
ಬೆಂಗಳೂರು,ಸೆ.೨-ಕನ್ನಡ ಚಿತ್ರರಂಗದ ಖ್ಯಾತ ನಟ ಕಿಚ್ಚ ಸುದೀಪ್ ಅವರಿಗೆ ಇಂದು ೫೦ನೇ ಹುಟ್ಟುಹಬ್ಬದ ಸಂಭ್ರಮ. ಈ ಹಿನ್ನೆಲೆಯಲ್ಲಿ ನಿನ್ನೆ ಮಧ್ಯರಾತ್ರಿಯಿಂದಲೇ ಸಂಭ್ರಮ ಮುಗಿಲು ಮುಟ್ಟಿದೆ.
ಮೈಸೂರು ರಸ್ತೆಯ ನಂದಿ ಲಿಂಕ್ ಮೈದಾದನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಹಸ್ರಾರು ಅಭಿಮಾನಿಗಳ ಸಮ್ಮುಖದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಸುದೀಪ್ ಇಂದು ಬೆಳಗ್ಗೆ ಇಂದಲೇ ಜೆಪಿ ನಗರದ ನಿವಾಸದಲ್ಲಿ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿದರು
ಸುದೀಪ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಆರ್.ಚಂದ್ರು ನಿರ್ಮಾಣದಲ್ಲಿ ಹೊಸ ಚಿತ್ರ ಪ್ರಕಟವಾಗಿದೆ. ಇದೇ ವೇಳೆ ಕೆಆರ್‌ಜೆ ಸ್ಟುಡಿಯೋ ೧೦ ವರ್ಷದ ಬಳಿಕ ನಟ ಕಿಚ್ಚ ಸುದೀಪ್ ಅವರನ್ನು ಕೆಕೆ ಚಿತ್ರದ ಮೂಲಕ ನಿರ್ದೇಶನಕ್ಕೆ ಕರೆತಂದಿದೆ ಇದರ ಜೊತೆಗೆ ಬಹುನಿರೀಕ್ಷಿತ ಚಿತ್ರ “ಮ್ಯಾಕ್’ ಚಿತ್ರ ಶೀರ್ಷಿಕೆ ಅನಾವರಣ ಗೊಂಡಿದೆ.
ಈ ಮೂಲಕ ಅಭಿಮಾನಿಗಳಿಗೆ ನಟ ಕಿಚ್ಚ ಸುದೀಪ್ ಹಲವು ಚಿತ್ರಗಳನ್ನು ಪ್ರಕಟಿಸುವ ಮೂಲಕ ಒಂದರ ಹಿಂದೆ ಒಂದು ಚಿತ್ರಗಳ ಮೂಲಕ ತೆರೆಯ ಮೇಲೆ ಕಾಣಿಸಿಕೊಳ್ಳುವ ಸೂಚನೆ ನೀಡಿದ್ದಾರೆ.
ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅಭಿಮಾನಿಗಳ ಜೈಕಾರ, ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಪರದಾಡಿದ ಘಟನೆಯೂ ನಡೆಯಿತು. ಹಲವು ವರ್ಷಗಳ ನಂತರ ಸುದೀಪ್ ಅದ್ದೂರಿಯಾಗಿ ಹುಟ್ಟುಹಬ್ಬವನ್ನು ಅಭಿಮಾನಿಗಳ ಜೊತೆ ಆಚರಿಸಿಕೊಳ್ಳುವ ಮೂಲಕ ಅವರ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ.
ಮತ್ತೆ ನಿರ್ದೇಶನಕ್ಕೆ;
೧೦ ವರ್ಷದ ಬಳಿಕ ನಟ ಕಿಚ್ಚ ಸುದೀಪ್ ಕೆಕೆ ಚಿತ್ರಕ್ಕೆ ಆಕ್ಷನ್ ಕಟ್ ಹೇಳುವ ಮೂಲಕ ಮತ್ತೆ ನಿರ್ದೇಶನಕ್ಕೆ ವಾಪಸಾಗಿದ್ದಾರೆ. ಅದರ ಸಂಪೂರ್ಣ ಶ್ರೇಯ ನಿರ್ಮಾಪಕರಾ ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್ ಅವರಿಗೆ ಸಲ್ಲಲಿದೆ. ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಚಿತ್ರದ ಪೋಸ್ಟರ್ ಬಿಡುಗಡೆಯಾಗಿದ್ದು ಗಮನ ಸೆಳೆದಿದೆ.
ಭಾರತೀಯ ಚಿತ್ರರಂಗದ ಖ್ಯಾತ ಕಥೆಗಾರ ವಿಜಯೇಂದ್ರ ಪ್ರಸಾದ್ ಸ್ಕ್ರಿಪ್ಟ್ ಕೆಲಸದಲ್ಲಿ ಭಾಗಿಯಾಗಿರುವ ಆರ್.ಚಂದ್ರು ಅವರ ಗ್ಲೋಬಲ್ ಸಿನಿಮಾದಲ್ಲಿಯೂ ಸಿನಿಮಾ ನಟಿಸುತ್ತಿದ್ದಾರೆ. ಈಗಾಗಲೇ ಆರಂಭವಾಗಿರುವ ಪ್ರೊಡಕ್ಷನ್ ನಂಬರ್ ೪೬ ಚಿತ್ರಕ್ಕೆ ಮ್ಯಾಕ್ ಎಂದು ಹೆಸರಿಡಲಾಗಿದೆ.
ಸುದೀಪ್ ಹುಟ್ಟಿಹಬ್ಬದ ೫೦ನೇ ವರ್ಷದ ಸಂಭ್ರಮದಲ್ಲಿ ಅವರ ಚಿತ್ರಗಳು ಹೆಚ್ಚು ಪ್ರಕಟವಾಗಿರುವುದು ಅಭಿಮಾನಿಗಳಲ್ಲಿ ಸಂತಸಕ್ಕೆ ಕಾರಣವಾಗಿದೆ.
ಚಿತ್ರರಂಗದ ಗಣ್ಯರು ಅಭಿನಂಧನೆ
೫೦ನೇ ಹುಟ್ಟುಹಬ್ಬ ಆಚರಿಸಿಕೊಂಡ ಕಿಚ್ಚ ಸುದೀಪ್ ಅವರಿಗೆ ಚಿತ್ರರಂಗದ ಅನೇಕ ಸ್ನೇಹಿತರು, ಹಿರಿ ಕಿರಿ ಕಲಾವಿದರು ಶುಭ ಹಾರೈಸಿ ನೂರ್ಕಾಲ ಬಾಳಿ ಎಂದು ಹರಸಿದ್ದಾರೆ.
ಅಭಿಮಾನಿಗಳು, ಚಿತ್ರರಂಗದ ಸದಸ್ಯರ ಪ್ರೀತಿ ಅಭಿಮಾನಕ್ಕೆ ಧನ್ಯವಾದ ಹೇಳಿದ್ದಾರೆ.