ಕಿತ್ತಳೆಹಣ್ಣಿನ ಉಪಯೋಗಗಳು

ಹಣ್ಣುಗಳಲ್ಲಿಯೇ ಅತಿ ಶ್ರೇಷ್ಠವಾದದ್ದು ಕಿತ್ತಳೆಹಣ್ಣು, ಗಿಡದಲ್ಲಿಯೇ ಪಕ್ವವಾಗಿರುವ ಹಣ್ಣು ಅತ್ಯಂತ ಸಿಹಿಯಾಗುರುತ್ತದೆ. ಸಿಹಿಯಾದ ಹಣ್ಣು ಆರೋಗ್ಯಕರ. ಸಕಲ ವಿಧವಾದ ನೋವುಗಳನ್ನು, ಪಿತ್ತ ದೋಷಗಳನ್ನು, ದಾಹಗಳನ್ನು, ನಿವಾರಿಸುತ್ತದೆ. ರಕ್ತವನ್ನು ಶುದ್ಧಿಗೊಳಿಸುತ್ತದೆ. ಮೂತ್ರಾಶಯವನ್ನು ಶುದ್ಧಿಯಾಗಿರುವಂತೆ ನೋಡಿ ಕೊಳ್ಳುತ್ತದೆ. ಬಾಯಾರಿಕೆ, ಆಯಾಸವನ್ನು ಶಮನಗೊಳಿಸುತ್ತದೆ. ಆದರೆ ಹುಳಿಯಾದ ಹಣ್ಣು ಕಫವನ್ನು ಹೆಚ್ಚಿಸುತ್ತದೆ. ಹಾಗಾಗಿ ಕೆಮ್ಮು ಹೆಚ್ಚಾಗುತ್ತದೆ.
ಕಿತ್ತಳೆಹಣ್ಣು ಸಿಗುವ ಕಾಲದಲ್ಲಿ ಪ್ರತಿನಿತ್ಯವು ಸೇವನೆ ಮಾಡುತ್ತಾ ಬಂದರೆ ಖಾಯಿಲೆಗಳು ಹತ್ತಿರ ಸುಳಿಯುವುದಿಲ್ಲ. ಈ ಹಣ್ಣು ಶರೀರಕ್ಕೆ ಹೆಚ್ಚಿನ ರೋಗನಿರೋಧಕ ಶಕ್ತಿಯನ್ನು ಕೊಡುತ್ತದೆ. ಯಾರಿಗಾದರೂ ಖಾಯಿಲೆಯಿಂದ ಚಿಕಿತ್ಸೆಗೆ ಒಳಗಾಗಿರುವ ಸಮಯದಲ್ಲಿ ಕಿತ್ತಳೆಹಣ್ಣುನ್ನು ಸೇವಿಸುತ್ತಿದ್ದರೆ ಬಹಳ ಬೇಗ ಚೇತರಿಸಿಕೊಳ್ಳಲು ಸಹಾಯವಾಗುತ್ತದೆ.
ಅ ಜೀವಸತ್ವದಿಂದ ಸಮೃದ್ಧವಾಗಿರುವ ಈ ಹಣ್ಣು, ಶರೀರದಲ್ಲಿ ಉತ್ತಮ ಬಣ್ಣ ತೇಜಸ್ಸು ಹಾಗೂ ಆರೋಗ್ಯವನ್ನು ಉಂಟುಮಾಡುತ್ತದೆ.

ಪೋಷಕಾಂಶಗಳು: ಂ,ಃ,ಃ೫,ಃ೬,ಅ ನಾರಿನಂಶ, ಪ್ರೋಟೀನ್, ಕಬ್ಬಿಣ, ಮೆಗ್ನೀಷಿಯಂ, ಕಾರ್ಬೋಹೈಡ್ರೇಟ್ಸ್, ಇನ್ನು ಇತರ ಖನಿಜ ಪದಾರ್ಥಗಳು

