ಕಾಸರಗೋಡು ಜಿಲ್ಲೆಯಲ್ಲಿ ನಿನ್ನೆ ೧೪೫ ಮಂದಿಗೆ ಕೊರೊನಾ ಪಾಸಿಟಿವ್

ಕಾಸರಗೋಡು, ನ.೨೦- ಜಿಲ್ಲೆಯಲ್ಲಿ ಗುರುವಾರ ೧೪೫ ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಜಿಲ್ಲೆಯಲ್ಲಿ ೧೪೫ ಮಂದಿ ಗುಣಮುಖರಾಗಿದ್ದು, ೧೩೭ ಮಂದಿಗೆ ಸಂಪರ್ಕದಿಂದ ಸೋಂಕು ತಗಲಿದೆ.

ಈಗ ೧೧೪೫ ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಮೂವರು ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಪತ್ತೆಯಾಗಿದೆ.

೬೩೨೬ ಮಂದಿ ನಿಗಾದಲ್ಲಿದ್ದು, ಇದುವರೆಗೆ ಜಿಲ್ಲೆಯಲ್ಲಿ ೧೦೮೧೬ ಮಂದಿಗೆ ಸೋಂಕು ದೃಢಪಟ್ಟಿದ್ದು, ೧೯,೪೫೩ ಮಂದಿ ಗುಣಮುಖರಾಗಿದ್ದಾರೆ.