ಕಿಚ್ಚುಗುತ್ತಿ ಮಾರಮ್ಮ ದೇವಾಲಯ ಭಕ್ತರಿಗೆ ಮುಕ್ತ

ಹನೂರು, ಅ.26: ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದ ಹನೂರುತಾಲ್ಲೂಕು ಸುಳವಾಡಿ ವಿಷ ಪ್ರಸಾದದುರಂತ ಪ್ರಕರಣದಕಿಚ್ಚುಗುತ್ತಿ ಮಾರಮ್ಮದೇವಾಲಯಶನಿವಾರ ಮಧ್ಯಾಹ್ನ12.30 ರಿಂದಭಕ್ತರಿಗೆ ಮುಕ್ತವಾಗಿದೆ.
ಸರ್ಕಾರಆದೇಶದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳ ಷರತ್ತಿನ ಮಾರ್ಗಸೂಚಿಯಂತೆಧಾರ್ಮಿಕದತ್ತಿಇಲಾಖೆಯ ಆಗಮಿಕ ಪಂಡಿತರ ನೇತೃತ್ವದಲ್ಲಿಧಾರ್ಮಿಕ ವಿಧಿ ವಿಧಾನಗಳೊಂದಿಗೆ ದೇವಿಯದರ್ಶನಕ್ಕೆ ಭಕ್ತರಿಗೆ ಹಾಗೂ ಸಾರ್ವಜನಿಕರಿಗೆ ಅವಕಾಶ ಕಲ್ಪಿಸುವ ವ್ಯವಸ್ಥೆಯನ್ನು ಕೈಗೊಳ್ಳಲಾಗಿತ್ತು.
ದೇವಾಲಯ ಪುನಾರ್‍ಆರಂಭದ ಹಿನ್ನಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ವಿವಿಧಧಾರ್ಮಿಕ ಪೂಜಾ ಕೈಂಕರ್ಯಗಳನ್ನು ಕೈಗೊಳ್ಳಲಾಗಿದ್ದು, ಶನಿವಾರಕುಂಭಾಭಿಷೇಕ, ಕುಂಡಲ, ಮಹಾಮಂಗಳಾರತಿ ಆದ ಬಳಿಕ ಮಧ್ಯಾಹ್ನ12.30 ನಂತರದೇವರದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.
2018 ರಲ್ಲಿ ದೇವಾಸ್ಥಾನದಗೋಪುರ ನಿರ್ಮಾಣ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಸಂಭವಿಸಿದ ವಿಷ ಪ್ರಸಾದದುರಂತ ಪ್ರಕರಣದಲ್ಲಿ17 ಜನರು ಮೃತಪಟ್ಟಿದ್ದು, ನೂರಕ್ಕೂ ಹೆಚ್ಚು ಜನಅಸ್ವಸ್ಥಗೊಂಡಿದ್ದರು.
ಅಂದಿನಿಂದಇಲ್ಲಿಯವರೆಗೂದೇವಾಲಯವನ್ನು ಮುಚ್ಚಲಾಗಿದ್ದು, ಸರ್ಕಾರತನ್ನ ವಶಕ್ಕೆ ಪಡೆದು ಭಕ್ತರು, ಹಾಗೂ ಸಾರ್ವಜನಿಕರಒತ್ತಾಯದ ಮೇರಗೆದೇವಾಲಯವನ್ನು ಪುನರಾಂಭಿಸುವ ಬಗ್ಗೆ ಕ್ರಮಕೈಗೊಳ್ಳಲಾಗಿತ್ತು.ಬರೊಬ್ಬರಿ 22 ತಿಂಗಳುಗಳ ನಂತರದೇವಾಲಯದ ಬಾಗಿಲನ್ನುತೆರೆದುದೇವಿಯದರ್ಶನವನ್ನು ಭಕ್ತರು ಪಡೆಯಲು ಅನುವು ಮಾಡಿಕೊಡಲಾಗಿದೆ.
ದೇಗುಲ ಮತ್ತೆ ಪ್ರಾರಂಭವಾಗುತ್ತಿರುವ ಹಿನ್ನಲೆಯಲ್ಲಿ ಶಾಸಕ ಆರ್.ನರೇಂದ್ರ ಹಾಗೂ ಕುಟುಂಬಸ್ಥರುದೇವಾಲಯಕ್ಕೆ ಬೇಟಿ ನೀಡಿದೇವರದರ್ಶನ ಪಡೆದರು.
ಜಿಲ್ಲಾಧಿಕಾರಿಡಾ.ಎಂ.ಆರ್.ರವಿಯವರುದೇವಾಲಯಕ್ಕೆ ಬೇಟಿ ನೀಡಿಮುಂಜಾಗ್ರತ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿ ದೇವರದರ್ಶನ ಪಡೆದರು.
ನಂತರ ಮಾತನಾಡಿದ ಜಿಲ್ಲಾಧಿಕಾರಿಗಳು 22 ತಿಂಗಳುಗಳ ನಂತರಕಿಚ್ಚುಗುತ್ತಿ ಮಾರಮ್ಮದೇವಾಲಯಪುನಾರಂಭವಾಗುತ್ತಿರುವುದು ಸಂತಸತಂದಿದೆ.ಹಳೆಯ ಕಹಿ ಘಟನೆಗಳನ್ನು ಮರೆಯಬೇಕಾಗಿದೆ.ಕಳೆದ ನಾಲ್ಕು ದಿನಗಳಿಂದ ದೇವಾಸ್ಥಾನದಲ್ಲಿ ಆಗಮಿಕ ಪಂಡಿತರ ನೇತೃತ್ವದಲ್ಲಿಧಾರ್ಮಿಕ ಪೂಜಾ ಕೈಂಕರ್ಯಗಳನ್ನು ವಿಧಿ ವಿಧಾನಗಳೊಂದಿಗೆ ಕೈಗೊಳ್ಳಲಾಗಿದೆ.ಕಿಚ್‍ಗುತ್ ಮಾರಮ್ಮಜಿಲ್ಲೆಯಜನತೆಗೆ ಮುಂದಿನ ದಿನಗಳಲ್ಲಿ ಒಳಿತನ್ನು ಮಾಡಲಿ ಎಂದುದೇವರಲ್ಲಿ ಪ್ರಾರ್ಥಿಸುತ್ತೇನೆ. ಕೋವಿಡ್ 19 ನಿಯಮಗಳನ್ನು ಪಾಲಿಸುವುದರಜೊತೆಗೆದೇವಾಲಯದಲ್ಲಿ ವಿಶೇಷ ಪೂಜೆ ಹಾಗೂ ಸೇವೆಗಳನ್ನು ನಿರ್ಭಂಧಿಸಲಾಗಿದೆ.ದೇವಾಲಯದಲ್ಲಿ ಬೆಳಿಗ್ಗೆ 7 ರಿಂದ 9 ಗಂಟೆತನಕ ಈ ಹಿಂದೆ ನಡೆದು ಬಂದಿರುವಪ್ರಸಾದ (ಹೂವ) ಕೇಳುವ ಪದ್ಧತಿಯನ್ನುನಿರ್ಭಂಧಿಸಲಾಗಿದೆ.ತೀರ್ಥ ಪ್ರಸಾದ, ಪರ, ಅನ್ನಸಂತರ್ಪಣೆಯನ್ನುತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ತಮಿಳುನಾಡಿನಿಂದ ಬರುವ ಭಕ್ತರನ್ನು ನಿರ್ಭಂಧಿಸಲಾಗಿದೆಎಂದರು.