ಕಿಣ್ಣಿ ಸುಲ್ತಾನದಲ್ಲಿ ಅರಿವು ಶಿಕ್ಷಣ ಕೇಂದ್ರಕ್ಕೆ ಚಾಲನೆ : ನಟ ಚೇತನ

ಆಳಂದ: ಏ.26:ತಾಲೂಕಿನ ಕಿಣ್ಣಿಸುಲ್ತಾನ ಗ್ರಾಮದಲ್ಲಿ ಅರಿವು ಶಿಕ್ಷಣ ಕೇಂದ್ರ ಉದ್ಘಾಟಿಸಿ ಮಾತನಾಡಿದ ನಟ ಚೇತನ ಸಮಾಜದ ಸಮಾನತೆಗಾಗಿ ಬದುಕು ಸವೆಸಿದ ಡಾ. ಬಾಬಾಸಾಹೇಬ ಅಂಬೇಡ್ಕರ ಜ್ಯೋತಿಬಾ ಫುಲೆ, ಬುದ್ಧ, ಬಸವ, ಪೇರಿಯಾರ್ ಶಾಹುಮಹಾರಾಜ, ಮುಂತಾದವರ ವಿಚಾರಧಾರೆ ಗಳನ್ನು ನೆನಪಿಸಿದರು.
ವಿಶ್ವನಾಥ ಕೋರಣೇಶ್ವರ ಶ್ರೀಗಳು ಮಾತನಾಡಿ ಸರ್ವರಿಗೂ ಸಮಾನ ಶಿಕ್ಷಣ ಸಿಗುವಂತಾಗಬೇಕು ಜನರಿಗೆ ಶಿಕ್ಷಣದ ಅರಿವು ಮೂಡಿಸುವಲ್ಲಿ ಅರಿವು ಶಿಕ್ಷಣಕೇಂದ್ರದ ಪಾತ್ರ ಹಿರಿದಾದದ್ದು ಜವಾಬ್ದಾರಿಯುತವಾಗಿ ನಡೆಸುವಂತೆ ಆಶಿಸಿದರು.
ಅಮರ ಜ್ಯೋತಿ ಬಂತೇಜಿ ದಿವ್ಯಸಾನಿಧ್ಯ ವಹಿಸಿ ಆಶೀರ್ವದಿಸಿದರುಉಪನ್ಯಾಸಕರಾಗಿ ಜೀತೇಂದ್ರ ತಳವಾರ
ದ.ಸಾ.ಪ ಅಧ್ಯಕ್ಷರಾದ ರಾಜಶೇಖರ.ಬಿ.ಕಡಗನ್‍ಗುರಪ್ಪ ಶಾಪುರೆ,
ಶ್ರೀಶೈಲ್ ಪೂಜಾರಿಅರಿವು ಶಿಕ್ಷಣ ಕೇಂದ್ರ ದ ಅಧ್ಯಕ್ಷರಾದ ಮಲ್ಲಿಕಾರ್ಜುನ ಶೃಂಗೇರಿ ಆಕಾಶ ದೇಗಾಂವ ರಾಜಕುಮಾರ ಭದ್ರೆ ಮುಂತಾದವರು
ಉಪಸ್ಥಿತರಿದ್ದರು.ಹಣಮಂತ ಚಿಂಚೋಳಿ ನಿರೂಪಿಸಿದರು. ಬಸವರಾಜ ಶೃಂಗೇರಿ ವಂದಿಸಿದರು.