ಕಿಡಿಗೇಡಿಗಳ ಬಂಧನಕ್ಕೆ ಆಗ್ರಹ

ಭಾಲ್ಕಿ:ನ.1:ಗಡಿ ಜಿಲ್ಲೆಯ ಬೀದರ್‍ನ ಬಸ್‍ಗೆ ಬೆಂಕಿ ಹಚ್ಚಿ ಉದ್ಧಟತನ ತೋರಿದ ಕಿಡಿಗೇಡಿಗಳನ್ನು ಬಂಧಿಸುವಂತೆ ತಾಲೂಕು ಕರವೇ ಅಧ್ಯಕ್ಷ ಗಣೇಶ ಪಾಟೀಲ್ ಒತ್ತಾಯಿಸಿದ್ದಾರೆ. ಭಾಲ್ಕಿಯಿಂದ ಮಹರಾಷ್ಟ್ರದ ಪುಣೆಗೆ ಹೊರಟಿಸಿದ್ದ ಕೆ.ಎ.38 ಎಫ್.1201 ಸಂಖ್ಯೆಯ ಬಸ್‍ನ್ನು ಕಿಡಿಗೇಡಿಗಳು ಮಹಾರಾಷ್ಟ್ರದ ಉಮರ್ಗಾ ಸಮೀಪ ತಡೆದು ಪ್ರಯಾಣಿಕರನ್ನು ಕೆಳಗಿಳಿಸಿ ಬೆಂಕಿ ಹಚ್ಚಿ ಗಡಿಯಲ್ಲಿ ಶಾಂತಿ ಕದಡುವ ಪ್ರಯತ್ನ ಮಾಡಿದ್ದಾರೆ. ಇಂತಹ ಘಟನೆಗಳು ಪದೇಪದೇ ನಡೆಯುತ್ತಲೇ ಇವೆ. ಕೂಡಲೇ ಅಲ್ಲಿನ ಸರಕಾರ ಕಿಡಿಗೇಡಿಗಳನ್ನು ಬಂಧಿಸಿ ಸೂಕ್ತ ಕ್ರಮ ಜರುಗಿಸಬೇಕು. ಇಲ್ಲದಿದ್ದರೇ ಬೀದಿಗಿಳಿದು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.