ಕಿಣ್ಣಿ ಸಡಕ ಗ್ರಾಮ ಪಂಚಾಯಿತಿ ಮರು ಮತದಾನ: ಶೇ. 59.45 ರಷ್ಟು ಮತದಾನ

ಕಲಬುರಗಿ.ಡಿ.24:ಕಲಬುರಗಿ ಜಿಲ್ಲೆಯ ಕಮಲಾಪೂರ ತಾಲೂಕಿನ 2-ಕಿಣ್ಣಿ ಸಡಕ ಗ್ರಾಮ ಪಂಚಾಯತಿಯ 1-ಕಿಣ್ಣಿ ಸಡಕ ಕ್ಷೇತ್ರದ ಮತಗಟ್ಟೆ ಸಂಖ್ಯೆ 7ಕ್ಕೆ ಗುರುವಾರ ನಡೆದ ಮರು ಮತದಾನದಲ್ಲ್ಲಿ ಶೇ. 59.45 ಮತದಾನವಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವಿ.ವಿ. ಜೋತ್ಸ್ನಾ ಅವರು ತಿಳಿಸಿದ್ದಾರೆ.
ಮತ ಚಲಾಯಿಸುವ ಹಕ್ಕು ಹೊಂದಿದ ಒಟ್ಟು 947 ಮತದಾರರ ಪೈಕಿ 563 ಮತದಾರರು ಮತ ಚಲಾಯಿಸಿದ್ದು, ಇದರಲ್ಲಿ 288 ಪುರುಷರು ಹಾಗೂ 275 ಮಹಿಳಾ ಮತದಾರರು ಇದ್ದಾರೆ.
ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ 2-ಕಿಣ್ಣಿ ಸಡಕ ಗ್ರಾಮ ಪಂಚಾಯತಿಯ 1-ಕಿಣ್ಣಿ ಸಡಕ ಕ್ಷೇತ್ರದ ಮತಗಟ್ಟೆ ಸಂಖ್ಯೆ-7ರಲ್ಲಿನ ಮತಪತ್ರದಲ್ಲಿ ಚಿಹ್ನೆ ತಪ್ಪಾಗಿ ಮುದ್ರಿತವಾಗಿರುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಡಿಸೆಂಬರ್ 24 ರಂದು ಮರು ಮತದಾನ ಮಾಡುವಂತೆ ಆದೇಶ ನೀಡಿತ್ತು.