ಉಪಸ್ಥಿತರಿದ್ದರು.