ಕಿತ್ತನಕೆರೆಯಲ್ಲಿ ಕಾರ್ತಿಕೋತ್ಸವ ಆಚರಣೆ

ಅರಸೀಕೆರೆ, ಜ. ೯- ತಾಲ್ಲೂಕಿನ ಕಣಕಟ್ಟೆ ಹೋಬಳಿಯ ಕಿತ್ತನಕೆರೆ ಗ್ರಾಮದಲ್ಲಿ ಕಾರ್ತಿಕೋತ್ಸವ ಹಾಗೂ ಹನುಮಜಯಂತಿ ಧಾರ್ಮಿಕ ಕಾರ್ಯಕ್ರಮ ಹಾರನಹಳ್ಳಿ ಸುಕ್ಷೇತ್ರ ಕೋಡಿ ಮಠದ ಪೀಠಾಧ್ಯಕ್ಷರಾದ ಡಾ.ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ನೇತೃತ್ವದಲ್ಲಿ ನಡೆಯಿತು.
ಶ್ರೀರಾಮ ಭಕ್ತ ಹನುಮಂತ ಬಲಶಾಲಿಯ ಒಂದು ಪ್ರತಿರೂಪ ಶ್ರೀರಾಮ ಹಾಗೂ ಹನುಮಂತನ ನಾಮಸ್ಮರಣೆಯಿಂದ ಮನುಷ್ಯ ಸಂಕಷ್ಟಗಳಿಂದ ಪಾರಾಗಬಹುದು. ಆಧ್ಯಾತ್ಮಿಕ ಶಕ್ತಿ ಮನುಷ್ಯನನ್ನು ಮಾನಸಿಕವಾಗಿ ಗಟ್ಟಿಗೊಳಿಸುತ್ತದೆ.
ಕಾರ್ತಿಕ ದೀಪೋತ್ಸವ ಎಂದರೆ ಕತ್ತಲೆಯಿಂದ ಬೆಳಕಿನ ಕಡೆ ಬೆಳಕಿನಿಂದ ಜ್ಞಾನದ ಕಡೆ ಜ್ಞಾನದಿಂದ ಸುಜ್ಞಾನದ ಕಡೆಗೆ ಅಂದರೆ ಮಾನವೀಯ ಮೌಲ್ಯಗಳಾದ ಸತ್ಯ ಕರುಣೆ ಸಹನೆ ಅಂತಃಕರಣ ಸಹೋದರತೆಯ ತತ್ವ ಆದರ್ಶ ನೆಲಗೊಳ್ಳಬೇಕಾಗಿದೆ ಎಂದು ಕೋಡಿಶ್ರೀಗಳು ಆಶೀರ್ವಚನ ನೀಡಿದರು.
ವಾರ್ಷಿಕೋತ್ಸವ ಹಾಗೂ ಹನುಮಜಯಂತಿ ಹಿನ್ನೆಲೆಯಲ್ಲಿ ಗ್ರಾಮದ ದೇವಾಲಯದಲ್ಲಿ ದೇವರಿಗೆ ವಿಶೇಷ ಪೂಜೆ ಹಾಗೂ ಅಲಂಕಾರ ಮತ್ತು ಉತ್ಸವ ನೆರವೇರಿತು.
ಮಾಡಾಳು ಶ್ರೀ ರುದ್ರಮುನಿ ಸ್ವಾಮೀಜಿ ಆಶೀರ್ವಚನ ನೀಡಿದರು.