
ಕಲಬುರಗಿ,ಮೇ2: ಕಾಸಗೋಡು ಕನ್ನಡಿಗರ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಇನ್ನು ಮೀನ ಮೇಷ ಸ್ಥಿತಿಯಲ್ಲಿ ಇರುವುದರಿಂದ ಅಲ್ಲಿನ ಕನ್ನಡಿಗರಿಗೆ ಭಾಷಾ ಅಲ್ಪಸಂಖ್ಯಾತರ ನೆಲೆಯಲ್ಲಿ ಸಿಗಬೇಕಾದ ಸೌಲಭ್ಯಗಳನ್ನು ಒದಗಿಸಿ ಸಂವಿಧಾನದತ್ತ ಹಕ್ಕುಗಳನ್ನು ದೊರಕಿಸಿ ಕೊಡುವಲ್ಲಿ ಗಡಿನಾಡಿನ ಮಾಧ್ಯಮದ ಜವಾಬ್ದಾರಿ ದೊಡ್ಡದು ಎಂದು ಆಕಾಶವಾಣಿಯ ಹಿರಿಯ ಕಾರ್ಯಕ್ರಮ ನಿರ್ವಹಣಾಧಿಕಾರಿ ಮತ್ತು ಕಾಸರಗೋಡಿನ ಕುರಿತಾಗಿ ಅಧ್ಯಯನ ನಡೆಸಿದ ಚಿಂತಕರಾದ ಡಾ. ಸದಾನಂದ ಪೆರ್ಲ ತಿಳಿಸಿದ್ದಾರೆ.
ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ,ಕೊಚ್ಚಿ ಕನ್ನಡ ಸಂಘ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘಗಳ ಜಂಟಿ ಆಶ್ರಯದಲ್ಲಿ ಎರ್ನಾಕುಲಂ ಟೌನ್ ಹಾಲ್ ನಲ್ಲಿ ನಡೆದ ಕೊಚ್ಚಿನ್ ಕನ್ನಡ ಸಂಸ್ಕøತಿ ಉತ್ಸವ ಹಾಗೂ ಸಾಧಕ ಪತ್ರಕರ್ತರಿಗೆ ದತ್ತಿ ನಿಧಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಗಡಿನಾಡಿನಲ್ಲಿ ಕನ್ನಡ ಪತ್ರಿಕೋದ್ಯಮ ವಿಚಾರ ಸಂಕಿರಣದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ.ಪೆರ್ಲ ಅವರು ಮಹಾಜನ ವರದಿಯಲ್ಲಿ ಕಾಸರಗೋಡು ಕರ್ನಾಟಕದಲ್ಲಿ ವಿಲೀನಗೊಳ್ಳಬೇಕೆಂದು ಆಯೋಗ ವರದಿ ಮಾಡಿದ್ದರೂ ಇನ್ನೂ ಮೀನ ಮೇಷ ಎಣಿಸುತ್ತಿರುವುದರಿಂದ ಪ್ರಸಕ್ತ ಸ್ಥಿತಿಯಲ್ಲಿ ಕನಿಷ್ಠ ಕಾಸರಗೋಡಿನ ಕನ್ನಡಿಗರಿಗೆ ಸಂವಿಧಾನದತ್ತವಾದ ಭಾಷಾ ಅಲ್ಪಸಂಖ್ಯಾತರ ನೆಲೆಯಲ್ಲಿ ಸಿಗುವ ಎಲ್ಲಾ ಹಕ್ಕುಗಳನ್ನು ಕೊಡ ಮಾಡುವಲ್ಲಿ ಪತ್ರಿಕೋದ್ಯಮದ ಜವಾಬ್ದಾರಿ ಮಹತ್ವದ್ದು. ಸೌಲಭ್ಯಗಳಿಂದ ವಂಚಿತರಾಗಿರುವ ಕಾಸರಗೋಡಿನ ಕನ್ನಡಿಗರಿಗೆ ಕನ್ನಡವು ಅನ್ನದ ಭಾಷೆ ಉದ್ಯೋಗದ ಭಾಷೆಯಾಗಿ ಪರಿವರ್ತನೆಯಾಗುವುದರಲ್ಲಿ ಕೇರಳ ಸರಕಾರವು ಮಹತ್ವದ ಕೊಡುಗೆಯನ್ನು ನೀಡಬೇಕಾಗಿದೆ ಮಾತ್ರವಲ್ಲದೆ ಭಾಷಾ ಅಲ್ಪಸಂಖ್ಯಾತರಿಗೆ ರಾಜ್ಯ ಸರ್ಕಾರ ನೇಮಿಸಿದ ಪ್ರಭಾಕರನ್ ಆಯೋಗವು ನೀಡಿದ ವರದಿಯಂತೆ ಸೌಲಭ್ಯಗಳನ್ನು ವಿಸ್ತರಿಸಬೇಕು ಕಾಸರಗೋಡು ಕನ್ನಡಿಗರ ಮೂಲಭೂತ ಸೌಲಭ್ಯಗಳು ಮತ್ತು ಕನ್ನಡದ ಅಸ್ಮಿತೆಯನ್ನು ಕಾಪಾಡುವಲ್ಲಿ ಕೇರಳದ ಸರಕಾರ ಮಹತ್ವದ ಯೋಜನೆಗಳನ್ನು ಜಾರಿ ಮಾಡಬೇಕು ಕರ್ನಾಟಕ ಸರಕಾರವು ಹೆಚ್ಚಿನ ಉತ್ತೇಜನ ನೀಡಿದಲ್ಲಿ ಕಾಸರಗೋಡಿನ ಕನ್ನಡಿಗರ ಸ್ಥಿತಿ ಉತ್ತಮವಾಗಿ ಬೆಳೆಯಲು ಸಹಕಾರಿಯಾಗುತ್ತದೆ .ಮಾತ್ರವಲ್ಲದೆ ಸುಧೀರ್ಘ ಇತಿಹಾಸ ಹೊಂದಿದ ಕಾಸರಗೋಡಿನ ಕನ್ನಡದ ಪತ್ರಿಕೋದ್ಯಮ ರಂಗದ ಬಗ್ಗೆ ಪಿ.ಎಚ್. ಡಿ ಅಧ್ಯಯನಕ್ಕೆ ಅವಕಾಶ ಕಲ್ಪಿಸಿ ಇತಿಹಾಸವನ್ನು ದಾಖಲಿಸಲು ಮುಂದಾಗಬೇಕಾಗಿದೆ ಎಂದು ಡಾ. ಪೆರ್ಲ ಹೇಳಿದರು. ವಿಚಾರ ಸಂಕಿರಣದಲ್ಲಿ ಹಿರಿಯ ಪತ್ರಕರ್ತರಾದ ರಾಧಾಕೃಷ್ಣ ಉಳಿಯತ್ತಡ, ಯು.ಕೆ ಕುಮಾರ್‍ನಾಥ್ ಮುಂಬೈಯ ಪತ್ರಿಕೋದ್ಯಮಿ ದಯಾಸಾಗರ ಚೌಟ ಅವರು ಮಾತನಾಡಿದರು. ನಿವೃತ್ತ ಪೆÇ್ರ ಎ ಶ್ರೀನಾಥ್ ಅವರು ಕ
ಸ್ವಾಗತ ಕೋರಿ ನಿರೂಪಿಸಿದರು. ಕಾಸರಗೋಡು ಜಿಲ್ಲಾ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷಅಬ್ದುಲ್ ರಹಿಮಾನ್ ಸುಬ್ಬಯ್ಯ ಕಟ್ಟೆ, ಗಂಗಾಧರತಕ್ಕೆ ಮೂಲೆ ,ಅಖಿಲೇಶ್ ನಗುಮುಗಂ, ಪುರುಷೋತ್ತಮ ಪೆರ್ಲ, ರವಿ ನಾಯಕ, ಪರಿಣಿತ ರವಿ, ಡಾ. ಮಲ್ಲಿಕಾರ್ಜುನ ನಾಸಿ,ಶ್ರೀನಿವಾಸ ರಾವ್,ಶ್ರೀಕಾಂತ್ ಆನವಟ್ಟಿ, ಡಿ.ಶ್ರೀನಿವಾಸ ರಾವ್, ಎಚ್ ಜೆ. ವಜ್ರಾಂಗ ಮತ್ತಿತರರು ಉಪಸ್ಥಿತರಿದ್ದರು.