ಕಿತ್ತೂರು ಗ್ರಾಮದಲ್ಲಿ ಪಂಚಮಸಾಲಿ ಸಮಾಜದ ಸಭೆ

ದಾವಣಗೆರೆ.ಮಾ.೨೯; ತಾಲೂಕಿನ ಕಿತ್ತೂರು ಗ್ರಾಮದಲ್ಲಿ ಪಂಚಮಸಾಲಿ ಸಮಾಜದ ಗ್ರಾಮ ಸಭೆ,   ನಡೆಸಲಾಯಿತು. ಈ ಸಂದರ್ಭದಲ್ಲಿ ಗ್ರಾಮದ ಪಂಚಮಸಾಲಿ ಸಮಾಜದ ಎಸ್.ಎಸ್.ಎಲ್ .ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಉಪಾಧ್ಯಕ್ಷರಾದ  ಕಿತ್ತೂರು ವೀರಣ್ಣನವರು ವಹಿಸಿದ್ದರು, ಸಭೆಯ ಮುಖ್ಯ ಅತಿಥಿಗಳಾಗಿ ಪೀಠದ ಪ್ರಧಾನ ಧರ್ಮದರ್ಶಿ ಹಾಗೂ ಜಿಲ್ಲಾ  ಅಧ್ಯಕ್ಷರಾದ  ಉಮಾಪತಿ , ಜಿಲ್ಲಾ ಕಾರ್ಯಾಧ್ಯಕ್ಷರಾದ  ಬಿ. ಲೋಕೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ   ಎಸ್.ಸಿ. ಕಾಶೀನಾಥ್, ತಾಲೂಕ ಘಟಕ ಅಧ್ಯಕ್ಷರಾದ   ಎಂ.ಎಸ್. ಜಯಣ್ಣ ಬಿಸ್ಲೇರಿ, ಜಿಲ್ಲಾ ಯುವ ಘಟಕದ ಅಧ್ಯಕ್ಷರಾದ  ಕೆ. ಶಿವಕುಮಾರ್, ಎಪಿಎಂಸಿ ಅಧ್ಯಕ್ಷರಾದ.  ಎಸ್.ಕೆ. ಚಂದ್ರಶೇಖರ್, ಶ ಎಂ. ದೊಡ್ಡಪ್ಪನವರ, ಜಿಲ್ಲಾ ನೌಕರರ ಘಟಕದ ಅಧ್ಯಕ್ಷರಾದ   ಎಸ್.ಮಲ್ಲಿನಾಥ ಆಗಮಿಸಿದ್ದರು. ಈ

ಸಂದರ್ಭದಲ್ಲಿ ಪಂಚಮಸಾಲಿ ನೌಕರರ ಘಟಕದ ಕಾರ್ಯದರ್ಶಿ ಶ್ರೀಧರ್, ನಗರ ಘಟಕದ ಅಧ್ಯಕ್ಷರಾದ ಕೈದಾಳ ಶಿವಶಂಕರ್, ಎ. ವೀರಭದ್ರಪ್ಪ, ತಾಲೂಕ ಪ್ರಧಾನ ಕಾರ್ಯದರ್ಶಿಯಾದ ವಿಶ್ವನಾಥ್ ಕಾಶಿಪುರ, ಮಹಡಿ ತಿಪ್ಪೇಸ್ವಾಮಿ, ಪುಟ್ಟಪ್ಪ, ಗ್ರಾಮ ಘಟಕದ ಅಧ್ಯಕ್ಷರಾದ  ಚಂದ್ರು ಕಿತ್ತೂರು, ಹಾಗೂ ಗ್ರಾಮದ ಸಮಾಜ ಬಾಂಧವರು ಉಪಸ್ಥಿತರಿದ್ದರು.