ಕಿಂಗ್ ಖಾನ್ ಕಂಬ್ಯಾಕ್

ಕೊರೊನಾ ಲಾಕ್ಡೌನ್ ಕಾಲದಲ್ಲಿ ಬಾಲಿವುಡ್ ನ ಶೂಟಿಂಗ್ ಗಳು ನಿಂತಿದ್ದರೂ ಇದೀಗ ಮತ್ತೆ ಶೂಟಿಂಗ್ ಆರಂಭಿಸಿದ್ದಾರೆ . ಶಾರುಖ್ ಖಾನ್ ’ಜೀರೋ’ ನಂತರ ಎರಡು ವರ್ಷ ೫ ತಿಂಗಳ ಬಳಿಕ ಶೂಟಿಂಗ್ ಗೆ ವಾಪಸ್ಸು ಬಂದಿದ್ದಾರೆ. ಬುಧವಾರ ಮುಂಬೈಯ ಅಂಧೇರಿಯ ಯಶ್ ರಾಜ್ ಸ್ಟುಡಿಯೋಗೆ ಆಗಮಿಸಿದ್ದರು. ಉದ್ದ ಕೂದಲು ಮತ್ತು ದಾಡಿವಾಲ ಲುಕ್‌ನಲ್ಲಿ ತನ್ನ ಮುಂದಿನ ಫಿಲ್ಮ್ ’ಪಠಾನ್ ಶೂಟಿಂಗಿಗೆ ಆಗಮಿಸಿದ್ದರು.


ಶಾರುಖ್ ಖಾನ್ ಎದುರು ದೀಪಿಕಾ ಪಡುಕೋಣೆ ಹಾಗೂ ವಿಲನ್ ಪಾತ್ರದಲ್ಲಿ ಜಾನ್ ಅಬ್ರಹಾಂ ಇದ್ದಾರೆ. ಜಾನ್ ಅಬ್ರಹಾಂ ಮತ್ತು ದೀಪಿಕಾ ಪಡುಕೋಣೆ ನಾಳೆ ನಾಡದಿನಲ್ಲಿ ಶೂಟಿಂಗ್ ಗೆ ಬರಲಿದ್ದಾರೆ.
ಕಾರಣ , ಜಾನ್ ’ಸತ್ಯಮೇವ ಜಯತೆ-೨’ ರ ಶೂಟಿಂಗ್ ನಲ್ಲಿ ಬಿಜಿ ಇದ್ದರೆ,ಅತ್ತ
ದೀಪಿಕಾ ಗೋವಾದಲ್ಲಿ ಶಕುನ್ ಬತ್ರರ
ಫಿಲ್ಮ್ ನ ಶೂಟಿಂಗ್ ಮುಗಿಸಿದ್ದಷ್ಟೆ.
ಬುಧವಾರ ಕೇವಲ ಶಾರುಖ್ ಖಾನ್ ಶೂಟಿಂಗ್ ಗೆ ಸೇರಿಕೊಂಡದ್ದು ಮಾತ್ರ. ಮುಂದಿನ ಒಂದು ತಿಂಗಳು ಸ್ಟುಡಿಯೋದಲ್ಲಿ ಇಂಡೋರ್ ಶೂಟಿಂಗ್ ಇರುವುದು.
’ ಪಠಾನ್ ಯಶ್ ರಾಜ್ ಬ್ಯಾನರ್ ನ ಫಿಲ್ಮ್ ಆಗಿದೆ .ಇದರ ಜೊತೆ ಶಾರುಖ್ ಖಾನ್ ಸಂಬಂಧ ’ಡರ್ ’ ಫಿಲ್ಮ್’ ನ ಜಮಾನದಿಂದ ಇದೆ.
ದೀಪಿಕಾ ಈ ಬ್ಯಾನರ್ ನಲ್ಲಿ ’ಲಫಂಗೆ ಪರಿಂದೆ’, ಹಾಗೂ ಜಾನ್ ’ಧೂಮ್ ಮತ್ತು ’ಕಾಬುಲ್ ಎಕ್ಸ್ ಪ್ರೆಸ್ ಫಿಲ್ಮ್ ನಲ್ಲಿದ್ದರು. ’ಧೂಮ್ ನಲ್ಲಿ ಜಾನ್ ವಿಲನ್ ಆಗಿದ್ದು ಇದೀಗ ಮತ್ತೊಮ್ಮೆ ನೆಗೆಟಿವ್ ರೋಲ್ ದೊರೆತಿದೆ. ’ಪಠಾನ್ ಅನಂತರ ಶಾರುಖ್ ಖಾನ್ ರಾಜಕುಮಾರ್ ಹಿರಾನಿ ಅವರ ಫಿಲ್ಮ್ ಶುರು ಮಾಡಲಿದ್ದಾರೆ.
ಸಂಜಯದತ್ ಕೂಡಾ ಬಿಜಿ:
ಅತ್ತ ಶಾರುಖ್ ರ ಹೊರತಾಗಿ ಸಂಜಯ್ ದತ್ ಕೂಡ ಫಿಲ್ಮ್ ಶೂಟಿಂಗ್ ಗೆ ಹೈದರಾಬಾದಿಗೆ ಹೋಗಿದ್ದಾರೆ . ಅಲ್ಲಿ ರಾಮೋಜಿ ಫಿಲಂಸಿಟಿಯಲ್ಲಿ ’ ಭುಜ್ ಫಿಲ್ಮ್ ನ ಪ್ಯಾಚ್ ವರ್ಕ್ ಪೂರ್ಣಗೊಳಿಸಲಿದ್ದಾರೆ.
ದೀಪಾವಳಿ ನಂತರ ’ಪೃಥ್ವಿರಾಜ್ ಫಿಲ್ಮ್ ಪೂರ್ಣಗೊಳಿಸುವುದಿತ್ತು. ಆದರೆ ಅಕ್ಷಯ್ ಕುಮಾರ್ ನಡುವೆ ಲಂಡನ್ ನಲ್ಲಿ ’ಬೆಲ್ ಬಾಟಮ್’ ಶೂಟಿಂಗಿಗೆ ತೆರಳಿದ್ದರಿಂದ ತಡ ಆಯ್ತು.
ಸಂಜಯದತ್ತ್ ಗೆ ’ಪೃಥ್ವಿರಾಜ್ ನಲ್ಲಿ ಮಹಮ್ಮದ್ ಘೋರಿಯ ಪಾತ್ರವಿದೆ.