
“ಕಾಸಿನಸರ” ಚಿತ್ರ ಬಿಡುಗಡೆಯಾದ ಎಲ್ಲಾ ಕೇಂದ್ರಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಇದು ಚಿತ್ರತಂಡದ ಮುಖದಲ್ಲಿ ಮಂದಹಾಸ ಮೂಡಿಸಿದೆ.
ಚಿತ್ರದ ಕುರಿತು ಮಾಹಿತಿ ಹಂಚಿಕೊಂಡ ನಿರ್ದೇಶಕ ಎನ್.ಆರ್ ನಂಜುಂಡೇಗೌಡ, ರಾಜ್ಯಾದ್ಯಂತ ಚಿತ್ರಕ್ಕೆಸಿಗುತ್ತಿರುವ ಪ್ರೋತ್ಸಾಹಕ್ಕೆ ಮನಸ್ಸು ತುಂಬಿಬಂದಿದೆ. ಶಿವಮೊಗ್ಗ, ಬೆಂಗಳೂರು ಸೇರಿದಂತೆ ಹಲವೆಡೆ ಕೃಷಿ ವಿಶ್ವವಿದ್ಯಾಲಯ ಮತ್ತು ರೈತ ಸಂಘಗಳು ಚಿತ್ರ ವೀಕ್ಷಿಸಲು ತೋರಿದ ಆಸಕ್ತಿ ಬಗ್ಗೆ ಮೂಕವಿಸ್ಮಿತನಾಗಿದ್ದೇನೆ.ಚಿತ್ರ ಈ ಮಟ್ಟಕ್ಕೆ ಸದ್ದು ಮಾಡಲು ಮಾದ್ಯಮದ ಕೊಡುಗೆ ಕಾರಣ ಎಂದರು.
ನಿರ್ಮಾಪಕ ಈ.ದೊಡ್ಡನಾಗಯ್ಯ, ನಿರೀಕ್ಷೆಗಿಂತ ಹೆಚ್ಚಾಗಿ ಚಿತ್ರ ಮೂಡಿ ಬಂದಿದೆ. ಜನರು ತಾವು ಇರುವ ಕಡೆ ನಗರೀಕರಣ ಮಾಡಬೇಕು ಆದರೆ ನಗರಕ್ಕೆ ಬಂದು ಮತ್ತಷ್ಟು ನಗರೀಕರಣ ಮಾಡುತ್ತಿದ್ದಾರೆ ಇದು ಬೇಸರದ ಸಂಗತಿ. ಚಿತ್ರದ ಮೂಲಕ ಸಾವಯವ ಕೃಷಿ ಸೇರಿದಂತೆ ಹಲವು ವಿಷಯಗಳನ್ನು ಸಂದೇಶಾತ್ಮಕವಾಗಿ ನೀಡಿದ್ದೇವೆ ಎಂದರು.
ರೈತರ ಮಕ್ಕಳು ಸ್ಥಿತಿವಂತರಾಗಿದ್ದರೂ ಅವರಿಗೆ ಹೆಣ್ಣು ಕೊಡಲು ಯಾರೂ ಮುಂದೆ ಬರುತ್ತಿಲ್ಲ. ಇಂತಹ ಅನೇಕ ಘಟನೆಗಳು ಕಣ್ಣಮುಂದೆ ಇವೆ. ಕಾಸಿನ ಸರ ನೋಡಿದ ಮಂದಿ ಎರಡನೇ ಬಂಗಾರದ ಮನುಷ್ಯ ಎಂದು ಬಣ್ಣಿಸುತ್ತಿರುವುದು ಚಿತ್ರ ನಿರ್ಮಾಣ ಮಾಡಿದ್ದಕ್ಕೂ ಸಾರ್ಥಕ ಎಂದರು,
ಪ್ರೊ.ಎಸ್ .ಜಿ ಸಿದ್ದರಾಮಯ್ಯ, ಹೊಡಿ ಬಡಿ ಕಡಿ ಚಿತ್ರಗಳ ನಡುವೆ ಸಂದೇಶಾತ್ಮಕ ಚಿತ್ರ ಬಂದು ಎಲ್ಲರ ಪ್ರಶಂಸೆ ಗಳಿಹಿಸಿದೆ ಎಂದರೆ ನಿರ್ಮಾಣ ವಿನ್ಯಾಸಗಾರ ಬಿ.ರಾಮಮೂರ್ತಿ, ಉತ್ತಮ ವಿಮರ್ಶೆ ಕೊಟ್ಟ ಪ್ರತಿಯೊಬ್ಬರಿಗೂ ಧನ್ಯವಾದಗಳು ಎಂದರು.
ರೈತನ್ನೇ ಮದುವೆ
ನನ್ನ ಹಿಂದಿನ ಚಿತ್ರಗಳ ಸನ್ನಿವೇಶ ನೋಡಿ ತಾಯಿ ಕಣ್ಣು ಕಿವಿ, ಮುಚ್ಚಿಕೊಳ್ಳುತ್ತಿದ್ದರು ಕಾಸಿನ ಸರ ಚಿತ್ರ ನೋಡಿ ಮುಕ್ತಕಂಠದಿಂದ ಪ್ರಶಂಸಿಸಿದ್ಧಾರೆ ಎಂದರು ನಟಿ ಹರ್ಷಿಕಾ ಪೂಣಚ್ಚ.
ತಾಯಿ ಪ್ರತಿಸನ್ನಿವೇಶ ನೋಡು ಮನದುಂಬಿ ಬಂದಿದೆ ಎಂದರು ಇದರ ಜೊತೆಗೆ ನನ್ನ ವಿಷಯದಲ್ಲಿ ಜೀವನ ಪರ್ಯಂತ ನೆನಪಿನಲ್ಲಿ ಇಡಬಹುದಾದ ಚಿತ್ರ ,ರೈತನ್ನೇ ಮದುವೆಯಾಗುವೆ ಎಂದರು.