ಕಿಡಿಗೇಡಿಗಳಿಂದ 20-30 ಎಕರೆ ಅರಣ್ಯ ಪ್ರದೇಶ ಬೆಂಕಿಗಾಹುತಿ

ಕೆ.ಆರ್.ಪೇಟೆ:ಏ:04: ಕನಿಷ್ಟ ಸಮಾನ್ಯ ಪ್ರಜ್ಞೆಯೂ ಇಲ್ಲದ ಕಿಡಿಗೇಡಿಗಳಿಂದ 25-30 ಎಕರೆಯಷ್ಟು ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಿರುವ ಘಟನೆ ತಾಲ್ಲೂಕಿನಲ್ಲಿ ನಡೆದಿದೆ.
ತಾಲ್ಲೂಕಿನ ಕತ್ತರಘಟ್ಟ ಗ್ರಾಮದ ಬಳಿ ಇರುವ ಬಿಬಿ ಕಾವಲು ಸಮೀಪದಲ್ಲಿರುವ ಅರಣ್ಯ ಪ್ರದೇಶಕ್ಕೆ ಶುಕ್ರವಾರ ರಾತ್ರಿ ಏಳು ಗಂಟೆಯ ವೇಳೆಯಲ್ಲಿ ಸ್ಥಳೀಯರು ಅಥವಾ ಎಮ್ಮೆದನ ಮೇಯಿಸುವ ಜನರುಗಳು ಒಣಗಿರುವ ಎಲೆಗಳಿಗೆ ಬೆಂಕಿಹಾಕಿ ಮನೆಕಡೆಗೆ ಬಂದಿದ್ದಾರೆ ಬೆಂಕಿ ಬೇಸಿಗೆ ಸಮಯವಾದ್ದರಿಂದ ಬೆಂಕಿ ಹೊತ್ತು ಉರಿಯಲಾರಂಭಿಸಿದ್ದು ಕೂಡಲೇ ಪಟ್ಟಣದ ಅಗ್ನಿಶಾಮಕ ಠಾಣೇಗೆ ಕರೆಮಾಡಿ ವಿಷಯ ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಅಗ್ನಿಶಾಮಕ ಠಾಣಾಧಿಕಾರಿ ಶಿವಣ್ಣ, ಸೋಮಶೇಖರಗೌಡ, ಪ್ರಮೋದ್, ಕುಮಾರಸ್ವಾಮಿ, ಶ್ರೀಕಾಂತ್ ನೇತೃತ್ವದ ತಂಡ ಸತತ ಮೂರು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಯಿತು.
ಕಿಡಿಗೇಡಿಗಳಿಂದಾಗಿ ಸುಮಾರು 30 ಎಕರೆಯಷ್ಟು ಆರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಿರುವುದು ವಿಪರ್ಯಾಸ.