ಕಿಡ್ನಾಪ್ ಮಾಡಿದ ನಾಲ್ವರು ಸ್ನೇಹಿತರಿಂದ ಬಳ್ಳಾರಿ  ಕಾಲೇಜು ವಿದ್ಯಾರ್ಥಿನಿ ಅತ್ಯಾಚಾರ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಅ.14: ನಗರದ ಕಾಲೇಜು ವಿಧ್ಯಾರ್ಥಿನಿಯೋರ್ವಳನ್ನು ಸಿನಿಮಿಯ ರೀತಿಯಲ್ಲು ಕಿಡ್ನಾಪ್ ಮಾಡಿ ಅತ್ಯಾಚಾರ ಮಾಡಿರುವ ಘಟನೆ ನಡೆದಿದೆ.
ಬಿಕಾಂ ಓದುತ್ತಿದ್ದ ವಿಧ್ಯಾರ್ಥಿನಿಯನ್ನು ನಾಲ್ವರು ಸ್ನೇಹಿತರು
ಯುವತಿ ಪರೀಕ್ಷೆಯುತ್ತಿದ್ದಾಗ ಅಣ್ಣ ಬಂದಿರೋದಾಗಿ ಹೇಳಿ ಕಾಲೇಜಿನಿಂದ ಹೊರಗಡೆ ಕರೆಯಿಸಿ ಹೊರಗಡೆ ಬರ್ತಿದ್ದಂತೆ  ಆಟೋದಲ್ಲಿ ಕಿಡ್ನ್ಯಾಪ್ ಮಾಡಿ ಯವತಿಗೆ ಮತ್ತು ಬರಿಸಿ ಅತ್ಯಾಚಾರ ಮಾಡಿದ್ದಾರೆಂಬ ಆರೋಪ.
ಬಳ್ಳಾರಿಯಿಂದ ಕಿಡ್ನ್ಯಾಪ್ ಮಾಡಿಕೊಂಡು ಬಂದಿದ್ದ ಕಿಡಗೇಡಿಗಳು ಕೊಪ್ಪಳ ಜಿಲ್ಲೆಯ ಸಣಾಪುರ ಬಳಿಯ ಅಂತರಾಳ ಕೆಫೆ ಎಂಬ ಹೋಟೆಲ್ ನಲ್ಲಿ  ಅತ್ಯಾಚಾರ ಮಾಡಿದ್ದಾರಂತೆ.
ಕೌಲ್ ಬಜಾರ್ ನ ನವೀನ್, ಸಾಕೀಬ್,ತನು ಸೇರಿದಂತೆ ನಾಲ್ವರ ವಿರುದ್ದ  ನಗರದ ಮಹಿಳಾ ಠಾಣೆಯಲ್ಲಿ ಅತ್ಯಾಚಾರಕ್ಕೆ ಒಳಗಾದ ವಿದ್ಯಾರ್ಥಿನಿಯೇ ರೇಪ್ ಕೇಸ್ ದಾಖಲಿಸಿದ್ದಾಳೆ.