ಕಿಟ್ ವಿವಿಗೆ ಫೈವ್ ಸ್ಟಾರ್ ರೇಟಿಂಗ್

ಬೆಂಗಳೂರು, ಮೇ ೩- ಪ್ರತಿಷ್ಠಿತ ಕ್ಯೂಎಸ್ ಸ್ಟಾರ್‍ಸ್ ರೇಟಿಂಗ್ಸ್ ಸಿಸ್ಟಮ್‌ನಿಂದ ಫೈವ್ ಸ್ಟಾರ್ಸ್ ರೇಟಿಂಗ್ ಸಾಧಿಸಿದ ಮೊದಲ ಭಾರತೀಯ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಕೆಗೆ ಕೆಐಐಟಿ ಪಾತ್ರವಾಗಿದೆ.
ಕ್ಯೂಎಸ್ ಕ್ವಾಕ್ವೆರೆಲ್ಲಿ ಸೈಮಂಡ್ಸ್ ಲಿಮಿಟೆಡ್‌ನ ವಿಭಾಗವಾದ ಕ್ಯೂಎಸ್ ಇಂಟೆಲಿಜೆನ್ಸ್ ಯುನಿಟ್, ಕಿಟ್ ಅನ್ನು ಫೈವ್ ಸ್ಟಾರ್‍ಸ್ ಸಂಸ್ಥೆಯೆಂದು ಗುರುತಿಸಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ರೆಟಿಂಗ್ ಫಲಿತಾಂಶವನ್ನು ಪ್ರಕಟಿಸಿದೆ. ಇದು ಎಂಟು ವಿಭಾಗಗಳಲ್ಲಿ ಸೂಚಕಗಳಾಗಿದ್ದು, ಈ ರೇಟಿಂಗ್ ಮೂರು ವರ್ಷಗಳವರೆಗೆ ಮಾನ್ಯವಾಗಿರುತ್ತದೆ.
ಕಿಟ್ ವಿವಿಯಲ್ಲಿನ ಬೋಧನೆ, ಉದ್ಯೋಗ, ಶೈಕ್ಷಣಿಕ ಅಭಿವೃದ್ಧಿ, ಅಂತರಾಷ್ಟ್ರೀಕರಣ, ಆನ್‌ಲೈನ್ ಕಲಿಕೆ, ನಾವೀನ್ಯತೆ, ಅಂತರ್ಗತತೆ ಮತ್ತು ಕಂಪ್ಯೂಟರ್ ವಿಜ್ಞಾನ ಮತ್ತು ಎಂಜಿನಿಯರಿಂಗ್ ನಂತಹ ವಿಶೇಷ ಮಾನದಂಡಗಳಂತಹ ಎಂಟು ವಿಭಾಗಗಳಲ್ಲಿ ಪೂರ್ವ ಸ್ಥಾಪಿತವಾದ ಜಾಗತಿಕ ಮಾನದಂಡಗಳ ವಿರುದ್ಧ ವಿಶ್ವದಾದ್ಯಂತದ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಮೌಲ್ಯಮಾಪನ ಮಾಡಿದ್ದು, ಅದರಲ್ಲಿ ಕಿಟ್ ನಾಲ್ಕು ವಿಭಾಗಗಳಲ್ಲಿ ಪರಿಪೂರ್ಣ ಮತ್ತು ಉಳಿದ ವಿಭಾಗಗಳಲ್ಲಿ ನಾಲ್ಕು ಅಂಕಗಳನ್ನು ಗಳಿಸಿ, ಒಟ್ಟಾರೆ ಐದು ಸ್ಟಾರ್ ರೇಟಿಂಗ್ ಅನ್ನು ಖಚಿತಪಡಿಸಿತು.

ಕಳೆದ ವಾರ ನಡೆದ ೨೦೨೧ರ ಟೈಮ್ಸ್ ಹೈಯರ್ ಎಜುಕೇಶನ್ ಇಂಪ್ಯಾಕ್ಟ್ ಯಾರ್ಕಿಂಗ್ ನಲ್ಲಿ ಕೆಐಐಟಿ ಜಾಗತಿಕವಾಗಿ ೨೦೧+ ಶ್ರೇಣಿಯನ್ನು ಸಾಧಿಸಿದೆ. ಎರಡು ಪ್ರಮುಖ ಜಾಗತಿಕ ವಿಶ್ವವಿದ್ಯಾಲಯದ ಶ್ರೇಯಾಂಕ ಮತ್ತು ರೇಟಿಂಗ್ ವ್ಯಾಯಾಮಗಳಲ್ಲಿ ಪ್ರಭಾವಶಾಲಿ ಸ್ಥಾನಗಳನ್ನು ಹಿಂದಕ್ಕೆ ಪಡೆದಿರುವುದು ಅಂತಾರಾಷ್ಟ್ರೀಯ ಸ್ಥಾನಮಾನವನ್ನು ಪಡೆದಿದೆ. ಇದಕ್ಕೆ ಸರ್ಕಾರವು ಇನ್ಸ್ಟಿಟ್ಯೂಷನ್ ಆಫ್ ಎಮಿನೆನ್ಸ್ ಟ್ಯಾಗ್‌ಗೆ ನೀಡಿದೆ. ಅಲ್ಲದೇ ಭಾರತದ ಕಿಟ್ ವಿವಿಯು ಅವಾರ್ಡ್ಸ್ ಏಷ್ಯಾ ೨೦೨೦ ಯಲ್ಲಿಯೂ ಗೆದ್ದಿದೆ.
ಸಾಧನೆಯ ಬಗ್ಗೆ ಸಂತೋಷವನ್ನು ವ್ಯಕ್ತಪಡಿಸಿದ ಕೆಐಐಟಿ ಮತ್ತು ಕಿಸ್ ಸಂಸ್ಥಾಪಕ ಡಾ.ಅಚ್ಯುತ ಸಮಂತಾ ಮಾತನಾಡಿ, ಕೆಐಐಟಿಯನ್ನು ಅದರ ಶ್ರೇಷ್ಠತೆ ಮತ್ತು ವೈವಿಧ್ಯತೆಯ ಆಧಾರದ ಮೇಲೆ ಫೈವ್ ಸ್ಟಾರ್ ಸಂಸ್ಥೆಯಾಗಿ ಗುರುತಿಸಲಾಗಿದೆ ಎಂದು ಕ್ಯೂಎಸ್ ಇಂಟೆಲಿಜೆನ್ಸ್ ಯುನಿಟ್, ಕ್ಯೂಎಸ್ ಇಂಟೆಲಿಜೆನ್ಸ್ ಯುನಿಟ್ ತಿಳಿಸಿದೆ. ಸಂಸ್ಥೆಯು ೨೦೦೪ ರಿಂದಲೂ ಕ್ಯೂಎಸ್ ವಲ್ಡ್ ನಲ್ಲಿ ಪಾಲ್ಗೊಳ್ಳುತ್ತ ಬಂದಿದೆ.
ಈ ಸ್ಥಾನಮಾನವನ್ನು ಸಂಸ್ಥೆಯು ಹಿಂಗೆ ಮುಂದುವರೆಸಿಕೊಂಡು ಹೋಗುತ್ತದೆ ಎಂದು ತಿಳಿಸಿದ್ದಾರೆ.