ಕಿಕ್ಕೇರಿಸಲು ಸಜ್ಜಾದ ಟಕೀಲಾ

ನಿರ್ದೇಶಕ ಮರಡಿಹಳ್ಳಿ ನಾಗಚಂದ್ರ  ನಿರ್ಮಿಸಿರುವ  ‘ಟಕೀಲಾ’ಚಿತ್ರಕ್ಕೆ  ಹಿನ್ನೆಲೆ ಸಂಗೀತ ಪೂರ್ಣಗೊಂಡಿದೆ. ಎಲ್ಲಾ ಅಂದುಕೊಂಡಂತೆ ಆದರೆ ಸೆಪ್ಟಂಬರ್ ನಲ್ಲಿ “ಟಕೀಲಾ” ಕಿಕ್ಕೇರಿಸಲು  ಚಿತ್ರಮಂದಿರಕ್ಕೆ ತೆರೆಗೆ ತರುವ ಉದ್ದೇಶ ನಾಗಚಂದ್ರ‌ ಮತ್ತವರ ತಂಡದ್ದು.

ಬೆಂಗಳೂರು, ದೇವರಾಯನದುರ್ಗ, ತುಮಕೂರು ಸಕಲೇಶಪುರದಲ್ಲಿ ನಡೆದಿದ್ದು ಕೆ. ಪ್ರವೀಣ್ ನಾಯಕ್ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರದ ಕುರಿತು ಮಾಹಿತಿ ಹಂಚಿಕೊಂಡ‌ ನಿರ್ಮಾಪಕ ಮರಡಿಹಳ್ಳಿ ನಾಗಚಂದ್ರ, ಹಿನ್ನೆಲೆ ಸಂಗೀತ ಮುಗಿದಿದ್ದು ರೀ ರೇಕಾರ್ಡಿಂಗ್ ಆರಂಭವಾಗಿದೆ.ಸೆಪ್ಟಂಬರ್ ನಲ್ಲಿ ಚಿತ್ರವನ್ನು ತೆರೆಗೆ ತರುವ ಪ್ರಯತ್ನ‌ ನಡೆಯುತ್ತಿದೆ.ಸ್ನೇಹಿತರ  ಸಹಕಾರದಿಂದ ಚಿತ್ರ ನಿರ್ಮಾಣ ಮಾಡಿದ್ದು ಸರಿ ಸುಮಾರು 1 ಕೋಟಿ ದಾಟಿದೆ ಎಂದರು.

ಆರ್.ತ್ಯಾಗರಾಜ್, ಗಿರೀಶ್ ಕಂಪ್ಲಾಪುರ್, ಕಾರ್ಯಕಾರಿ ನಿರ್ಮಾಪಕರಾಗಿರುವ ಚಿತ್ರದಲ್ಲಿ ಧರ್ಮ ಕೀರ್ತಿರಾಜ್, ನಿಖಿತಾ ಸ್ವಾಮಿ, ಸುನೀಲ್ ಶರ್ಮಾ ನಾಗೇಂದ್ರ ಅರಸ್, ಕೋಟೆ ಪ್ರಭಾಕರ್ ಸುಮನ್, ಜಯರಾಜ್, ಸುಷ್ಮಿತಾ, ಪ್ರವೀಣ್ ನಾಯಕ್, ಕೆವಿನ್, ಅರುಣ್ ಮೇಷ್ಟ್ರು ಮುಂತಾದವರಿದ್ದಾರೆ. ಪಿ.ಕೆ.ಹೆಚ್. ದಾಸ್ ಛಾಯಾಗ್ರಹಣ,ಟಾಪ್‍ಸ್ಟಾರ್ ರೇಣು ಸಂಗೀತ ಹಾಗು ಗಿರೀಶ್ ಕುಮಾರ್ ಸಂಕಲನ ಚಿತ್ರಕ್ಕಿದೆ.