ಕಿತ್ತೂರಿನಲ್ಲಿ ಚಿನ್ನ, ಬೆಳ್ಳಿ ವಶ


ಚನ್ನಮ್ಮನ ಕಿತ್ತೂರ,ಏ 10: ಚುನಾವಣೆ ರಂಗೇರುತ್ತಿದ್ದಂತೆ ಕ್ಷೇತ್ರದಲ್ಲಿ ಅಕ್ರಮವಾಗಿ ಹಣ, ಬೆಳ್ಳಿ, ಬಂಗಾರ, ಬಟ್ಟೆಗಳು ಸೇರಿದಂತೆ ವಿವಿಧ ವಸ್ತುಗಳ ಸಾಗಾಟ ಹೆಚ್ಚಾಗಿವೆ. ಕಿತ್ತೂರ ಪೋಲಿಸರು ಮಿಂಚಿನ ಕಾರ್ಯಾಚರಣೆ ನಡೆಸಿ ರಾಷ್ರ್ಟೀಯ ಹೆದ್ದಾರಿ 4ಕ್ಕೆ ಹೊಂದಿಕೊಂಡಿರುವ ಪಟ್ಟಣದ ಎಪಿಎಂಸಿ ಹತ್ತಿರ ಯಾವುದೇ ದಾಖಲೆಯಿಲ್ಲದೇ ಕಾರಿನಲ್ಲಿ 46.7 ಗ್ರಾಂ. ಚಿನ್ನ ಹಾಗೂ 3 ಕೆಜಿ 500 ಗ್ರಾಂ. ಬೆಳ್ಳಿಯನ್ನು (ಬೆಲೆ 4.60 ಲಕ್ಷ ರೂ.) ವಶಪಡಿಸಿಕೊಂಡಿದ್ದಾರೆ. ದಾಸ್ತಿಕೊಪ್ಪ ಗ್ರಾಮದ ನಾಗೇಶ ರುದ್ರಗೌಡ ಸಿದ್ರಾಮಣಿ ಹಾಗೂ ಶ್ರೀಕಾಂತ ಅರ್ಜುನ ರಾವಳ ಎಂಬುವವರನ್ನು ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಕಾರನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿದ್ದಾರೆ.
ಪಿಎಸ್‍ಐ ರಾಜು ಮಮದಾಪೂರ ಹಾಗೂ ಪೋಲಿಸ್ ಸಿಬ್ಬಂದಿ ದಾಳಿ ನಡೆಸಿದರು.