ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಬಾಲಕಿ; ಸಹಾಯಕ್ಕೆ ಮೊರೆ

ರಾಯಚೂರು,ಜು ೨೨- ತಾಲ್ಲೂಕಿನ ತುರುಕನಡೋಣಿ ಗ್ರಾಮದ ಮೇಶಕ ಮರಿಯಮ್ಮ ದಂಪತಿಯ ೧೦ವರ್ಷದ ಪುತ್ರಿ ಜಯಶೀಷ ಕಿಡ್ನಿ ವೈಫಲ್ಯದಿಂದ ಬಳಲುತಿದ್ದು ದಾನಿಗಳು ಚಿಕಿತ್ಸೆಗೆ ಧನಸಹಾಯ ಮಾಡಿದರೆ ಅನುಕೂಲವಾಗಲಿದೆ ಎಂದು ಮಟಮಾರಿ ಪ್ರಾಥಮಿಕ ಅರೋಗ್ಯ ಕೇಂದ್ರದ ನಿರೀಕ್ಷಕ ತಿಪ್ಪಣ್ಣ ಅವರು ಮನವಿ ಮಾಡಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ,
ಬಾಲಕಿ ಜಯಶೀಶ ಎರಡು ಕಿಡ್ನಿ ವೈಫಲ್ಯದಿಂದ ಬಳಲುತಿದ್ದು ಈಗಾಗಲೇ ಸುಮಾರು ೨-೩ ಲಕ್ಷ ಖರ್ಚು ಮಾಡಿದ್ದಾರೆ. ಬಳ್ಳಾರಿ, ಬೆಂಗಳೂರು ಸೇರಿ ಹಲವು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗಿದೆ.ಈಚಿಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದರೆ ಸುಮಾರು ೧೫ ಲಕ್ಷ ವೆಚ್ಚ ವಾಗಲಿದೆ ಎಂದು ತಿಳಿಸಿದ್ದಾರೆ. ಕಾರಣ ಮೇಶಕ ದಂಪತಿ ಬಡವರಾಗಿದ್ದು ಕೂಲಿಕಾರ್ಮಿಕರಾಗಿ ದುಡಿದು ಜೀವನ ಮಾಡುತ್ತಿದ್ದಾರೆ.ಅವರಿಗೆ ಇಷ್ಟು ಮೊತ್ತದ ಹಣ ಹೊಂದಿಸಲು ಆಗುತ್ತಿಲ್ಲ ಹೀಗಾಗಿ ದಾನಿಗಳು ಸಹಾಯ ಮಾಡಬೇಕು. ಈ ಕುರಿತು ಸ್ಥಳೀಯ ಶಾಸಕರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ.ಆಸಕ್ತ ದಾನಿಗಳು ಮೇಶಕ ಅವರ ಬ್ಯಾಂಕ್ ಖಾತೆ ನಂಬರ್ ೧೦೭೪೪೧೦೧೧೦೫೯೨೨ ಐ.ಎಫ್.ಎಸ್.ಸಿ ಕೊಡ್ ನಂಬರ್ Pಏಉ೦೦೧೦೭೪೪ ಗೆ ಹಣ ಹಾಕಿ ಸಹಾಯ ಮಾಡಬಹುದು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ನಾಗರಾಜ, ಮೇಶಕ, ಮರಿಯಮ್ಮ, ಬಾಲಕಿ ಜಯಶೀಶ ಇದ್ದರು.