ಕಿಡಿಗೇಡಿಗಳಿಗೆ ಗಡಿಪಾರು ಮಾಡಲು ಆಗ್ರಹ

ವಾಡಿ:ನ.12: ಸಾಮಾಜಿಕ ಅನಿಷ್ಟಗಳ ವಿರುದ್ದ ಸಮರ ಸಾರಿದ ಮಹಾನ ಮಾನವತಾವಾದಿ, ಬಸವೇಶ್ವರ್ ಮೂರ್ತಿಯನ್ನು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ಬೀಜಗುಪ್ಪ್ ಗ್ರಾಮದಲ್ಲಿ ಕೀಡಿಗೇಡಿಗಳು ವಿರೋಪಗೊಳಿಸಿರುವುದನ್ನು ಖಂಡಿಸಿ, ವೀರಶೈವ ಲಿಂಗಾಯತ ಯುವ ವೇದಿಕೆ ವತಿಯಿಂದ ಪ್ರತಿಭಟಿಸಿ ಆರೋಪಿಗಳನ್ನು ಗಡಿಪಾರು ಮಾಡಲು ಆಗ್ರಹಿಸಲಾಯಿತ್ತು.

ಪಟ್ಟಣ ಸಮೀಪದ ನಾಲವಾರ ಗ್ರಾಮದ ರಾಷ್ಟ್ರಿಯ ಹೆದ್ದಾರಿ 150ರಲ್ಲಿ ರಸ್ತೆ ತಡೆದು, ಅಖಿಲ ಭಾರತ ಮಹಾಸಭಾ ಮತ್ತು ವೀರಶೈವ್ ಯುವ್ ಘಟಕ್ ನೇತೃತ್ವದಲ್ಲಿ ಜರುಗಿದ ಪ್ರತಿಭಟನೆಯಲ್ಲಿ ದುಷ್ಕøತ್ಯ ಎಸಗಿದವರ ವಿರುದ್ದ ಕಠಿಣ ಕ್ರಮಕ್ಕಾಗಿ ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಕಾಂಗ್ರೇಸ್ ಮುಖಂಡ ವೀರಣ್ಣಗೌಡ ಪರಸರೆಡ್ಡಿ, ಬಿಜೆಪಿಯ ತಾಲ್ಲೂಕ ಯುವ ಘಟಕದ ಅಧ್ಯಕ್ಷ ಶಿವಕುಮಾರ ಸುಣಗಾರ್ ಮಾತನಾಡಿದರು. ಈ ಸಂದರ್ಭದಲ್ಲಿ ವೀರಶೈವ ಸಮಾಜದ ತಾಲೂಕ ಅಧ್ಯಕ್ಷ ಲಿಂಗಾರೆಡ್ಡಿಗೌಡ ಬಾಸರೆಡ್ಡಿ, ಭೀಮರೆಡ್ಡಿಗೌಡ ಕುರಾಳ, ಗುರುಗೌಡ ಇಟಗಿ, ಶಿವರೆಡ್ಡಿಗೌಡ್ ಸೋಮರೆಡ್ಡಿ, ಶಿವರಾಜ ತುನ್ನೂರ್, ಈರಣ್ಣ ಮಲ್ಕಂಡಿ, ಪ್ರದೀಪಗೌಡ್ ಮಾಲೀಪಾಟೀಲ್, ಶಾಂತಕುಮಾರ ಎಣ್ಣಿ, ವೆಂಕನಗೌಡ ಸಂಕನೂರ್, ಮಲ್ಲಿನಾಥ ಸನ್ನತಿ, ಸೋಮಶೇಖರ ಲಾಡ್ಲಾಪೂರ್, ನಾಗರಾಜ್ ಕುಲ್ಕುಂದಿ, ವಿಕ್ರಂಪಾಟೀಲ್ ಮಾರಡಗಿ, ಚಂದ್ರಶೇಖರ ಲೇವಡಿ, ಶರಣು ವಾರದ್, ಈರಣ್ಣಗೌಡ ಬೀರಾಳ್, ಸಾಬಣ್ಣ ಜಾಲಗಾರ್, ವಸಂತ ಹಲಕರ್ಟಿ, ರವಿಕುಮಾರ ಸೇರಿದಂತೆ ಅನೇಕರು ಇದ್ದರು.