ಕಿತ್ತಳೆ ಹಣ್ಣಿನ ಚಮತ್ಕಾರ

ಕಿತ್ತಳೆ ಹಣ್ಣು ತಿನ್ನಲು ಎಷ್ಟು ರುಚಿಕರವೋ ಆರೋಗ್ಯದ ದೃಷ್ಟಿಯಿಂದ ಅಷ್ಟೇ ಉಪಯುಕ್ತ ಫಲ. ಕಿತ್ತಳೆ ಹಣ್ಣಿನಲ್ಲಿ ವಿಟಮಿನ್ ಸಿ ಹೆಚ್ಚು ಇರುವುದರಿಂದ ರಕ್ತ ಶುದ್ಧಿ ಮಾಡುವರ ಜತೆಗೆ ಬಾಯಾರಿಕೆ ದೂರ ಮಾಡಿ ಲವಲವಿಕೆ ಹೆಚ್ಚಿಸುತ್ತದೆ.

ಗರ್ಭಿಣಿಯರು ಆರು ತಿಂಗಳ ನಂತರ ನಿತ್ಯ ಕಿತ್ತಳೆ ಹಣ್ಣು ಸೇವಿಸಿದರೆ ಹೆರಿಗೆ ಸಮಯದಲ್ಲಿ ಅನುಕೂಲ ಹೆಚ್ಚು, ಜತೆಗೆ ಆರೋಗ್ಯ ವೃದ್ಧಿಸುತ್ತದೆ.
ಕಿತ್ತಳೆ ದ್ರವರೂಪದ ಆಹಾರ. ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಆದಾಗ ಕಿತ್ತಳೆ ಹಣ್ಣಿನ ರಸ ನೀಡುವುದು ಉತ್ತಮ ಕ್ರಮ.
ಕಿತ್ತಳೆ ಹಣ್ಣಿನ ಸಿಪ್ಪೆಯಿಂದ ಗೊಜ್ಜು ಹಾಗೂ ಉಪ್ಪಿನಕಾಯಿ ತಯಾರಿಸಿ ಸೇವಿಸುವುದು ಉತ್ತಮ ಕ್ರಮ.
ಕೆಮ್ಮು ಹಾಗೂ ಸೀತ ನಿವಾರಣೆಗೆ ನಿತ್ಯ ಒಂದು ಕಪ್ ಕಿತ್ತಳೆ ಹಣ್ಣಿನ ರಸ ಹಾಗೂ ಐದು ಚಮಚ ಜೇನು ತುಪ್ಪ ಸೇರಿಸಿ ಸೇವಿಸುವುದರಿಂದ ಸಮಸ್ಯೆ ನಿವಾರಣೆ ಆಗುತ್ತದೆ.
ಕಿತ್ತಳೆ ಹಣ್ಣಿನ ಸೇವನೆಯಿಂದ ಹೃದಯ ಸಂಬಂಧಿ ರೋಗಗಳು ದೂರಾಗಲು ಸಾಧ್ಯ.

ಕಿತ್ತಳೆ, ನಿಂಬೆ, ಮೋಸಂಬಿ, ಮಾದಳ ಹಾಗೂ ಚಕ್ಕೋತ ಫಲಗಳನ್ನ ಜಿಂಜೀರ ಹಣ್ಣುಗಳೆಂದು ಕರೆಯಲಾಗುತ್ತದೆ. ಇವುಗಳಲ್ಲಿ ವಿಟಮಿನ್ ಸಿ ಹೆಚ್ಚಿರುತ್ತದೆ. ಜತೆಗೆ ಇವುಗಳ ಸಿಪ್ಪೆಯಿಂದ ಸುವಾಸನೆ ಬೀರು ತೈಲ ತಯಾರಿಸುವುದುಂಟು

ಕಿತ್ತಳೆ ಹಣ್ಣಿನ ಸಿಪ್ಪೆಯ ಎಣ್ಣೆಯು ಬ್ಯಾಕ್ಟೀರಿಯಾಗಳ ಹಾಗೂ ಇತರ ಸೂಕ್ಷ್ಮ ಜೀವಿಗಳ ಬೆಳೆವಣಿಗೆಯನ್ನು ತಡೆಗಟ್ಟುತ್ತದೆ. ಒಂದು ಲೀಟರ್ ನೀರಿನಲ್ಲಿ ಕೇವಲ ಒಂದು ಮಿಲಿ ಲೀಟರ್ ಕಿಕ್ತಳೆ ಸಿಪ್ಪೆ ಎಣ್ಣೆ ಇರುವ ದ್ರಾವಣವನ್ನು ಉಪಯೋಗಿಸಿದರೆ ಸ್ಯಾಲ್ಮೋನಲಾ ಸೇರಿದಂತೆ ಹಲವು ಬ್ಯಾಕ್ಟೀರಿಯಾಗಳ ಬೆಳೆವಣಿಗೆ ತಡೆಯಲು ಸಾಧ್ಯ ಎಂಬುದು ತಜ್ಞರ ಅಭಿಪ್ರಾಯ.