ಕಿಡ್ನಿ ಸುರಕ್ಷತೆಗೆ ಫ್ಲೋರೋಸಿಸ್ ನಿಯಂತ್ರಣ ಅತ್ಯಾವಶ್ಯಕ

ಕೋಲಾರ,ನ.೧೮- ಫ್ಲೋರೈಡ್ ಭೂಮಿಯ ಮೇಲಿನ ರಾಸಾಯನಿಕ ಅಂಶಗಳಲ್ಲಿ ೧೩ ನೇ ಸ್ಥಾನ ಪಡೆದಿದೆ. ಕೋಲಾರದ ನೀರಿನಲ್ಲೂ, ಗಾಳಿಯಲ್ಲೂ ಹಾಗೂ ಮಣ್ಣಿನಲ್ಲಿ ಫ್ಲೋರೈಡ್ ಅಧಿಕವಾಗಿದೆ. ಫ್ಲೋರೈಡ್ ಖನಿಜಗಳಿಂದ ರೂಪಗೊಂಡಿರುವಲ್ಲೂ-ಬಂಡೆಗಳಲ್ಲಿಯೂ ಜಲಚರಗಳಲ್ಲಿಯೂ ಸಹ ಪ್ರಾಮಾಣಿಸಲಾಗಿದೆ. ನೀರು-ಬಂಡೆಯ ಪರಸ್ಪರ ಕ್ರಿಯೆಗಳ ಕಾರಣದಿಂದ ಅಂತರ್ಜಲದಲ್ಲಿ ಎಲೆಕ್ಟ್ರೋನೆಗೆಟಿವ್ ಅಂಶವು ಹೆಚ್ಚಾಗಿ ಫ್ಲೋರೈಡ್ ಪ್ರಕಟಗೊಳ್ಳುತ್ತದೆ.
ಹಲವು ದಶಕಗಳಿಂದ ಕೋಲಾರ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿರುವುದರಿಂದ ಫ್ಲೋರೈಡ್‌ನ ಅಂಶವು ಉಲ್ಭಣವಾಗಿದೆ. ಕೋಲಾರ ಜಿಲ್ಲೆಯ ನೀರಿನಲ್ಲಿ ಸುಮಾರು ೦.೪- ೪.೬ ಪಿಪಿಎಂ ವರಗೂ ಫ್ಲೋರೈಡ್ ಖನಿಜವನ್ನು ಧೃಡೀಕರಿಸಲಾಗಿದೆ. ಫ್ಲೋರೈಡ್ ನಿಂದ ಕಲುಷಿತವಾದ ನೀರು ಮತ್ತು ಆಹಾರ ಉತ್ಪನ್ನಗಳ ಸೇವನೆಯಿಂದ ಮಾನವ ಮತ್ತು ಪ್ರಾಣಿಗಳು ದುಷ್ಪರಿಣಾಮಗಳಿಗೆ ಒಳಗಾಗುತಿದ್ದಾರೆ.
ಇದು ದೇಹದ ಪ್ರತಿಕ್ರಿಯೆಗಳಿಗೆ ವರ ಮತ್ತು ಶಾಪವಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಯು ಕುಡಿಯುವ ನೀರಿನಲ್ಲಿ ೧.೫ ಪಿಪಿಎಂ ವರೆಗೆ ಫ್ಲೋರೈಡ್ ಸೇವನೆಯನ್ನು ಶಿಫಾರಸು ಮಾಡಲಾಗುತ್ತದೆ. ಸ್ವಲ್ಪ ಪ್ರಮಾಣದ ಫ್ಲೋರೈಡ್‌ಹಲ್ಲು ಮತ್ತು ಮೂಳೆಗಳ ಆರೋಗ್ಯಕರ ಬೆಳವಣಿಗೆಗೆ ಸಹಕಾರಿಯಾಗುತ್ತದೆ.
ಮೂಳೆಯ ಹೊರತು ಪಡಿಸಿ ಫ್ಲೋರೋಸಿಸ್ ಇತರೆ ಅಂಗಾಂಗಗಳ ಮೇಲೂ ಇತ್ತೀಚೆಗೆ ಪ್ರಭಾವ ಬೀರುತ್ತಿದೆ. ಬಹುಮುಖ್ಯವಾಗಿ ಮೂತ್ರಪಿಂಡಗಳ ಮೇಲೆ ದೀರ್ಘಕಾಲದ ದುಷ್ಪರಿಣಾಮವನ್ನು ತೋರ್ಪಡಿಸುತ್ತಿದೆ,
ಉದಾಹರಣೆ ದೀರ್ಘಕಾಲದ ಮೂತ್ರಪಿಂಡ ವೈಫಲ್ಯ (ಅhಡಿoಟಿiಛಿ ಏiಜಟಿeಥಿ ಆಜiseಚಿse). ಈ ದೀರ್ಘ ಕಾಲದ ಮೂತ್ರಪಿಂಡ ವೈಪಲ್ಯಕ್ಕೆ ಬಹು ಮುಖ್ಯಕಾರಣಗಳೆಂದರೆ, ಮಧುಮೇಹ, ರಕ್ತದೊತ್ತಡ, ಕ್ಯಾನ್ಸರ್ ಹಾಗೂ ದೀರ್ಘಕಾಲೀನ ಕಾಯಿಲೆಗಳು, ಸಂಯೋಜನೆಗೊಂಡು ಫ್ಲೋರೋಸಿಸ್ ಮೂತ್ರಪಿಂಡಗಳ ಮೇಲೆ ಅಸಮಾನ್ಯ ದುಷ್ಪರಿಣಾಮ ತೋರ್ಪಡಿಸುತ್ತದೆ.
