ಕಿಡಿಗೇಡಿಗಳಿಂದ ತೋಟದ ಮನೆಗೆ ಬೆಂಕಿ


ಹಿರಿಯೂರು.ನ.೨೧ ತಾಲ್ಲೂಕಿನ ಕೂನಿಕೆರೆ ಗ್ರಾಮಪಂಚಾಯ್ತಿ ವ್ಯಾಪ್ತಿಯ ಸರ್ವೆ ನಂ. ೫೫ರಲ್ಲಿರುವ ಮುತ್ತುಸ್ವಾಮಿ ಮತ್ತು ನಿವೃತ್ತ ಯೋಧ ಸುಬ್ರಮಣ ಎಂಬುವರ ತೋಟದ ಮನೆಗೆ ಯಾರೋ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದು ಬೋರ್ ಕೇಬಲ್ ವೈರ್, ಕಾಯಿ ಕೊಬ್ಬರಿ, ಫುಡ್, ಮತ್ತಿತರೆ ಪರಿಕರಗಳು ಸುಟ್ಟು ಹೋಗಿವೆ ಎಂದು ತೋಟದ ಮಾಲೀಕರು ಪತ್ರಿಕೆಗೆ ತಿಳಿಸಿದ್ದಾರೆ. ತೋಟದಲ್ಲಿ ಸುಮಾರು ಒಂದು ಸಾವಿರ ಅಡಿಕೆ ಸಸಿಗಳನ್ನು ಹಾಕಿದ್ದು ಕಳೆದ ಸುಮಾರು ಒಂದೆರೆಡು ತಿಂಗಳಿಂದ ಸುಮಾರು ನಾಲ್ಕು ಬಾರಿ ತಮ್ಮ ತೋಟದಲ್ಲಿ ಹಾಕಿರುವ ಅಡಿಕೆ ಸಸಿಗಳನ್ನು ಕಡಿದು ಹಾಕಿದ್ದಾರೆ, ಗಿಡಗಳನ್ನು ಕಡಿಯುವುದು ಪೈಪ್ ಲೈನ್ ಒಡೆಯುವುದು ನಮಗೆ ನಷ್ಟಮಾಡುವುದನ್ನು ಯಾರೋ ದುಷ್ಕರ್ಮಿಗಳು ಪದೇ ಪದೇ ಮಾಡುತ್ತಿದ್ದಾರೆ ಈ ಬಗ್ಗೆ ಪೊಲೀಸರಿಗೂ ದೂರು ನೀಡಿದ್ದೇವೆ ಎಂದು ತಿಳಿಸಿದ್ದು ದಯವಿಟ್ಟು ಇಂತಹ ದುಷ್ಕರ್ಮಿಗಳು ಯಾರೆಂದು ಪತ್ತೆ ಹಚ್ಚಿ ನಮಗೆ ಬದುಕಲು ಬಿಡದೆ ಪದೇ ಪದೇ ಅನ್ಯಾಯ ವೆಸಗುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.