ಕಿಡ್ನಿ ವೈಫಲ್ಯ : ಸಂಕಷ್ಟದಲ್ಲಿರುವ ಬಡ ರೈತ ಕುಟುಂಬ, ಕಿಡ್ನಿ ಕಸಿ ಚಿಕಿತ್ಸೆಗಾಗಿ ಬೇಕಿದೆ ನೆರವಿನ ಹಸ್ತ

ಅಥಣಿ :ಆ.28: ಪ್ರತಿದಿನ ದುಡಿದು ಹೆತ್ತ ತಂದೆ ತಾಯಿ ಪೆÇೀಷಣೆಯ ಜೊತೆಗೆ ಕುಟುಂಬದ ಜವಾಬ್ದಾರಿಯನ್ನು ನಿರ್ವಹಿಸಬೇಕಾದ ಮಗನೇ ಅನಾರೋಗ್ಯಕ್ಕೆ ತುತ್ತಾಗಿ ಹಾಸಿಗೆ ಹಿಡಿದಾಗ ಕುಟುಂಬದ ನಿರ್ವಹಣೆ ಕಷ್ಟವಾಗುತ್ತದೆ. ಕುಟುಂಬದ ಜವಾಬ್ದಾರಿಯನ್ನು ನಿರ್ವಹಿಸಬೇಕಾದ ಮಗ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು, ಮಗನ ಸಂಕಷ್ಟ ನೋಡಲಾಗದೆ ಸ್ವತಃ ತಾಯಿಯೇ ಮಗನಿಗೆ ಕಿಡ್ನಿ ದಾನ ಮಾಡಲು ಮುಂದಾಗಿದ್ದಾರೆ.
ಹೌದು… ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ತಾಲೂಕಿನ ಕರ್ಲಟ್ಟಿ ಗ್ರಾಮದ ಧರೇಪ್ಪ ರಾವಸಾಬ ಬಿಳ್ಳೂರ( 43) ಎಂಬ ರೈತ ಕಳೆದ ಐದು ವರ್ಷಗಳಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು, ಧರೇಪ್ಪನಿಗೆ ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳು ಒಂದು ಗಂಡು ಮಗು ಇದ್ದಾರೆ, ಕಳೆದ ಐದು ವರ್ಷಗಳ ಹಿಂದೆ ಒಂದು ಕಿಡ್ನಿ ಸಮಸ್ಯೆ ಎದುರಾದಾಗ ಸಾಂಗ್ಲಿ ಮತ್ತು ಬೆಳಗಾವಿಯ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರೂ ಕೂಡ ಗುಣಮುಖವಾಗಿಲ್ಲ, ಈಗ ಎರಡು ಕಿಡ್ನಿಗಳಿಗೆ ಸಮಸ್ಯೆ ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ವೈದ್ಯರು ಕಿಡ್ನಿ ಕಸಿ ಮಾಡಿಸುವುದು ಅನಿವಾರ್ಯ ಎಂದಿದ್ದಾರೆ.
ಕಿಡ್ನಿ ಸಮಸ್ಯೆ ಎದುರಿಸುತ್ತಿರುವ ಧರೆಪ್ಪ ಬಿಳ್ಳೂರ ಮೂಲತಃ ಅಥಣಿ ತಾಲೂಕಿನ ತಾoವಶಿ ಗ್ರಾಮದವರಾಗಿದ್ದು, ಕಳೆದ ಐದು ವರ್ಷಗಳಿಂದ ಪತ್ನಿಯ ತವರೂರು ಕರ್ಲಟ್ಟಿ ಗ್ರಾಮದಲ್ಲಿ ವಾಸವಾಗಿದ್ದಾರೆ. ಧರೇಪ್ಪಗೆ ಅವರ ತಾಯಿ ಗುರವ್ವ ಬಿಳ್ಳೂರ ( 65 ) ತನ್ನ ಮಗನಿಗೆ ಕಿಡ್ನಿ ದಾನ ಮಾಡಲು ಮುಂದಾಗಿದ್ದಾರೆ. ಸದ್ಯ ಅಥಣಿ ಸಾರ್ವಜನಿಕ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ವಿಜಯಪುರದ ಯಶೋಧ ಆಸ್ಪತ್ರೆಯಲ್ಲಿ ಇವರ ಕಿಡ್ನಿ ಕಸಿ ಮಾಡಲು ಅಲ್ಲಿನ ತಜ್ಞ ವೈದ್ಯರು ಸು. 10 ಲಕ್ಷ ರೂಪಾಯಿ ಚಿಕಿತ್ಸಾ ಶುಲ್ಕ ಭರಿಸುವಂತೆ ತಿಳಿಸಿದ್ದಾರೆ. ಇಷ್ಟೊಂದು ಹಣವನ್ನು ಹೊಂದಿಸುವುದು ಈ ಬಡ ರೈತ ಕುಟುಂಬಕ್ಕೆ ಅಸಾಧ್ಯವಾಗಿದ್ದು, ದಿಕ್ಕು ತೋಚದಂತಾಗಿ ಸಾರ್ವಜನಿಕರಿಗೆ ಮತ್ತು ಜನಪ್ರತಿನಿಧಿಗಳಿಗೆ ಸಹಾಯ ಹಸ್ತಕ್ಕಾಗಿ ಕೈ ಚಾಚುವ ಪರಿಸ್ಥಿತಿ ಎದುರಾಗಿದೆ. ಸಾರ್ವಜನಿಕರು, ಉದ್ಯಮಿಗಳು, ಸಂಘ ಸಂಸ್ಥೆಯ ಪದಾಧಿಕಾರಿಗಳು, ಸಮಾಜ ಸೇವಕರು ಸಂಕಷ್ಟದಲ್ಲಿರುವ ಈ ಕುಟುಂಬಕ್ಕೆ ಸಹಾಯ ಹಸ್ತ ನೀಡ ಬಯಸುವರು ಅವರ ಬ್ಯಾಂಕ್ ಖಾತೆ : ಬ್ಯಾಂಕ್ ಆಫ್ ಬರೋಡಾ, ಹುಲುಗಬಾಳಿ ಶಾಖೆಯಲ್ಲಿರುವ ಖಾತೆ ನಂ: 63160100000391 ( ಕೋಡ್ -ಃಂಖಃ 0ಗಿಎಊUಐಂ ) ಮತ್ತು ಅವರ ದೂರವಾಣಿ, ಸಂಖ್ಯೆ 8867676478 ಸಂಪರ್ಕಿಸಬಹುದಾಗಿದೆ.