ಕಾಶ್ಮೀರ ಕಣಿವೆಯಲ್ಲಿ 6514 ಪಂಡಿತರ ವಾಸ: ನಿತ್ಯಾನಂದ ರೈ

ನವದೆಹಲಿ,ಜು.27- ಜಮ್ಮು ಮತ್ತು ಕಾಶ್ಮೀರದಲ್ಲಿ 2022ರಲ್ಲಿ ಯಾವುಬ್ಬ ಕಾಶ್ಮೀರಿ ಪಂಡಿತರು ವಲಸೆ ಹೋಗಿಲ್ಲ ಎಂದು ಕೇಂದ್ರ ಸರ್ಕಾರ ರಾಜ್ಯಸಭೆಯಲ್ಲಿಂದು ಹೇಳಿದ್ದಾರೆ

ದಾಖಲೆಗಳ ಪ್ರಕಾರ, 2022 ರ ಅವಧಿಯಲ್ಲಿ ಕಾಶ್ಮೀರಿ ಕಣಿವೆಯಿಂದ ಯಾವುದೇ ಕಾಶ್ಮೀರಿ ಪಂಡಿತರು ವಲಸೆ ಹೋಗಿಲ್ಲ, ಕಣಿವೆಯಲ್ಲಿ ಇನ್ನೂ ವಾಸಿಸುತ್ತಿರುವ ಕಾಶ್ಮೀರಿ ಪಂಡಿತರ ಸಂಖ್ಯೆ 6,514 ರಷ್ಟು ಇದೆ ಎಂದು ಹೇಳಿದ್ದಾರೆ.

ಒಟ್ಟಾರೆ 6,514 ಮಂದಿ ಕಾಶ್ಮೀರಿ ಪಂಡಿತರ ಪೈಕಿ ಕುಲ್ಗಾಮ್‍ನಲ್ಲಿ 2639 ಮಂದಿ, ಬಡ್ಗಾಮ್‍ನಲ್ಲಿ 1204 ಮಂದಿ ಅತಿ ಹೆಚ್ಚಿನ ಮಂದಿ ವಾಸ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಉಳಿದಂತೆ ಅನಂತ್‍ನಾಗ್ ಜಿಲ್ಲೆಯಲ್ಲಿ 808 ಮಂದಿ, ಪುಲ್ವಾಮದಲ್ಲಿ 579 ಮಂದಿ, ಶೋಫಿಯಾನ್‍ನಲ್ಲಿ 320 ಮಂದಿ, ಶ್ರೀನಗರದಲ್ಲಿ 455 ಮಂದಿ, ಗಂಡೇರ್‍ಬಾಲ್ ನಲ್ಲಿ 130, ಕುಪ್ವಾರದಲ್ಲಿ 19 ಮಂದಿ, ಬಂಡಿಪೋರಾದಲ್ಲಿ 66 ಮಂದಿ, ಹಾಗು ಬಾರಾಮುಲ್ಲಾದಲ್ಲಿ 294 ಮಂದಿ ಕಾಶ್ಮೀರಿ ಪಂಡಿತರು ವಾಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಕಣಿವೆ ಪ್ರದೇಶದಲ್ಲಿ ವಾಸ ಮಾಡುತ್ತಿರುವ ಕಾಶ್ಮೀರಿ ಪಂಡಿತರ ರಕ್ಷಣೆ ಮತ್ತು ಸುರಕ್ಷತೆಗೆ ಕೇಂದ್ರ ಸರ್ಕಾರ ಒತ್ತು ನೀಡಿದ್ದು ಅವರಿಗೆ ಪುನರ್ ವಸತಿ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ವಿವಿರ ನೀಡಿದ್ದಾರೆ.

ಈ ವರ್ಷದಲ್ಲಿ ಯಾವೊಬ್ಬ ಕಾಶ್ಮೀರಿ ಪಂಡಿತರು ಕಣಿವೆ ರಾಜ್ಯ ಬಿಟ್ಟಿಲ್ಲ. ಇರುವ ಮಂದಿಯನ್ನು ಉಳಿಸಿಕೊಂಡು ವಲಸೆ ಹೋಗಿರುವ ಮಂದಿಯನ್ನು ಕರೆತರಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.