ಹುಬ್ಬಳ್ಳಿ,ಅ25: ನಗರದ ಶಿರೂರ ಪಾರ್ಕ ಎರಡು ಹಾಗೂ ಮೂರನೆಯ ಹಂತದ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಡಿಯಲ್ಲಿ ವೀರ ರಾಣಿ ಕಿತ್ತೂರ ಚೆನ್ನಮ್ಮಾಜಿಯ 245 ನೇ ಜಯಂತಿ ಹಾಗೂ 200 ನೇಯ ವಿಜಯೋತ್ಸವವನ್ಮು ಆಚರಿಸಲಾಯಿತು.
ಸಂಘದ ಅಧ್ಯಕ್ಷರಾದ ಡಾ.ಮಹೇಶ ಧ. ಹೊರಕೇರಿ ಅವರು ಮಾತನಾಡುತ್ತ ವೀರ ರಾಣಿ ಕಿತ್ತೂರ ಚೆನ್ನಮ್ಮಾಜಿ ಸಾಹಸ ಧೈರ್ಯ, ಹೋರಾಟದ ಕಿಚ್ಚಿನ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು. ಇಂದಿನ ಯುವಕ ಯುವತಿಯರು ರಾಣಿ ಚೆನ್ನಮ್ಮಾಜಿಯ ಆದರ್ಶ ಗುಣಗಳನ್ನು ಅಳವಡಿಸಿಕೊಂಡು ತ್ಯಾಗ ಮನೋಭಾವವನ್ನು ಮತ್ತು ಅನ್ಯಾಯದ ವಿರುದ್ದ ಹೋರಾಟ ಮಾಡುವ ಗುಣ ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು. ಸಮಾರಂಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಶೈಲೇಶ ಹೊನ್ನಳ್ಳಿ, ಜಂಟಿ ಕಾರ್ಯದರ್ಶಿ ಎನ್ ಎಸ್ ಯತ್ನಳ್ಳಿ, ಖಜಾಂಚಿ ಪ್ರಭು ಪಾಟೀಲ, ಸದಸ್ಯರಾದ ಎಸ್ ವಿ ಹೂಗಾರ, ವಿ ಎಸ್ ವಿಭೂತಿ, ಎಸ್ ವಿ ಹಳವೂರ, ಅಭಿಷೇಕ ಹೊನ್ನಳ್ಳಿ, ಕರಣ ಹೊನ್ನಳ್ಳಿ, ವಿ ಎಸ್ ಸೊಪ್ಪಿಮಠ, ಎಸ್ ಬಿ ಬೆಳ್ಳೇರಿಮಠ, ಶಿವಕುಮಾರ ಬುರ್ಲಿ, ರಮೇಶ ಬಾಬು ಮುಂತಾದವರು ಉಪಸ್ಥಿತರಿದ್ದರು.