
ಲಿಂಗಸುಗೂರ,ನ.೧೨- ಲಿಂಗಸುಗೂರ ತಾಲ್ಲೂಕಿನ ಹಟ್ಟಿ ವ್ಯಾಪ್ತಿಯಲ್ಲಿ ಬರುವ ಗೆಜ್ಜಲಗಟ್ಟಾ ಜಿಲ್ಲಾ ಪಂಚಾಯತ್ ಗೆ ಒಳಪಡುವ ಹಿರೆ ಹೆಸರೂರ ಗ್ರಾಮದಲ್ಲಿ ಹಾಡುಹಗಲೇ ಕಿಡಿಗೇಡಿಗಳು ಅಂಬೇಡ್ಕರ್ ರವರ ಭಾವಚಿತ್ರ ಇರುವ ಕಟ್ಟೆಯನ್ನು ಸಂಪೂರ್ಣವಾಗಿ ದ್ವಂಸ ಮಾಡಿದ ಪರಿಣಾಮವಾಗಿ ದಲಿತ ಜನಾಂಗದ ಜನರಿಗೆ ಭಯ ಉಂಟಾಗಿದೆ ಎಂದು ದಲಿತ ಸಂಘಟನೆ ಸಾಮಾಜಿಕ ನ್ಯಾಯಕ್ಕಾಗಿ ಚಳುವಳಿ ಮುಖಂಡರಾದ ಶಿವರೆಡ್ಡಿ ಇವರು ಕೂಡಲೆ ಕಿಡಿಗೇಡಿಗಳನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.
ಲಿಂಗಸುಗೂರ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಇತ್ತಿಚೆಗೆ ಒಂದಿಲ್ಲೊಂದು ರೀತಿಯಲ್ಲಿ ದಲಿತರ ಮೇಲೆ ಜಾತಿ ನಿಂದನೆ ಮತ್ತು ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ ಮಾಡುವುದು ಸರ್ವೇ ಸಾಮಾನ್ಯವಾಗಿದೆ ಇದರಿಂದಾಗಿ ಕ್ಷೇತ್ರದಲ್ಲಿ ದಲಿತ ಜನಾಂಗಕ್ಕೆ ರಕ್ಷಣೆ ಇಲ್ಲದಂತಾಗಿದೆ ಎಂದು ದಲಿತ ಸಂಘರ್ಷ ಸಮಿತಿ ಸಾಮಾಜಿಕ ನ್ಯಾಯಕ್ಕಾಗಿ ಚಳುವಳಿ ತಾಲೂಕು ಅಧ್ಯಕ್ಷ ರಾಮಣ್ಣ ಹೊನ್ನಳ್ಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ .
ಹಿರೆ ಹೆಸರೂರ ಗ್ರಾಮದಲ್ಲಿ ಹಾಡುಹಗಲೇ ಅಂಬೇಡ್ಕರ್ ಭಾವಚಿತ್ರ ಇರುವ ಕಟ್ಟೆಯನ್ನು ಹೊಡೆಯುವ ಮೂಲಕ ಮನುವಾದಿಗಳು ತಮ್ಮ ಅಟ್ಟಹಾಸ ಮೆರೆದಿದ್ದಾರೆ .ಸಂವಿಧಾನದ ಪಿತಾಮಹ ಡಾ ಅಂಬೇಡ್ಕರ್ ರವರ ವಿಚಾರ ಧಾರೆ ಹಾಗೂ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗೋಣ ಎಂದು ನಮ್ಮ ನಾಯಕರು ಭಾಷಣದ ಮೂಲಕ ಜನರಿಗೆ ಮಂಕುಬೂದಿ ಎರಚಿ ಗ್ರಾಮದಲ್ಲಿ ಸಾಮರಸ್ಯ ಸಾರುವ ದಲಿತಪರ ಚಿಂತಕರು ಮಾಯವಾಗಿದ್ದಾರೆ ಎಂಬುದು ಗ್ರಾಮದ ದಲಿತ ಮುಖಂಡರ ಆರೋಪವಾಗಿದೆ.
ದಲಿತರ ಬಗ್ಗೆ ಚಿಂತನೆ ಉಳ್ಳ ನಾಯಕರು ಕೂಡಲೆ ಎಚ್ಚೆತ್ತುಕೊಂಡು ಈ ಬಗ್ಗೆ ಹೆಚ್ಚಿನ ಗಮನ ಹರಿಸಿ ಅಂಬೇಡ್ಕರ್ ಕಟ್ಟೆಯನ್ನು ಆಕ್ರಮಣಕಾರಿ ರೀತಿಯಲ್ಲಿ ಜಖಂಮಾಡಿದ ದುಷ್ಕರ್ಮಿಗಳನ್ನು ಬಂಧಿಸಿ ತನಿಖೆ ಕೈಗೊಳ್ಳುವಂತೆ ಗ್ರಾಮಸ್ಥರ ಆಗ್ರಹ ಹಿರೆ ಹೆಸರೂರ ಗ್ರಾಮದಲ್ಲಿ ಈಗ ಇರುವ ಅಂಬೇಡ್ಕರ್ ಭಾವಚಿತ್ರ ಇರುವ ಕಟ್ಟೆಯನ್ನು ಪುನಃ ಅದೇ ಸ್ಥಳದಲ್ಲಿ ಸ್ಥಾಪನೆ ಮಾಡಲು ಮುಂದಾಗಬೇಕು ಇಲ್ಲದಿದ್ದರೆ ಹೋರಾಟ ನಡೆಸಲಾಗುವುದು ಎಂದು ಸಾಮಾಜಿಕ ಚಳುವಳಿ ಕಲ್ಯಾಣ ಮಲ್ಲೇಶ್ ಮಂಡಲಗುಡ್ಡ ಹಟ್ಟಿ ಎಚ್ಚರಿಕೆ ನೀಡಿದರು.
ಹಿರೆ ಹೆಸರೂರ ಗ್ರಾಮದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೋಲೀಸ್ ಇಲಾಖೆ ಅಧಿಕಾರಿಗಳು ಮುಂದಾಗಬೇಕು ದಲಿತರಿಗೆ ರಕ್ಷಣೆ ನೀಡಿ ಎಂದು ಶಾಂತಿಯ ವಾತಾವರಣ ನಿರ್ಮಾಣ ಮಾಡಲು ಪೋಲೀಸ್ ಅಧಿಕಾರಿಗಳು ಕೆಲಸ ಮಾಡಬೇಕು ಎಂಬುದು ಗ್ರಾಮಸ್ಥರ ಆಗ್ರಹ ವಾಗಿದೆ.