ಫ್ಲೋರೈಡ್ ಕಣಗಳು ಕಿಡ್ನಿಯ ಮೆಡುಲ್ಲರಿ ಭಾಗದಲ್ಲಿರುವ ಹೆನ್ಲೆಸ್ ಲೂಪ್‌ನಲ್ಲಿ ಶೇಖರಣೆಗೊಂಡು ಮೂತ್ರಪಿಂಡಗಳ ಕಾರ್ಯನಿರ್ವಹಣೆಯನ್ನು ಕುಂಠಿತಗೊಳಿಸುತದೆ. ಈ ಅಂಶವನ್ನು ಹಲವಾರು ಪ್ರಾಣಿ ಸಂಕುಲಗಳ ಸಂಶೋಧನೆಯಲ್ಲಿ ಧೃಡಿಪಡಿಸಲಾಗಿದೆ.
ಹೆಚ್ಚುವರಿ ಫ್ಲೋರೈಡ್ ದೇಹದಲ್ಲಿನ ನೈಸರ್ಗಿಕ ಪ್ರೋಟೀನ್ ಕೊಲಾಜಿನ್‌ನ ರಚನಾತ್ಮಕಥೆಯನ್ನು ಅಡ್ಡಿಪಡಿಸುತ್ತದೆ, ಇದರಿಂದ ಮೂತ್ರಪಿಂಡ ಮತ್ತು ಇತರೆ ಅಂಗಾಂಗಗಳಿಗೆ ಹಾನಿಉಂಟು ಮಾಡುತ್ತದೆ.
ಫ್ಲೋರೋಸಿಸ್ ಹಾಗೂ ಮೂತ್ರಪಿಂಡದ ಮೇಲೆ ಉಂಟಾಗುವ ದುಃಷ್ಪರಿಣಾಮಗಳ ಕುರಿತು ಸಂಶೋಧನೆಯನ್ನು ಶ್ರೀದೇವರಾಜ ಅರಸು ವೈದ್ಯಕೀಯ ಮಹಾವಿದ್ಯಾಲಯ, ದೇವರಾಜ ಅರಸು ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಅಂಡ್ ರೀಸರ್ಚ್ ಸಂಸ್ಥೆಯ, ಜೀವರಾಸಾಯನ ಶಾಸ್ತ್ರದ ಪ್ರಾಧ್ಯಾಪಕರ ತಂಡ ಡಾ.ಶಶಿಧರ್ ಕೆ.ಎನ್, ಡಾ.ಮುನಿಲಕ್ಷ್ಮಿ ಮತ್ತು ಡಾ.ಆರ್.ಸಾಯಿ ದೀಪಿಕಾ ಪ್ರಾಯೋಗಿಕ ಅಧ್ಯಯನವನ್ನು ನಡೆಸಿದ್ದು, ಫ್ಲೋರೋಸಿಸ್ ಪ್ರಾಥಮಿಕವಾಗಿ ಮೂತ್ರಪಿಂಡದ ಮೇಲೆ ಪರಿಣಾಮ ಬೀರಬಹುದಾದ ಪ್ರಭಾವವನ್ನು ಸ್ಪಷ್ಟಪಡಿಸಿದ್ದಾರೆ.
ಈ ಎಲ್ಲಾ ಪ್ರಯೋಗಗಳಿಗೆ ಡಾ.ಆರ್.ಹರೀಶ್ ಹಾಗೂ ಕುಮಾರಿ ಇಂದುಮತಿ ಎ.ಎನ್ ಅವರ ಜೊತೆಗೂಡಿ ಮುಂದುವರಿಸಲು ಸಹಕರಿಸಿರುತಾರೆ.
ಈ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ ಫ್ಲೋರೋಸಿಸ್ ಬಗ್ಗೆ ಜಾಗೃತಿ ಮೂಡಿಸಲು ಮಾಸಿಕ ವೆಬ್‌ನಾರ್‌ಗಳ ಸರಣಿಗಳಲ್ಲಿಯೂ ಮತ್ತು ವೃತ್ತಪತ್ರಿಕೆ ಲೇಖನಗಳಲ್ಲಿಯೂ ಪ್ರಕಟಿಸಿರುತ್ತಾರೆ. ಇನ್ನೂ ಅಧಿಕ ವಿಚಾರಗಳಿಗಾಗಿ ಯೂಟ್ಯೂಬ್ ಚಾನೆಲ್ ಫ್ಲೋರೋಸಿಸ್ ರಿಸರ್ಚ್ ಮತ್ತು ರೆಫರಲ್ ಲ್ಯಾಬೊರೇಟರಿ ಸಬ್‌ಸ್ಕ್ರೈಬ್ ಮಾಡಿ ನಲ್ಲಿ ತಿಳಿಯಬಹುದೆಂದು ಸಾರ್ವಜನಿಕರಲ್ಲಿ ಮನವಿ ಮಾಡಿರುತ್ತಾರೆ.
ಫ್ಲೋರೋಸಿಸ್ ಬಗ್ಗೆ ಇನ್ನೂ ಅಧಿಕ ವಿಚಾರಗಳನ್ನು ತಿಳಿಯಲು ಇಚ್ಚಿಸುವಂತಹವರು ದೂ: ೯೮೪೫೨೪೮೭೪೨ ಮುಖಾಂತರ ಅಥವಾ ಖುದ್ದಾಗಿ ಶ್ರೀ.ದೇವರಾಜ ಅರಸು ವೈದ್ಯಕೀಯ ಮಹಾವಿದ್ಯಾಲಯ, ಕೋಲಾರ, ಕರ್ನಾಟಕವನ್ನು ಸಂಪರ್ಕಿಸಬಹುದು.