ಕಿಂಗ್ಸ್ ಕಾಳಗದಲ್ಲಿ ಗೆದ್ದು ಬೀಗಿದ ಚೆನ್ನೈ

ಧರ್ಮಶಾಲಾ: ರವೀಂದ್ರ ಜಡೇಜಾ ಅವರ ಆಲ್ರೌಂಡ್ ಪ್ರದರ್ಶನದ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಪಂಜಾಬ್ ವಿರುದ್ಧ 28 ರನ್ಗಳ ಗೆಲುವು ದಾಖಲಿಸಿದೆ. ಈ ಗೆಲುವಿನೊಂದಿಗೆ ಚೆನ್ನೈ ಅಂಕಪಟ್ಟಿಯಲ್ಲಿ ಮೂರನೆ ಸ್ಥಾನಕ್ಕೇರಿದೆ.
ಇಲ್ಲಿನ ಎಚ್ಪಿಸಿಎ ಮೈದಾನದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಮೊದಲ ಬ್ಯಾಟ್ ಮಾಡಿದ ಚೆನ್ನೈ ತಂಡ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 167 ರನ್ ಕಲೆ ಹಾಕಿತು. ಪಂಜಾಬ್ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 139 ರನ್ ಗಳಿಸಿತು.
ಚೆನ್ನೈ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಅಜಿಂಕ್ಯ ರಹಾನೆ 9, ನಾಯಕ ಋತುರಾಜ್ ಮತ್ತು ಡ್ಯಾರಿಲ್ ಮಿಚೆಲ್ ಎರಡನೆ ವಿಕೆಟ್ಗೆ 57 ರನ್ಗಳ ಜತೆಯಾಟ ನೀಡಿದರು. ಈ ವೇಳೆ ದಾಳಿಗಿಳಿದ ರಾಹುಲ್ ಚಾಹರ್ ನಾಯಕ ಋತುರಾಜ್ (32ರನ್) ಮತ್ತು ಶಿವಂ ದುಬೆ (0ರನ್) ಇಬ್ಬರನ್ನು ಪೆವಿಲಿಯನ್ಗೆ ಅಟ್ಟಿದರು. 30 ರನ್ ಗಳಿಸಿದ್ದ ಡ್ಯಾರಿಲ್ ಮಿಚೆಲ್ ಹರ್ಷಲ್ ಪಟೇಲ್ಗೆ ವಿಕೆಟ್ ಒಪ್ಪಿಸಿದರು. ಮೊಯಿನ್ ಅಲಿ 17, ರವೀಂದ್ರ ಜಡೇಜಾ 3 ಬೌಂಡರಿ 2 ಸಿಕ್ಸರ್ ಹೊಡೆದು 43 ರನ್ ಹೊಡೆದರು. ಮಿಚೆಲ್ ಸ್ಯಾಂಟ್ನರ್ 11, ಶಾರ್ದೂಲ್ ಠಾಕೂರ್ 17 ರನ್, ಶೂರ್ದೂಲ್ ಮತ್ತು ಧೋನಿ ಶೂನಕ್ಕೆ ಔಟಾದರು. ಗ್ಲೀಸನ್ ಅಜೇಯ 2 ರನ್ ಗಳಿಸಿದರು.
ಪಂಜಾಬ್ ಪರ ರಾಹುಲ್ ಚಾಹರ್ 23ಕ್ಕೆ3, ಹರ್ಷಲ್ ಪಟೇಲ್ 24ಕ್ಕೆ 3, ಅರ್ಷದೀಪ್ 42ಕ್ಕೆ 2, ಸ್ಯಾಮ್ ಕರ್ರನ್ 34ಕ್ಕೆ 1 ವಿಕೆಟ್ ಪಡೆದರು.
168 ರನ್ ಗುರಿ ಬೆನ್ನತ್ತಿದ ಪಂಜಾಬ್ ಕಿಂಗ್ಸ್ ಆರಂಭಿಕ ಆಘಾತ ಅನುಭವಿಸಿತು. ವೇಗಿ ತುಷಾರ್ ದೇಶಪಾಂಡೆ ಜಾನಿ ಬೇರ್ (7), ರೀಲಿ ರೂಸೌ (0ರನ್) ಅವರನ್ನು ಪೆವಿಲಿಯನ್ಗೆ ಅಟ್ಟಿದರು. ಶಶಾಂಕ್ ಸಿಂಗ್ 27 ರನ್ ಹೊಡೆದು ಸ್ಯಾಂಟ್ನರ್ಗೆ ಬಲಿಯಾದರು. 30 ರನ್ ಗಳಿಸಿದ ಪ್ರಭಾಸಿಮ್ರಾನ್ ಜಡೇಜಾಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ಯಾವ ಬ್ಯಾಟರ್ಗಳು ಹೆಚ್ಚು ಹೊತ್ತು ನಿಲ್ಲಲಿಲ್ಲ. ನಾಯಕ ಸ್ಯಾಮ್ ಕರ್ರನ್ (7ರನ್), ಜಿತೇಶ್ ಶರ್ಮಾ (0ರನ್), ಆಸುತೋಶ್ ಶರ್ಮಾ (3ರನ್), ಹರಫ್ರೀತ್ ಅಜೇಯ 17, ಹರ್ಷಲ್ ಪಟೇಲ್ 12 ರನ್ ಗಳಿಸಿದರು. ರಾಹುಲ್ ಚಾಹರ್ 16ರನ್ ಗಳಿಸಿದರು.
ಚೆನ್ನೈ ಪರ ರವೀಂದ್ರ ಜಡೇಜಾ 20ಕ್ಕೆ 3, ಸಿಮ್ರಾನ್ಜಿತ್ 16ಕ್ಕೆ 2, ತುಷಾರ್ ದೇಶಪಾಂಡೆ 35ಕ್ಕೆ 2, ಸ್ಯಾಂಟ್ನರ್ ಹಾಗೂ ಶಾರ್ದೂಲ್ ತಲಾ 1 ವಿಕೆಟ್ ಪಡೆದರು.