ಕಿಟಕಿ ಮುರಿದು ಚಿನ್ನಬೆಳ್ಳಿ ಕಳವು

ವಿಜಯಪುರ,ಏ 9: ಬೀಗ ಹಾಕಿದ್ದ ಮನೆಯ ಕಿಟಕಿ ಮುರಿದು ಕಳವು ಮಾಡಿ ಕಳ್ಳರು ಪರಾರಿಯಾಗಿರುವ ಘಟನೆ ವಿಜಯಪುರ ನಗರದ ವಜ್ರ ಹನುಮಾನ ದೇವಸ್ಥಾನದ ಬಳಿ ನಡೆದಿದೆ.
ಕಿಟಕಿ ಮುರಿದು ಮನೆಯಲ್ಲಿದ್ದ 70 ಗ್ರಾಂ ಚಿನ್ನಾಭರಣ ಹಾಗೂ ಬೆಳ್ಳಿ ಆಭರಣ ಕದ್ದು ಕಳ್ಳರು ಪರಾರಿಯಾಗಿದ್ದಾರೆ. ಪ್ರಮಿಳಾ ಅರಮನೆ ಎಂಬುವವರಿಗೆ ಸೇರಿದ ಮನೆಯಲ್ಲಿ ಕಳ್ಳತನ ಆಗಿದೆ. ಜಲನಗರ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.