೧. ಮೂಳೆಗಳ ಬಲಕ್ಕೆ: ಮೂಳೆಗಳಲ್ಲಿ ಮೃದುತ್ವವಿದ್ದು, ದೃಢವಾಗಿರದಿದ್ದರೆ, ಅಂತಹವರು ಕಿತ್ತಳೆಹಣ್ಣನ್ನು ಪ್ರತಿನಿತ್ಯ ಸೇವಿಸುವುದು ಉತ್ತಮ.
೨. ಶ್ವಾಸ: ಶ್ವಾಸಕ್ಕೆ ಸಂಬಂಧಪಟ್ಟಂತಹ ಸಮಸ್ಯೆ ಇರುವವರು ವಿಶೇಷವಾಗಿ ಕಿತ್ತಳೆಹಣ್ಣನ್ನು ಸೇವಿಸಬೇಕು.
೩. ಗರ್ಭಿಣಿಯರು: ಗರ್ಭಿಣಿಯರು ಹೆಚ್ಚು ಕಿತ್ತಳೆಹಣ್ಣನ್ನು ಸೇವನೆ ಮಾಡುತ್ತಾ ಬಂದರೆ ಹೆರಿಗೆ ಸುಲಭವಾಗಿ ಆಗುತ್ತದೆ. ಮುಂದೆ ಹುಟ್ಟುವ ಮಗುವಿಗೆ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ.
೪. ಮುಖದ ಕಲೆಗೆ: ಸಿಪ್ಪೆಯನ್ನು ಒಣಗಿಸಿ ಪುಡಿ ಮಾಡಿಟ್ಟುಕೊಂಡು ಪುಡಿಯನ್ನು ನೀರಿನಲ್ಲಿ ಕಲಸಿ ಮುಖದ ಮೇಲೆ ಅಥವಾ ಇನ್ಯಾವುದಾದರೂ ಭಾಗದಲ್ಲಿ ಕಲೆಯುಂಟಾಗಿದ್ದರೆ ಅಲ್ಲೆಲ್ಲಾ ಹಚ್ಚುತ್ತಾ ಬಂದರೆ ಕಲೆಯ ಕ್ರಮೇಣ ಹೋಗುತ್ತದೆ.
೫. ಸೌಂದರ್ಯವರ್ಧಕ: ಈ ಹಣ್ಣಿನ ಸಿಪ್ಪೆಯನ್ನು ಹಸಿಯಾಗಿ ಇರುವಾಗ ಮುಖದ ಮೇಲೆ ಹಾಕಿ ಉಜ್ಜಿದರೆ, ಮೊಡವೆ, ಗುಳ್ಳೆಗಳು ಬಹಳ ಬೇಗ ಹೋಗುವುದು.
೬. ಮಲಬದ್ಧತೆ: ಇದರಲ್ಲಿ ಉತ್ತಮ ನಾರಿನಾಂಶ ಇರುವುದರಿಂದ ಮಲಬದ್ಧತೆ ನಿವಾರಣೆಯಾಗುತ್ತದೆ.
೭. ಕಣ್ಣಿನ ದೃಷ್ಠಿ: ಎ ಮತ್ತು ಸಿ ಜೀವಸತ್ವ ಅಧಿಕವಾಗಿರುವುದರಿಂದ ಕಣ್ಣಿನ ದೃಷ್ಠಿಗೆ ಅತ್ಯಂತ ಸಹಕಾರಿಯಾಗಿದೆ.
೮. ಮಲೇರಿಯಾ ಜ್ವರ: ಕಿತ್ತಳೆಹಣ್ಣಿನ ಸಿಪ್ಪೆಯಲ್ಲಿ ಕ್ವಿನೈನ್ ಅಂಶ ಇದೆ. ಹಾಗಾಗಿ ಮಲೇರಿಯಾ ಜ್ವರಕ್ಕೆ ಒಳ್ಳೆಯ ಚಿಕಿತ್ಸೆ ಇದರಲ್ಲಿದೆ. ೧ ಹಣ್ಣಿನ ಸಿಪ್ಪೆಯನ್ನು ೧ ಲೋಟ ನೀರಿನಲ್ಲಿಟ್ಟು ಕುದಿಸಿ ಅರ್ಧಭಾಗ ಇಂಗಿಸಿ, ನಂತರ ಶೋಧಿಸಿ ಬಿಸಿ ಯಾಗಿರುವಾಗಲೇ ಕುಡಿಯಬೇಕು.

೧. ಗೌರಮ್ಮನ ಆರೋಗ್ಯ ಸೂತ್ರಗಳು ಪ್ರಿಸ್ಮ್ ಬುಕ್ಸ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಪ್ರಕಟಣೆ
೨. ಡಾ. ಗೌರಿ ಸುಬ್ರಮಣ್ಯ ಆಯುರ್ವೇದ ತಜ್ಞರು ಮತ್ತು ಧರ್ಮದರ್ಶಿಗಳು ಮುಕ್ತಿನಾಗ ದೇವಸ್ಥಾನ ಫೋನ್ ನಂ. ೯೫೩೫೩೮೩೯೨೧