ಕಿಂದಿಕ್ಯಾಂಪ್ ನಲ್ಲಿ ಇವಿಎಂ, ವಿವಿಪ್ಯಾಟ್ ಪ್ರಾತ್ಯಕ್ಷಿಕೆಕಡಿಮೆ ಮತದಾನ ಹೊಂದಿದ ವ್ಯಾಪ್ತಿಯಲ್ಲಿ ಸ್ವೀಪ್ ಕಾರ್ಯಕ್ರಮ


ಸಂಜೆವಾಣಿ ವಾರ್ತೆ
ಕಾರಟಗಿ:ಏ,26- ಯರಡೋಣ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಿಂದಿಕ್ಯಾಂಪ್ (ಐದನೇ ವಾರ್ಡ್) ನಲ್ಲಿ ಇಂದು ತಾಲೂಕು ಸ್ವೀಪ್ ಸಮಿತಿಯಿಂದ ಮತದಾನ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡು ಗ್ರಾಮದ ನಿವಾಸಿಗಳಿಂದ ಅಣಕು ಮತದಾನ ಮಾಡಿಸಲಾಯಿತು.
ಈ ವೇಳೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಶ್ರೀ ರಮೇಶ್ ತಿಮ್ಮಾರೆಡ್ಡಿ ಅವರು ಮಾತನಾಡಿ ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಎಲ್ಲರೂ ಮತಗಟ್ಟೆಗೆ ತೆರಳಿ ಮತ ಚಲಾಯಿಸಿ, ಸಂವಿಧಾನಾತ್ಮಕವಾಗಿ ಮತ ಹಾಕುವುದು ನಮ್ಮ ಕರ್ತವ್ಯ, ಗ್ರಾಮದಲ್ಲಿನ ಪ್ರತಿಯೊಬ್ಬರೂ ಮತದಾನದಿಂದ ಯಾರು ಹೊರಗುಳಿಯಬಾರದು. ನಮ್ಮ ಗ್ರಾಮ ಪಂಚಾಯತಿಯ ಶೇ.100 ರಷ್ಟು ಮತದಾನವಾಗಲು‌ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದರು.
ನಂತರ ತಾ.ಪಂ ಐಇಸಿ ‌ಸಂಯೋಜಕರಾದ ಸೋಮನಾಥ ನಾಯಕ ಅವರು ಇವಿಎಂ, ವಿವಿಪ್ಯಾಟ್ ಪ್ರಾತ್ಯಕ್ಷಿಕೆ ಕುರಿತು ಮಾಹಿತಿ ನೀಡಿ, ಕ್ಯಾಂಪ್ ನ ನಿವಾಸಿಗಳಿಂದ ಅಣಕು ಮತದಾನ ಮಾಡಿಸಿದರು.
ಈ ಸಂದರ್ಭದಲ್ಲಿ ಗ್ರಾ.ಪಂ ಕಾರ್ಯದರ್ಶಿಗಳಾದ ಹನುಮಂತಪ್ಪ, ಸಿಬ್ಬಂದಿಗಳಾದ ಗ್ಯಾನಪ್ಪ ಕುಂಟೋಜಿ, ಹುಸೇನಪ್ಪ, ರಾಮಲಿಂಗಪ್ಪ, ದುರಗಪ್ಪ ಸೇರಿ ಗ್ರಾಮಸ್ಥರು ಇದ್ದರು.