ಕಿಚ್ಚನ ಮಾತಿಗೂ ಕಿವಿಗೊಡದ ನಿರ್ದೇಶಕ

“ಪ್ರಪಂಚದಲ್ಲಿರುವ ಎಲ್ಲಾ ಜಾತಿ ಧರ್ಮಕ್ಕೂ ಪ್ರೀತಿ ಇದೆ. ಆದರೆ ಪ್ರೀತಿಗೆ ಯಾವುದೇ ಜಾತಿ ಧರ್ಮ ಇಲ್ಲ..”  ಇಂತಹದೊಂದು ಸಂದೇಶಾತ್ಮಕ ತಿರುಳು ಹೊಂದಿರುವ “ಉಸಿರೇ ಉಸಿರೇ” ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ.

ಕಿಚ್ಚ ಸುದೀಪ್ ಟ್ರೈಲರ್ ಬಿಡುಗಡೆ ಮಾಡಿ, ಚಿತ್ರದಲ್ಲಿ ಹಿರಿ-ಕಿರಿ ಕಲಾವಿದರ ದೊಡ್ಡ ದಂಡೇ ಚಿತ್ರದಲ್ಲಿದೆ. ಇದುವರೆಗೂ ನಾಯಕ ರಾಜೀವ್ ನಟಿಸಿದ ಚಿತ್ರಕ್ಕಿಂತ ಈ ಚಿತ್ರದಲ್ಲಿ ನಟ ಎನ್ನುವುದನ್ನು ನಿರೂಪಿಸಿದ್ದಾರೆ. ಸದ್ಯದಲ್ಲಿಯೇ ಚಿತ್ರ ತೆರೆಗೆ ಬರಲಿದೆ. ಒಳ್ಳೆಯ ಕಂಟೆಂಟ್ ಇದೆ. ತುಣುಕು ನೋಡಿದ್ದೇನೆ. ಚಿತ್ರದ ಕಂಟೆಂಟ್ ಬಗ್ಗೆ ನಿರ್ದೇಶಕರು ಇನ್ನಷ್ಟು ಮಾಹಿತಿ ನೀಡಬಹುದಾಗಿತ್ತು ಎಂದು ಪದೇ ಪದೇ ಸೂಚಿಸಿದರೂ ನಿರ್ದೇಶಕ ವಿಜಯ್ ಮಾಹಿತಿ ಹಂಚಿಕೊಳ್ಳುವ ಗೋಜಿಗೆ ಹೋಗಲಿಲ್ಲ.

ಸುದೀಪ್ ಸರ್ ವೇದಿಕೆ ಮೇಲೆ ಇರುವುದರಿಂದ ಮಾತೇ ಬರುತ್ತಿಲ್ಲ. ಬದಲಾಗಿ ಕೈ ಕಾಲು ನಡುಗುತ್ತಿದೆ ಎಂದು ಮೈಕ್ ತೆಗೆದಕೊಂಡಷ್ಟೇ ವೇಗದಲ್ಲಿ ವಾಪಸ್ ನೀಡಿದರು ನಿರ್ದೇಶಕ ವಿಜಯ್.

ನಾಯಕ ರಾಜೀವ್ ಹನು ಮಾತನಾಡಿ, ನನ್ನ ಗಾಡ್‍ಫಾದರ್ ಸುದೀಪ್ ಅಣ್ಣ, ಸಹಕಾರ ಮರೆಯಲು ಆಗಲ್ಲ ಎಂದರೆ ನಾಯಕಿ ಶ್ರೀಜಿತಾ ಘೋಷ್, ಒಳ್ಳೆಯ ಪಾತ್ರ ಸದ್ಯದಲ್ಲಿಯೇ ಕನ್ನಡ ಕಲಿಯುವೆ ಎಂದರು.

ತೆಲಗು ನಟ ಆಲಿ, ಚಿತ್ರದಲ್ಲಿ ಬ್ರಹ್ಮಾನಂದಂ, ಸಾಧುಕೋಕಿಲ ಹಾಗೂ ಮಂಜು ಪಾವಗಡ ಅವರ ಕಾಂಬಿನೇಶನ್ ನಲ್ಲಿ ಹಾಸ್ಯ ಸನಿವೇಶಗಳು ಚೆನ್ನಾಗಿ ಬಂದಿದೆ ಎಂದು ಹೇಳಿದರು

ನಿರ್ಮಾಪಕ ಪ್ರದೀಪ್ ಯಾದವ್, ಮೊದಲ ಬಾರಿಗೆ ಕನ್ನಡದಲ್ಲಿ ತೆಲುಗು ಕಲಾವಿದರಾದ ಬ್ರಹ್ಮಾನಂದಂ ಹಾಗೂ ಅಲಿ ಒಟ್ಟಾಗಿ ಅಭಿನಯಿಸಿದ್ದಾರೆ. ದೇವರಾಜ್, ತಾರಾ, ಸುಚೇಂದ್ರ ಪ್ರಸಾದ್, ಪಾವಗಡ ಮಂಜು, ಶೈನಿಂಗ್ ಸೀತರಾಮ್ ಮುಂತಾದವರು ಅಭಿನಯಿಸಿದ್ದಾರೆ ಎಂದರು