ಕಿತ್ತು ಕಿನಾರೆಯಾದ ರಸ್ತೆ: ಪ್ರತಿಭಟನೆ ಎಚ್ಚರಿಕೆ

ಲಕ್ಷ್ಮೇಶ್ವರ, ಜ14- ತಾಲೂಕಿನ ಹುಲ್ಲೂರು ನೆಲೋಗಲ್ಲ ಮಧ್ಯದ ಸುಮಾರು 2 ಕೀ.ಮೀ.ರಸ್ತೆ ಸಂಪೂರ್ಣ ಹಾಳಾಗಿದ್ದು ಅನೇಕ ವರ್ಷಗಳಿಂದ ಈ ರಸ್ತೆ ನಿರ್ವಹಣೆಯ ಕೊರತೆಯಿಂದ ಕಿತ್ತು ಕಿನಾರೆ ಸೇರಿದೆ.
ಹೂಲ್ಲೂರಿನಿಂದ ನೆಲ್ಲೂಗಲ್ಲ ಮಾರ್ಗವಾಗಿ ಬೆಳ್ಳಟ್ಟಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆ ಹತ್ತಾರು ವರ್ಷಗಳ ಹಿಂದೆಯೇ ನಿರ್ಮಾಣವಾಗಿದ್ದು ಅಲ್ಲಿಂದ ಇಲ್ಲಿಯವರೆಗೆ ಈ ರಸ್ತೆ ಲೋಕೋಪಯೋಗಿ ಇಲಾಖೆಯ ತಾತ್ಸಾರಕ್ಕೊಳಗಾಗಿದೆ.
ಹುಲ್ಲೂರಿನಿಂದ ಸ್ವಲ್ಪ ದೂರದಲ್ಲಿ ನಿರ್ಮಿಸಿರುವ ಸೇತುವೆ ಕುಸಿದು ರಸ್ತೆಯ ಒಂದು ಭಾಗ ಕೊಚ್ಚಿಕೊಂಡು ಹೋಗಿದೆ. ಇಲಾಖೆಯ ಗಮನಕ್ಕೆ ಬಾರದಿರುವುದು ದುರ್ದೈವದ ಸಂಗತಿಯಾಗಿದೆ.
ಅನೇಕ ವರ್ಷಗಳಿಂದಲೂ ಈ ರಸ್ತೆ ದಾಟಲು ಹರ ಸಹಾಸ ಪಡಬೇಕಾಗಿದೆ. ಕಾಟಾಚಾರಕ್ಕೆ ಇಲಾಖೆಯೂ ಅಗೊಮ್ಮೆ ಇಗೊಮ್ಮೆ ನಿರ್ವಹಣೆ ಮಾಡುತ್ತಿದ್ದು ಇದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಕುರಿತು ಗ್ರಾ.ಪಂ.ಸದಸ್ಯ ಪರಮೇಶ್ವರಗೌಡ ಪಾಟೀಲ್, ಯುವ ಮುಖಂಡರಾದ ಬಿ.ಎಂ.ಪಾಟೀಲ್, ಕಿರಣ ಸಗಣಿ ಈ ರಸ್ತೆ ಇಲಾಖೆಯ ಗಮನಕ್ಕೆ ಇದ್ದರು ಇಂದೊಂದು ಅನಾಥ ರಸ್ತೆಯಾಗಿದೆ. ಬರುವ ಮಳೆಗಾಲದೊಳಗಾಗಿ ಈ ರಸ್ತೆಯನ್ನು ಮರು ಡಾಂಬರೀಕರಣ ಮಾಡದ್ದಿದ್ದರೆ ಇಲಾಖೆಯ ಕಛೇರಿ ಮುಂದೆ ಧರಣಿ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
ಈ ಕುರಿತು ಲೋಕೋಪಯೋಗಿ ಇಲಾಖೆಯ ಸಹಾಯ ಕಾರ್ಯನಿರ್ವಾಹಕ ಇಂಜನಿಯರ ಪ್ರತ್ರಿಕ್ರಿಯಿಸಿ 3 ಕೀ.ಮೀ ರಸ್ತೆ ಸುಧಾರಣೆಗೆ 2 ಕೋಟಿ ರೂಗಳ ಕ್ರಿಯಾಯೋಜನೆ ಸಿದ್ದಪಡಿಸಿ ಅನುಮೋದನೆಗೆ ಕಳಿಸಲಾಗಿದೆ ಎಂದು ಇಲಾಖೆಯ ನರೇಂದ್ರ ಡಿ.ಬಿ. ತಿಳಿಸಿದ್ದಾರೆ.